For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆ ದಿನವೇ 'ಕೆಜಿಎಫ್-2' ಆ ದಾಖಲೆ ಉಡೀಸ್ ಮಾಡಿದ 'ರೋಣ'

  |

  ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ದರ್ಬಾರ್ ಶುರುವಾಗಿದೆ. ಬಿಡುಗಡೆಯ ದಿನವೇ 'ಕೆಜಿಎಫ್-2' ಚಿತ್ರದ ಅದೊಂದು ದಾಖಲೆಯನ್ನು 'ರೋಣ' ಮುರಿದಿದ್ದಾನೆ ಅಂತ ಸುದೀಪ್ ಅಭಿಮಾನಿಗಳು ಹಬ್ಬ ಮಾಡ್ತಿದ್ದಾರೆ.

  ರಾತ್ರಿಯಿಂದಲೇ ದುಬೈ ಸೇರಿದಂತೆ ವಿದೇಶಗಳಲ್ಲಿ ಪ್ರೀಮಿಯರ್‌ ಶೋಗಳು ಪ್ರಾರಂಭವಾದ್ರೆ, ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಸಾಕಷ್ಟು ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಥಿಯೇಟರ್‌ಗಳ ಅಂಗಳದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ನಗರದ ಮಾಗಡಿ ರಸ್ತೆಯ ವೀರೇಶ್, ಎಂ. ಜಿ ರಸ್ತೆಯ ಶಂಕರ್‌ನಾಗ್‌ ಥಿಯೇಟರ್‌ ಸೇರಿದಂತೆ ಹಲವೆಡೆ ಸೆಲೆಬ್ರೇಷನ್ ಜೋರಾಗಿತ್ತು. ಇನ್ನು ಸ್ಕ್ರೀನ್‌ಗಳು ಮತ್ತು ಶೋಗಳ ಲೆಕ್ಕಾಚಾರದಲ್ಲೂ 'ವಿಕ್ರಾಂತ್ ರೋಣ'ನ ಆರ್ಭಟ ಜೋರಾಗಿದೆ.

  Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?

  ಮೊದಲ ದಿನ ಅಂದಾಜು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ನಟನೆಯ ಸಿನಿಮಾ ಇಷ್ಟು ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇನ್ನು 3Dಯಲ್ಲೂ ಕಿಚ್ಚನ ದರ್ಬಾರ್ ಜೋರಾಗಿದ್ದು, ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು 3D ಸ್ಕ್ರೀನ್‌ಗಳಲ್ಲಿ ಬಾದ್‌ ಶಾ ಸುದೀಪ್ ಆರ್ಭಟ ಶುರುವಾಗಲಿದೆ. ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ 'ಕೆಜಿಎಫ್-2' ದಾಖಲೆಯನ್ನು 'ವಿಕ್ರಾಂತ್ ರೋಣ' ಸಿನಿಮಾ ಮುರಿದಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

   'ವಿಕ್ರಾಂತ್ ರೋಣ' ಚಿತ್ರಕ್ಕೆ 1047 ಕನ್ನಡ ಶೋಗಳು!

  'ವಿಕ್ರಾಂತ್ ರೋಣ' ಚಿತ್ರಕ್ಕೆ 1047 ಕನ್ನಡ ಶೋಗಳು!

  ಒಂದು ಅಂದಾಜಿನ ಪ್ರಕಾರ, ದೇಶಾದ್ಯಂತ ಮೊದಲ ದಿನ 'ವಿಕ್ರಾಂತ್ ರೋಣ' ಚಿತ್ರಕ್ಕೆ 1047 ಕನ್ನಡ ಶೋಗಳು ಸಿಕ್ಕಿವೆ. 'ಕೆಜಿಎಫ್-2'ಚಿತ್ರಕ್ಕೆ 913 ಶೋಗಳು ದಕ್ಕಿತ್ತು. ಹಾಗಾಗಿ ಅದೊಂದು ವಿಚಾರದಲ್ಲಿ ಈಗಾಗಲೇ ರಾಕಿ ಭಾಯ್‌ನ ಮೀರಿಸಿ ರೋಣ ಮುಂದೆ ಹೊರಟಿದ್ದಾನೆ. ಕರ್ನಾಟಕದಲ್ಲಿ 918 ಶೋಗಳು ಹೊರ ರಾಜ್ಯಗಳಲ್ಲಿ 129 ಶೋಗಳು ಸೇರಿ ಸಂಖ್ಯೆ ಸಾವಿರದ ಗಡಿ ದಾಟಿದೆ. ದಾಖಲೆಗಳು ಇರೋದೇ ಮುರಿಯೋದಕ್ಕೆ. ಎರಡೂ ನಮ್ಮ ಕನ್ನಡ ಸಿನಿಮಾಗಳೇ ಅಂತ ಮತ್ತೆ ಕೆಲವರು ಖುಷಿ ಪಡುತ್ತಿದ್ದಾರೆ.

  'ವಿಕ್ರಾಂತ್ ರೋಣ' ರಿಲೀಸ್ ಹೊಸ್ತಿಲಲ್ಲಿ ವಾಟ್ಸಾಪ್ ನಂಬರ್ ಕೊಟ್ಟು ಅನೂಪ್ ಏನಂದ್ರು?'ವಿಕ್ರಾಂತ್ ರೋಣ' ರಿಲೀಸ್ ಹೊಸ್ತಿಲಲ್ಲಿ ವಾಟ್ಸಾಪ್ ನಂಬರ್ ಕೊಟ್ಟು ಅನೂಪ್ ಏನಂದ್ರು?

   ಟಾಪ್- 5 ಸಿನಿಮಾ ಪಟ್ಟಿ

  ಟಾಪ್- 5 ಸಿನಿಮಾ ಪಟ್ಟಿ

  ಇನ್ನು ದೇಶಾದ್ಯಂತ ಮೊದಲ ದಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ಅತಿ ಹೆಚ್ಚು ಕನ್ನಡ ಶೋಗಳು ಕಂಡ ಟಾಪ್‌ ಸಿನಿಮಾಗಳು ಯಾವುದು ಅಂತ ನೋಡೋದಾದರೆ 'ವಿಕ್ರಾಂತ್ ರೋಣ' ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ 'ಕೆಜಿಎಫ್‌- 2' ಇದ್ದು, ಮೂರನೇ ಸ್ಥಾನದಲ್ಲಿ 'ಜೇಮ್ಸ್'(845), ನಾಲ್ಕನೇ ಸ್ಥಾನದಲ್ಲಿ 'ಯುವರತ್ನ'(718), ಐದನೇ ಸ್ಥಾನದಲ್ಲಿ 'ಪೊಗರು'(651) ಸಿನಿಮಾ ಇದೆ.

   ಪ್ರೀಮಿಯರ್‌ ಶೋಗಳಿಗೆ ರೆಸ್ಪಾನ್ಸ್ ಹೇಗಿದೆ?

  ಪ್ರೀಮಿಯರ್‌ ಶೋಗಳಿಗೆ ರೆಸ್ಪಾನ್ಸ್ ಹೇಗಿದೆ?

  ದುಬೈ ಸೇರಿದಂತೆ ಹಲವು ದೇಶಗಳಲ್ಲಿ 'ವಿಕ್ರಾಂತ್ ರೋಣ' ಪ್ರೀಮಿಯರ್‌ ಶೋಗಳು ಯಶಸ್ವಿಯಾಗಿ ಮುಗಿದಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸುದೀಪ್ ಪರ್ಫಾರ್ಮೆನ್ಸ್, ಮೇಕಿಂಗ್, ಅನೂಪ್ ಭಂಡಾರಿ ಕೈಚಳಕದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವೇ ನಿಮಿಷಗಳಲ್ಲಿ ಕರ್ನಾಟಕದಲ್ಲಿ ಪ್ರೇಕ್ಷಕರು ಸಿನಿಮಾ ಭವಿಷ್ಯ ನುಡಿಯಲಿದ್ದಾರೆ.

  Recommended Video

  Vikrant Rona Public Reaction | ಈ ಥಿಯೇಟರ್ ರಿವ್ಯೂ ಸುದೀಪ್ ಗೆ ತುಂಬಾ ಸ್ಪೆಷಲ್ | Chitradurga Fans | Sudeep
   ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು?

  ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು?

  'ವಿಕ್ರಾಂತ್ ರೋಣ' ಕ್ರೇಜ್‌ ನೋಡುತ್ತಿದ್ದರೆ ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಪ್ರೀಮಿಯರ್‌ ಶೋಗಳು, ಅಡ್ವಾನ್ಸ್‌ ಬುಕಿಂಗ್‌ಗೆ ಸಿಕ್ಕಿರುವ ರೆಸ್ಪಾನ್ಸ್ ಗಮನಿಸಿದರೇ ಮೊದಲ ದಿನವೇ ಅನಾಯಾಸವಾಗಿ 50 ಕೋಟಿಗೂ ಅಧಿಕ ಗಳಿಕೆ ಮಾಡುವ ಸಾಧ್ಯತೆಯಿದೆ.

  English summary
  Vikrant Rona Beats KGF-2 With 1000+ Kannada Multiplex Shows In India Day 1. Know More.
  Thursday, July 28, 2022, 11:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X