»   » ಜಯಲಲಿತಾಗಾಗಿ ಮೀಸೆ ಪಣಕ್ಕಿಟ್ಟ ವಿಜಯಕಾಂತ್

ಜಯಲಲಿತಾಗಾಗಿ ಮೀಸೆ ಪಣಕ್ಕಿಟ್ಟ ವಿಜಯಕಾಂತ್

By: ಶಂಕರ್, ಚೆನ್ನೈ
Subscribe to Filmibeat Kannada

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರದಲ್ಲಿ 21 ದಿನಗಳನ್ನು ಕಳೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಅಣ್ಣಾ ಡಿಎಂಕೆ ಪಕ್ಷದ ಪರಮೋಚ್ಚ ನಾಯಕಿ ಜೆ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಗೊತ್ತೇ ಇದೆ. ಶನಿವಾರ (ಅ.18) ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತಿದೆ.

ಅಮ್ಮ ಬಿಡುಗಡೆಯಾಗುತ್ತಿದ್ದು ತಮಿಳುನಾಡಿನಲ್ಲಿ ಹಬ್ಬಕ್ಕೂ ಮುನ್ನವೇ ದೀಪಾವಳಿ ಬಂದಂತಾಗಿದೆ. ಜಯಲಲಿತಾ ಬಿಡುಗಡೆಯಾಗುತ್ತಿರುವುದು ಕೆಲವರಿಗೆ ಖುಷಿ ಕೊಟ್ಟಿದ್ದರೆ ವಿರೋಧ ಪಕ್ಷದವರು ಒಳಗೊಳಗೆ ಕುದಿಯುವಂತಾಗಿದೆ. ಅಂತಹರವಲ್ಲಿ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಸಹ ಒಬ್ಬರು. ಅವರು ಸಿನಿಮಾ ರೀತಿಯಲ್ಲೇ ಒಂದು ಡೈಲಾಗ್ ಎಸೆದಿದ್ದಾರೆ.

Vijaykanth

ಜಯಲಿಲಿತಾ ಅವರು ನಿರಪರಾಧಿ ಎಂದು ಸಾಬೀತಾದರೆ ತಮ್ಮ ಮೀಸೆ ಬೋಳಿಸುವುದಾಗಿ ಹೇಳಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಕೆಲವು ನಟರು ಜಯಲಲಿತಾ ಪರವಾಗಿದ್ದರೆ ಇನ್ನೂ ಕೆಲವರು ಅವರ ವಿರುದ್ಧವಾಗಿರುವುದು ಅಲ್ಲಿನ ಚಿತ್ರರಂಗವನ್ನೂ ಇಬ್ಭಾಗ ಮಾಡಿದೆ.

ಜಲಲಲಿತಾ ಅವರಿಗೆ ಷರತ್ತುಬದ್ಧ ಜಾಮೀನೇನೂ ಸಿಕ್ಕಿದೆ. ಆದರೆ ಅವರು ಜೈಲಿನಲ್ಲೇ ನವರಾತ್ರಿ ಆಚರಿಸಿಕೊಂಡಿದ್ದರು, ಇದೀಗ ದೀಪಾವಳಿ ಆಚರಿಸಿಕೊಳ್ಳಲು ಹೊರಬರುತ್ತಿದ್ದಾರೆ. ಅವರು ಇನ್ನೂ ನಿರಪರಾಧಿ ಎಂಬುದು ಸಾಬೀತಾಗಿಲ್ಲ. ಅಲ್ಲಿಯವರೆಗೂ ವಿಜಯಕಾಂತ್ ಮೀಸೆ ಸೇಫ್ ಎನ್ನಬಹುದು.

English summary
Kollywood actor, Tamil Nadu’s politician, Vijayakanth stated that he will remove his moustache if Jayalalithaa was proved innocent. The Apex Court on Friday granted a two-month bail to J Jayalalithaa on medical grounds and also suspended the Karnataka High Court sentence against the former Tamil Nadu chief minister in an illegal assets case.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada