Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Oscars 2023 : RRR,ಕಾಂತಾರ ಅಷ್ಟೇ ಅಲ್ಲ.. ಆಸ್ಕರ್ ಲಿಸ್ಟ್‌ನಲ್ಲಿದೆ ಕಿಚ್ಚನ 'ವಿಕ್ರಾಂತ್ ರೋಣ'!
ಆಸ್ಕರ್ ಪ್ರಶಸ್ತಿಗೆ ಒಂದೊಂದೇ ಭಾರತದ ಸಿನಿಮಾ ಎಂಟ್ರಿ ಕೊಡುತ್ತಿವೆ. ಬೇರೆ ಕ್ಯಾಟಗರಿಯಲ್ಲಿ ಭಾರತದ ಸಿನಿಮಾಗಳು ಪೈಪೋಟಿಗೆ ಬಿದ್ದಿದೆ. ವಿಶೇಷ ಅಂದ್ರೆ, ಈ ಭಾರೀ ಆಸ್ಕರ್ ಲಿಸ್ಟ್‌ನಲ್ಲಿ ಕನ್ನಡದ ಎರಡು ಸಿನಿಮಾಗಳಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಕನ್ನಡ ಸಿನಿಮಾ ಕರ್ನಾಟಕದ ಗಡಿಬಿಟ್ಟು ಮುಂದಕ್ಕೆ ಹೋಗುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿದ್ದ ಚಿತ್ರರಂಗ 2022ರಲ್ಲಿ ವಿಶ್ವದ ಗಮನವನ್ನು ಸೆಳೆದಿತ್ತು. 'ಕೆಜಿಎಫ್ 2', 'ಕಾಂತಾರ' ಹಾಗೂ 'ವಿಕ್ರಾಂತ್ ರೋಣ' ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದವು. ಈ ಮೂರು ಸಿನಿಮಾಗಳಲ್ಲಿ 'ಕಾಂತಾರ' ಹಾಗೂ 'ವಿಕ್ರಾಂತ್ ರೋಣ' ಆಸ್ಕರ್ ಮೆಟ್ಟಿಲೇರಿವೆ.
ಆಸ್ಕರ್
ಶಾರ್ಟ್ಲಿಸ್ಟ್ನಲ್ಲಿ
'ಚೆಲ್ಲೋ
ಶೋ',
'RRR':ಈ
ಬಾರಿಯಾದ್ರೂ
ಆಸ್ಕರ್
ದಕ್ಕುತ್ತಾ?
ಕನ್ನಡಿಗರಿಗೆ ಇದಕ್ಕಿಂತ ಇನ್ನೇನು ಬೇಕು. ಕನ್ನಡ ಸಿನಿಮಾ ಪ್ರಿಯರಂತೂ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಆಸ್ಕರ್ ಕನ್‌ಟೆನ್ಷನ್ ಲಿಸ್ಟ್‌ನಲ್ಲಿ ಭಾರತದ 9 ಸಿನಿಮಾಗಳಿವೆ. ಅವುಗಳಲ್ಲಿ ಕನ್ನಡ ಎರಡು ಸಿನಿಮಾಗಳಿರೋದು ಮತ್ತೊಂದು ವಿಶೇಷ.

ಆಸ್ಕರ್ ಲಿಸ್ಟ್‌ನಲ್ಲಿ 'ವಿಕ್ರಾಂತ್ ರೋಣ'
2023ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಅಭಿನಯದ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಕೂಡ ಸೇರಿಕೊಂಡಿದೆ. ಸುಮಾರು 301 ಸಿನಿಮಾಗಳಲ್ಲಿ 'ವಿಕ್ರಾಂತ್ ರೋಣ' ಕೂಡ ಒಂದು. 'ವಿಕ್ರಾಂತ್ ರೋಣ' ದಕ್ಷಿಣ ಭಾರತದ ನಾಲ್ಕು ಹಾಗೂ ಹಿಂದಿ ಜೊತೆ ಇಂಗ್ಲಿಷ್ ಭಾಷೆಗೂ ಡಬ್ ಆಗಿತ್ತು. ಇಂಗ್ಲಿಷ್‌ಗೆ ಸ್ವತ: ಸುದೀಪ್ ಡಬ್ ಕೂಡ ಮಾಡಿದ್ದರು. ದೇಶ-ವಿದೇಶದಲ್ಲೂ ತೆರೆಕಂಡಿದ್ದ ಈ ಸಿನಿಮಾ ಜೋರಾಗಿಯೇ ಸದ್ದು ಮಾಡಿತ್ತು. ಈಗ ಆಸ್ಕರ್ ಕನ್‌ಟೆನ್ಷನ್ ಪಟ್ಟಿಯ ಸೇರಿಕೊಂಡಿದ್ದು ಪ್ರಶಸ್ತಿ ಗೆಲ್ಲಲು ಪೈಪೋಟಿಗೆ ಇಳಿದಿದೆ.

'ವಿಕ್ರಾಂತ್ ರೋಣ' ಫೈಟ್
ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಇಂತಹದ್ದೊಂದು ಫ್ಯಾಂಟಸಿ ಅಡ್ವೆಂಚರ್ ಸಿನಿಮಾದಲ್ಲಿ ನಟಿಸಿದ್ದಾರೆ. ಅನುಪ್ ಭಂಡಾರಿ ನಿರ್ದೇಶಿಸಿದ ಈ ಸಿನಿಮಾ ಬಿಡುಗಡೆಯಾದ ಹಲವು ದೇಶಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಆಸ್ಕರ್ ಕನ್‌ಟೆನ್ಷನ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲಲು ಪೈಪೋಟಿ ನಡೆಸಿದೆ. ಇದರಲ್ಲಿ ರಾಜಮೌಳಿ ನಿರ್ದೇಶನ RRR ಹಾಗೂ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ 'ಕಾಂತಾರ' ಕೂಡ ಪೈಪೋಟಿಗೆ ಬಿದ್ದಿದೆ.

ಆಸ್ಕರ್‌ಗಾಗಿ ಭಾರತದ 9 ಸಿನಿಮಾಗಳು ಫೈಟ್
ಆಸ್ಕರ್ ಪ್ರಶಸ್ತಿಯ ವಿಶೇಷ ವಿಭಾಗದಲ್ಲಿ ಭಾರತದ 9 ಸಿನಿಮಾಗಳು ಆಯ್ಕೆಯಾಗಿವೆ. ವಿಶ್ವದಾದ್ಯಂತ ಸುಮಾರು 301 ಸಿನಿಮಾಗಳಲ್ಲಿ ಭಾರತದ 9 ಸಿನಿಮಾಗಳು ಇವೆ. ಇದರಲ್ಲೂ ದಕ್ಷಿಣ ಭಾರತದ ಸಿನಿಮಾಗಳದ್ದೇ ಮೇಲುಗೈ. 'RRR','ಕಾಂತಾರ', 'ವಿಕ್ರಾಂತ್ ರೋಣ', ತಮಿಳು ಸಿನಿಮಾ 'ರಾಕೆಟ್ರಿ ದಿ ನಂಬಿ ಎಫೆಕ್ಟ್' , 'ಇರವಿನ್ ನಿಳಲ್' ಸೇರಿ ಒಟ್ಟು ಐದು ಸಿನಿಮಾಗಳಿವೆ. ಹಾಗೇ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' , 'ಗಂಗೂಬಾಯಿ ಕಾಠಿಯಾವಾಡಿ', ಸಿನಿಮಾಗಳು ಟಾಪ್ ಲಿಸ್ಟ್‌ನಲ್ಲಿವೆ.

ಆಯ್ಕೆ ಪ್ರಕ್ರಿಯೆ ಯಾವಾಗ?
ಈಗಾಗಲೇ ಆಸ್ಕರ್‌ಗೆ ಹೋಗಿರುವ ಸಿನಿಮಾಗಳಿಗೆ ಸುಮಾರು 9579 ಮಂದಿ ಸದಸ್ಯರು ವೋಟ್ ಹಾಕಲಿದ್ದಾರೆ. ಈ ಪ್ರಕ್ರಿಯೆ ಜನವರಿ 12ರಿಂದ ಆರಂಭ ಆಗಿ ಜನವರಿ 17ಕ್ಕೆ ಮುಗಿಯಲಿದೆ. ಇನ್ನು ಆಸ್ಕರ್‌ಗೆ ಪ್ರಶಸ್ತಿ ಗೆಲ್ಲುವ ಪಟ್ಟಿಯಲ್ಲಿ ಯಾವ್ಯಾವ ಸಿನಿಮಾ ಫೈಟ್ ಮಾಡಲಿದೆ ಎಂದು ಜನವರಿ 24ರಂದು ಘೋಷಣೆಯಾಗಲಿದೆ.