For Quick Alerts
  ALLOW NOTIFICATIONS  
  For Daily Alerts

  ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?

  |

  ಕಿಚ್ಚ ಅಭಿಮಾನಿಗಳು 'ವಿಕ್ರಾಂತ್ ರೋಣ' ಸಿನಿಮಾಗಾಗಿ ಕಾದಿದ್ದು ಬರೋಬ್ಬರಿ ಮೂರು ವರ್ಷ. ಕೊನೆಗೂ 'ವಿಕ್ರಾಂತ್ ರೋಣ' ಸಿನಿಮಾ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಒಂದಲ್ಲ ಎರಡಲ್ಲ ಆರು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ.

  'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿದ್ದೇನೋ ಸರಿ. ಅಭಿಮಾನಿಗಳು ಸಿನಿಮಾ ನೋಡಿ ಹೆಚ್ಚೆದ್ದು ಕುಣಿದಿದ್ದೂ ಆಗಿದೆ. ಈಗ ಕಾಡುತ್ತಿರುವ ಪ್ರಶ್ನೆ ಏನಂದರೆ, ಕಿಚ್ಚ ಸುದೀಪ್ ಸಿನಿಮಾ ಮೊದಲ ದಿನ ಎಷ್ಟು ಗಳಿಸಿರಬಹುದು? ಎಷ್ಟು ದಾಖಲೆಗಳನ್ನು ಮುರಿದಿರಬಹುದು? ಪ್ರಶ್ನೆ ಕಾಡುತ್ತಲೇ ಇದೆ. ಅದಕ್ಕೆ ತಕ್ಕಂತೆ ಮೊದಲ ದಿನ ಕಲೆಕ್ಷನ್ ಹೊರಬಿದ್ದಿದೆ.

  Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?

  ಫಸ್ಟ್ ಡೇ 'ವಿಕ್ರಾಂತ್ ರೋಣ' ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು? ಅನ್ನೋ ಲೆಕ್ಕಾಚಾರ ಹಾಕಲಾಗಿದೆ. ಒಂದು ಅಂದಾಜಿನ ಲೆಕ್ಕ ಹಾಕಲಾಗಿದೆ. ಹಾಗಿದ್ದರೆ, ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಗಳಿಸಿದ್ದೆಷ್ಟು? ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಬರೆದ ದಾಖಲೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  'ವಿಕ್ರಾಂತ್ ರೋಣ' ರೆಸ್ಪಾನ್ಸ್ ಹೇಗಿದೆ?

  'ವಿಕ್ರಾಂತ್ ರೋಣ' ರೆಸ್ಪಾನ್ಸ್ ಹೇಗಿದೆ?

  ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲಿ ರಿಲೀಸ್ ಆಗಿದೆ. ಮೊದಲೇ ದಿನವೇ ಸುಮಾರು 9500 ಶೋಗಳನ್ನು ಕಂಡಿದೆ. ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಉಳಿದ ಕಡೆಗೂ ಅಂದ್ಕೊಂಡಿದ್ದಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಉತ್ತರ ಭಾರತದಲ್ಲಿ ಮಾಧ್ಯಮಗಳು 'ವಿಕ್ರಾಂತ್ ರೋಣ'ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅದಾಗ್ಯೂ ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ಕಲೆಕ್ಷನ್ ಎಷ್ಟಾಗಿರಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕ ಹಾಕಿದ್ದಾರೆ.

  'ವಿಕ್ರಾಂತ್ ರೋಣ' ಫಸ್ಟ್ ಡೇ ಕಲೆಕ್ಷನ್ ಎಷ್ಟು?

  'ವಿಕ್ರಾಂತ್ ರೋಣ' ಫಸ್ಟ್ ಡೇ ಕಲೆಕ್ಷನ್ ಎಷ್ಟು?

  'ವಿಕ್ರಾಂತ್ ರೋಣ' ಕರ್ನಾಟಕದಲ್ಲಿ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೆಚ್ಚು ಕಡಿಮೆ ಕರ್ನಾಟಕ ಒಂದರಲ್ಲೇ 2500ಕ್ಕೂ ಹೆಚ್ಚು ಶೋಗಳನ್ನು ಕಂಡಿದೆ ಈ ಎಲ್ಲಾ ಲೆಕ್ಕಾಚಾರದ ಪ್ರಕಾರ, ರಾಜ್ಯದಲ್ಲಿ ಮೊದಲ ದಿನ 'ವಿಕ್ರಾಂತ್ ರೋಣ' ಸುಮಾರು 16 ರಿಂದ 20 ಕೋಟಿ ರೂ. ಆಗಿರುವ ಸಾಧ್ಯತೆಯಿದ ಎಂದು ಅಂದಾಜು ಮಾಡಲಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 18 ಕೋಟಿ ರೂ.ಗೆ ಮೋಸವಿಲ್ಲ ಎನ್ನಲಾಗಿದೆ.

  ಕೇವಲ ಒಂದು ಥಿಯೇಟರ್‌ನಲ್ಲಿ 25 ಲಕ್ಷ ರೂ.

  ಕೇವಲ ಒಂದು ಥಿಯೇಟರ್‌ನಲ್ಲಿ 25 ಲಕ್ಷ ರೂ.

  ವಿತರಕರ ಪ್ರಕಾರ, 'ವಿಕ್ರಾಂತ್ ರೋಣ' ಸಿನಿಮಾ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅದ್ಭುತ ಕಲೆಕ್ಷನ್ ಆಗಿದೆ. ವಿತರಕರ ಹೇಳುವ ಪ್ರಕಾರ, ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ದಿನವೇ ಸುಮಾರು 25 ಲಕ್ಷ ರೂ. ಗಳಿಕೆ ಕಂಡಿದೆ ಎಂದು ಹೇಳಲಾಗಿತ್ತಿದೆ. ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಗೂ ಇನ್ನಿತರ ಕಡೆಗಳಲ್ಲಿ ಸಿನಿಮಾದ ಗಳಿಕೆ ಉತ್ತಮವಾಗಿಯೇ ಇದೆ. ಈ ಕಾರಣಕ್ಕೆ ಮೊದಲ ದಿನ 20 ಕೋಟಿ ರೂ. ದಾಟಬಹುದು ಎಂದು ಹೇಳಲಾಗಿದೆ.

  'ಒರ್ಮ್ಯಾಕ್ಸ್' ರಿಪೋರ್ಟ್ ಏನು?

  ಒರ್ಮ್ಯಾಕ್ಸ್ ಸಂಸ್ಥೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಗಳಿಕೆಯ ಫೋರ್‌ಕಾಸ್ಟ್ ರಿಪೋರ್ಟ್ ಅನ್ನು ರಿಲೀಸ್ ಮಾಡಿದೆ. ಒರ್ಮ್ಯಾಕ್ಸ್ ಕೊಟ್ಟಿರುವ ವರದಿ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನದ ಗಳಿಕೆ 16.20 ಕೋಟಿ ರೂ. ಗಳಿಕೆ ಕಂಡಿರಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಟ್ರೇಡ್ ಅನಲಿಸ್ಟ್ ಕೊಟ್ಟ ವರದಿಗೆ ತಕ್ಕಂತೆ ಕಲೆಕ್ಷನ್ ಆಗಿದ್ದರೆ, 'ವಿಕ್ರಾಂತ್ ರೋಣ' ದಾಖಲೆ ಗಳಿಕೆ ಆದಂತೆಯೇ.

  English summary
  Vikrant Rona Box Office Collection Day 2 Karnataka: Ormax Report Forecast, Know More.
  Friday, July 29, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X