Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 'ವಿಕ್ರಾಂತ್ ರೋಣ' ಹವಾ ಬಲು ಜೋರು!
ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಭರ್ಜರಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದೆ. ವಿಕ್ರಾಂತ್ ರೋಣನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರು ಈಗ ಈ ಸಿನಿಮಾವನ್ನು ಕಣ್ತುಂಬಿ ಕೊಂಡಿದ್ದಾರೆ.
ಸದ್ಯ 'ವಿಕ್ರಾಂತ್ ರೋಣ' ಸಿನಿಮಾದೇ ಹವಾ. ಸಿನಿಮಾ ನೋಡಿದ ಮಂದಿ, ಮೆಚ್ಚಿ ಕೊಂಡಾಡುತ್ತಿದ್ದಾರೆ. ಮುಂಜಾನೆ ಶೋ ನೋಡಿ ಬಂದ ಪ್ರೇಕ್ಷಕರು 'ವಿಕ್ರಾಂತ್ ರೋಣ'ನಿಗೆ ಜೈಕಾರ ಹಾಕುತ್ತಿದ್ದಾರೆ. ಈ ಮೂಲಕ ನಟ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ.
ರಮ್ಯಾ,
ಕಾರ್ತಿ,
ಗಣೇಶ್
'ವಿಕ್ರಾಂತ್
ರೋಣ'
ನೋಡ್ತಾರಂತೆ:
ಸ್ಟಾರ್‌ಗಳ
ದಂಡೇ
ಇದೆ!
ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಹೇಳಿ, ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ವಿಶ್ವದೆಲ್ಲೆಡೆ ಸಿನಿಮಾ ಹೇಗೆ ಸದ್ದು ಮಾಡುತ್ತಿದೆ ಎನ್ನುವ ಸಹಜ ಕುತೂಹಲ ಇದ್ದೇ ಇರುತ್ತದೆ. ಈಗ ಈ ಚಿತ್ರದ ಹವಾ ವಿಶ್ವದಾದ್ಯಂತ ಪಸರಿಸಿದೆ. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದಾರೆ.

ಭಾರತದಲ್ಲಿ 3000ಕ್ಕೂ ಹೆಚ್ಚು ಸ್ಕ್ರೀನ್!
'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 3000 ಹೆಚ್ಚು ಕ್ಕೂ ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದಿದೆ. ಭಾರತದಾದ್ಯಂತ ಸಿನಿಮಾ ಹವಾ ಜೋರಾಗಿದೆ. ಕರ್ನಾಟಕ ಮಾತ್ರವಲ್ಲದೇ, ಅಕ್ಕ-ಪಕ್ಕದ ರಾಜ್ಯಗಳು ಮತ್ತು ನಾರ್ತ್‌ನಲ್ಲೂ ಕೂಡ ವಿಕ್ರಾಂತ್ ರೋಣ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Vikrant
Rona
Review:
ಸರಣಿ
ಕೊಲೆಗಳ
ನಡುವೆ
'ವಿಕ್ರಾಂತ್
ರೋಣ'ನ
ಒಂಟಿ
ಬೇಟೆ

ಪಶ್ಚಿಮ ಬಂಗಾಳದಲ್ಲಿ ವಿಕ್ರಾಂತ್ ರೋಣ ಹವಾ!
ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ವಿಶ್ವದ ಹಲವು ಕಡೆಗಳಿಂದ ವಿಮರ್ಶೆಗಳು ಬರ್ತಿವೆ. ಇನ್ನು ಭಾರತದಲ್ಲಿ ಬಂಗಾಳದಲ್ಲಿ ಕೂಡ ಈ ಚಿತ್ರಕ್ಕೆ ಹೆಚ್ಚಿನ ಕ್ರೇಜ್ ಹುಟ್ಟಿರುವುದು ಅಚ್ಚರಿ. ಏಕೆಂದರೆ ಸಿನಿಮಾತಂಡ ಅಲ್ಲಿ ಪ್ರಚಾರವನ್ನು ಮಾಡಿಲ್ಲವಾದರೂ ಕೂಡ ಪಶ್ಚಿಮ ಬಂಗಾಳದಲ್ಲಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಮುಗಿಬೀಳುತ್ತಿದ್ದಾರೆ ಎಂದು ವರದಿಯಾಗಿದೆ.

ಕೊಲ್ಕತ್ತಾದಲ್ಲಿ 87 ಶೋ!
ಪಶ್ಚಿಮ ಬಂಗಾಳದಲ್ಲಿ ವಿಕ್ರಾಂತ್ ರೋಣ ಸಿನಿಮಾಗೆ ಬೇಡಿಕೆ ಹೆಚ್ಚಿದ ಕಾರಣ, ಪ್ರದರ್ಶನಗಳನ್ನು ಹೆಚ್ಚು ಮಾಡಲಾಗಿದೆ. ಅದರಲ್ಲೂ ಕೊಲ್ಕತ್ತಾದಲ್ಲಿ ಈ ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಕೊಲ್ಕತ್ತಾದಲ್ಲಿ ಮಾತ್ರವೇ 87 ಶೋಗಳು ಪ್ರದರ್ಶನ ಕಾಣುತ್ತಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಇನ್ನು ಕೊಲ್ಕತ್ತಾದಲ್ಲಿ ಸೌತ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಈ ಚಿತ್ರ ಅಲ್ಲಿನ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸೂಚನೆ ಕೊಟ್ಟಿದೆ.

40 ಕೋಟಿ ಗಳಿಕೆ ಕಾಣಬಹುದೇ?
'ವಿಕ್ರಾಂತ್ ರೋಣ' ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ವಿಕ್ರಾಂತ್ ರೋಣದ ಮುಂಗಡ ಬುಕ್ಕಿಂಗ್ ಅದ್ಭುತವಾಗಿದೆ. ಚಿತ್ರವು ಉತ್ತಮ ಸ್ಪಾಟ್ ಬುಕಿಂಗ್‌ನಿಂದಲೂ ಗಮನ ಸೆಳೆದಿದೆ. ಚಲನಚಿತ್ರವು ವಿಶ್ವದಾದ್ಯಂತ ದಾಖಲೆ ಸಂಖ್ಯೆಯ ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವುದನ್ನು ಗಮನಿಸಿದರೆ, ಅಂದಾಜಿನ್ನೂ ಮೀರಿದ ಗಳಿಕೆ ಮಾಡುವ ಸಾಧ್ಯತೆ ಇದೆ.