For Quick Alerts
  ALLOW NOTIFICATIONS  
  For Daily Alerts

  'ರನ್ ಆಂಟನಿ' ಬಿಡುಗಡೆ ಮುಂದಕ್ಕೆ ಹೋಯ್ತಾ.?

  By Suneetha
  |

  ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಎರಡನೇ ಸಿನಿಮಾ 'ರನ್ ಆಂಟನಿ' ಜುಲೈ 1 ರಂದು ತೆರೆಗೆ ಬರುತ್ತಿದೆ ಅಂತ ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಲೇಟೆಸ್ಟ್ ಆಗಿ ಬಂದಿರುವ ಮಾಹಿತಿ ಪ್ರಕಾರ ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.

  'ರನ್ ಆಂಟನಿ' ಮುಂದಿನ ತಿಂಗಳು ರಿಲೀಸ್ ಆಗುತ್ತೆ. ಆದರೆ ಯಾವಾಗ ಅನ್ನೋದು ಇನ್ನು ಬಹಿರಂಗ ಆಗಿಲ್ಲ. ನಾಳೆ (ಜೂನ್ 28) ಬಿಡುಗಡೆ ದಿನಾಂಕ ಖಚಿತವಾಗುತ್ತಿದ್ದು, ಜೂನ್ 29 ರಂದು ಪ್ರೆಸ್ ಮೀಟ್ ನಡೆಯಲಿದೆ.[ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?]

  ಅಂದಹಾಗೆ ಏಕಾಏಕಿ 'ರನ್ ಆಂಟನಿ' ಬಿಡುಗಡೆ ಮುಂದಕ್ಕೆ ಹೋಗಲು ಕಾರಣ, ಈ ಮೊದಲು ನಿಗದಿಪಡಿಸಿದ್ದ ದಿನದಂದು 'ಜೂಮ್' ತೆರೆ ಕಾಣುತ್ತಿರೋದು ಒಂದ್ಕಡೆಯಾದರೆ, ಇನ್ನೊಂದು ಕಡೆ ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗಿಲ್ಲ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ತರಾತುರಿಯಲ್ಲಿ ಸೆನ್ಸಾರ್ ಮಾಡಿಸಿ, ಥಿಯೇಟರ್ ಗಾಗಿ ಅಲೆದಾಟ ಮಾಡಿ, ಕೆಲಸ ಕೆಡುವುದು ಬೇಡ ಅಂತ ಸಿನಿಮಾ ರಿಲೀಸ್ ಮುಂದೂಡಲಾಗಿದೆ.[ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!]

  ಹಾಗಾದ್ರೆ 'ರನ್ ಆಂಟನಿ' ಯಾವಾಗ ತೆರೆಗೆ ಬರೋದು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಖಚಿತ ಉತ್ತರ ನಾಳೆ ದೊರೆಯಲಿದೆ. ಅದು ಮಾತ್ರವಲ್ಲದೇ ಜುಲೈ 15 ಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರ ರಿಲೀಸ್ ಇರುವುದರಿಂದ ಎಲ್ಲಾ ಅನುಕೂಲತೆಗಳನ್ನು ನೋಡಿಕೊಂಡು 'ರನ್ ಆಂಟನಿ' ರಿಲೀಸ್ ಮಾಡಲು ರಾಘವೇಂದ್ರ ರಾಜ್ ಕುಮಾರ್ ಅವರು ನಿರ್ಧರಿಸಿದ್ದಾರೆ.[ವಿನಯ್ ರಾಜ್ ಕುಮಾರ್ ಥಿಯೇಟರ್ ಗೆ ಯಾವಾಗ ಓಡಿ ಬರೋದು?]

  ಒಟ್ನಲ್ಲಿ 'ರನ್ ಆಂಟನಿ' ನೋಡಲು ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದ್ದು, ವಿನಯ್ ರಾಜ್ ಕುಮಾರ್ ಅವರನ್ನು ತೆರೆಯ ಮೇಲೆ ನೋಡಲು ಇನ್ನೊಂದು ಎರಡು ವಾರ ಕಾಯಬೇಕೆಂದೆನಿಸುತ್ತಿದೆ.

  English summary
  Kannada Actor Vinay Rajkumar, Actress Rukhsar, Actress Sushmitha starrer Kannada Movie 'Run Antony' has release postponed due to various reasons. Earlier, the film was scheduled for a July 1st release. The movie is directed by Raghu Shastry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X