Don't Miss!
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ರಾಧಿಕಾ ಕೆಣಕಿದ್ದಕ್ಕೆ ವಿಜಯ್ ರಾಘವೇಂದ್ರ ಗರಂ
'ನಿನಗಾಗಿ', 'ಪ್ರೇಮ ಖೈದಿ' ಮತ್ತು 'ರೋಮಿಯೋ ಜೂಲಿಯೆಟ್' ಅಂತಹ ಚಿತ್ರಗಳಲ್ಲಿ ಒಂದಾಗಿದ್ದ ರಾಧಿಕಾ ಕುಮಾರಸ್ವಾಮಿ ಮತ್ತು ವಿಜಯ್ ರಾಘವೇಂದ್ರ ಜೋಡಿ ಈಗ ವರುಷಗಳ ನಂತ್ರ ಜೊತೆಯಾಗಿರುವುದು 'ನಮಗಾಗಿ' ಸಿನಿಮಾದಲ್ಲಿ.
'ನಿನಗಾಗಿ' ಚಿತ್ರದಲ್ಲಿ ಹರೆಯದ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ, 'ನಮಗಾಗಿ' ಚಿತ್ರದಲ್ಲಿ ಗಂಡ-ಹೆಂಡತಿ. ಹಲವು ವಿಶೇಷತೆಗಳಿಂದ ಈಗಾಗಲೇ ಗಾಂಧಿನಗರದಲ್ಲಿ ಸಖತ್ ಸುದ್ದಿ ಮಾಡಿರುವ 'ನಮಗಾಗಿ' ಚಿತ್ರತಂಡ ಹೊಸತೊಂದು ಪ್ರಯೋಗ ಮಾಡಿದೆ.
ಸಾಹಸ ದೃಶ್ಯಗಳನ್ನ ಯಾವುದೋ ಗುಜುರಿಯಲ್ಲೋ, ಮತ್ತಾವುದೋ ಬಯಲುಸೀಮೆಯಲ್ಲೋ, ಸೆರೆಹಿಡಿಯುವುದು ಸಾಮಾನ್ಯ. ಆದ್ರೆ, 'ನಮಗಾಗಿ' ಚಿತ್ರತಂಡ ನಗರದ ಬೀದಿಬೀದಿಗಳಲ್ಲಿ, ಇದು ಶೂಟಿಂಗ್ ಅನ್ನುವ ಪರಿವೆಯೇ ಇಲ್ಲದ ಜನರ ಮಧ್ಯೆ 'ರಿಯಲ್' ಆಗಿ ಶೂಟ್ ಮಾಡಿದೆ.
ಮಾರ್ಕೆಟ್ ನಲ್ಲಿ ಖರೀದಿ ಮಾಡುತ್ತಿರುವಾಗ ಏಕಾಏಕಿ ಯಾರನ್ನೋ ಅಟ್ಟಾಡಿಸಿಕೊಂಡು ವಿಜಯ್ ರಾಘವೇಂದ್ರ ಓಡಿ ಬಂದ್ರೆ, ನಿಮ್ಮ ರಿಯಾಕ್ಷನ್ ಹೇಗಿರಬೇಡ..? ಜನರ ಅಂತಹ ಒರಿಜಿನಲ್ ಮುಖಭಾವಗಳನ್ನ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿಸುವುದಕ್ಕೆ ನಿರ್ದೇಶಕ ರಘುರಾಮ್ ಈ ಪ್ಲಾನ್ ಮಾಡಿದ್ದು.

''ನನಗೆ ತಿಳಿದಿರುವ ಮಟ್ಟಕ್ಕೆ ಇದು ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನ. ಇಡೀ ಸ್ಟಂಟ್ ನ್ಯಾಚುರಲ್ ಆಗಿ ಮೂಡಿಬಂದಿದೆ. ಚೇಸ್ ಮಾಡುವ ಆಕ್ಷನ್ ಸೀಕ್ಷೆನ್ಸ್ ಇದು. ನಿಜವಾಗಲೂ, ವಿಜಯ್ ರಾಘವೇಂದ್ರ ಓಡಿಸಿಕೊಂಡು ಬಂದು ಯಾರನ್ನೋ ಹೊಡೀತಿದ್ದಾರೆ ಅನ್ನುವ ಹಾಗೆ ಶೂಟ್ ಮಾಡಿದ್ದೀವಿ. ಅಲ್ಲಿದ್ದ ಜನರಿಗೆ ಇದು ಶೂಟಿಂಗ್ ಅನ್ನೋದೇ ಗೊತ್ತಿರಲಿಲ್ಲ.''
''ಜನರಿಗೆ ಗೊತ್ತಾಗದ ಹಾಗೆ, ಗುಟ್ಟಾಗಿ ಮೂರು ಕಡೆ ಕ್ಯಾಮರಾಗಳನ್ನ ಇಟ್ಟು ಶೂಟ್ ಮಾಡಿದ್ದು. ಜನರ ನಿಜವಾದ ರಿಯಾಕ್ಷನ್ಸ್ ನಮಗೆ ಬೇಕಾಗಿತ್ತು'' ಅಂತ ವಿಭಿನ್ನ ಪ್ರಯತ್ನದ ಬಗ್ಗೆ ನಿರ್ದೇಶಕ ರಘುರಾಮ್ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡರು. [ವಿಜಯ್ ರಾಘವೇಂದ್ರ ಸಂಸಾರದಲ್ಲಿ ಹುಳಿ ಹಿಂಡುವ ದುನಿಯಾ ರಶ್ಮಿ.!]
ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್, ಶಿವಾಜಿನಗರದ ಗುಜುರಿಯಲ್ಲಿ ಈ ಸನ್ನಿವೇಶವನ್ನ ಶೂಟ್ ಮಾಡಲಾಗಿದೆ. ಸ್ಟಂಟ್ ಮಾಸ್ಟರ್ ಮಾಸ್ ಮಾದ ಸಂಯೋಜನೆಯಲ್ಲಿ ಈ ಸಾಹಸ ದೃಶ್ಯ ಮೂಡಿಬಂದಿದೆ.
ಅಷ್ಟಕ್ಕೂ ಬೀದಿಬೀದಿಗಳಲ್ಲಿ ವಿಜಯ್ ರಾಘವೇಂದ್ರ ಖೇಡಿಗಳನ್ನ ಓಡಿಸಿಕೊಂಡು ಬರುವುದು ಯಾಕೆ ಅಂದ್ರೆ, ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ ನಡುವೆ ಜಗಳವಾಗಿರುತ್ತೆ. ಸಾರಿ ಕೇಳೋಕೆ ಅಂತ ರಾಧಿಕಾ ಇರುವ ಮಾರ್ಕೆಟ್ ಗೆ ವಿಜಯ್ ಬರುತ್ತಾರೆ. [ರಾಧಿಕಾಗೆ ರೋಡಲ್ಲೇ ಹೂ ಕೊಟ್ಟ ವಿಜಯ್ ರಾಘವೇಂದ್ರ]
ಅಲ್ಲಿದ್ದ, ಪೋಲಿ ಹುಡುಗರು ರಾಧಿಕಾರನ್ನ ಕೆಣಕಿದ್ದಕ್ಕೆ ವಿಜಯ್ ಅಟ್ಟಾಡಿಸಿಕೊಂಡು ಹೋಗುತ್ತಾರೆ. ಆ ಚೇಸ್ ನಲ್ಲಿ ಅರ್ಧ ಬೆಂಗಳೂರು ಕವರ್ ಆಗಿದೆ. ಈ ಸೀನ್ ತೆಗೆಯುವುದಕ್ಕೆ ನಿರ್ದೇಶಕ ರಘುರಾಮ್ ಮತ್ತು ಮಾಸ್ ಮಾದ 4 ದಿನಗಳ ಹೋಮ್ ವರ್ಕ್ ಮಾಡಿದ್ದರಂತೆ. ಸದ್ಯಕ್ಕೆ ಬೆಂಗಳೂರು ಸುತ್ತ ಮುತ್ತ 'ನಮಗಾಗಿ' ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. (ಫಿಲ್ಮಿಬೀಟ್ ಕನ್ನಡ)