For Quick Alerts
  ALLOW NOTIFICATIONS  
  For Daily Alerts

  ನನ್ನ ತಟ್ಟೆಯ ಅನ್ನವನ್ನೇಕೆ ಕಸಿದುಕೊಳ್ಳುತ್ತೀರಿ: ವಿನೋದ್ ಪ್ರಭಾಕರ್ ಬೇಸರ

  |

  'ರಾಬರ್ಟ್' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾದ ಬಳಿಕ ಮತ್ತೆ ವಿನೋದ್ ಪ್ರಭಾಕರ್‌ಗೆ ಮತ್ತೆ ಬೇಡಿಕೆ ಚಿಗುರಿದೆ.

  ಕೆಲವರು ಮಾಡಿದ ನೀಚ ಕೆಲಸಕ್ಕೆ ಬೇಸರಗೊಂಡ ವಿನೋದ್ ಪ್ರಭಾಕರ್ | Filmibeat Kannada

  ಆದರೆ ಇದೆ ಹೊತ್ತಿನಲ್ಲಿ ವಿನೋದ್ ಪ್ರಭಾಕರ್‌ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಲು ಆರಂಭವಾಗಿ ಸಿಗಬೇಕಿದ್ದ ಅವಕಾಶಗಳು ಕೈತಪ್ಪಿ ಹೋಗುತ್ತಿವೆ. ಈ ಬಗ್ಗೆ ಸ್ವತಃ ವಿನೋದ್ ಪ್ರಭಾಕರ್ ಇತ್ತೀಚಿಗೆ ನಡೆದ 'ವರದ' ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

  ''ರಾಬರ್ಟ್' ಸಿನಿಮಾ ಬಳಿಕ ವಿನೋದ್ ಪ್ರಭಾಕರ್ ಅಹಂಕಾರಿ ಆಗಿದ್ದಾನೆ, ಕೋಟ್ಯಂತರ ರುಪಾಯಿ ಸಂಭಾವನೆ ಡಿಮ್ಯಾಂಡ್ ಮಾಡ್ತಾನೆ ಎಂಬೆಲ್ಲ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವೆಲ್ಲವೂ ಸುಳ್ಳು ಸುದ್ದಿಗಳಾಗಿದ್ದು, ನಾನು ಎಂದೂ ಸಂಭಾವನೆ ಡಿಮ್ಯಾಂಡ್ ಮಾಡಿದವನಲ್ಲ. ಒಳ್ಳೆಯ ಕತೆ, ಮೇಕಿಂಗ್‌ಗೆ ಡಿಮ್ಯಾಂಡ್ ಮಾಡುತ್ತೇನೆ ಅಷ್ಟೆ'' ಎಂದಿದ್ದಾರೆ ವಿನೋದ್.

  ನನ್ನ ಸ್ಟೇಟಸ್ ಏನು ಎಂಬುದು ನನಗೆ ಗೊತ್ತಿದೆ: ವಿನೋದ್

  ನನ್ನ ಸ್ಟೇಟಸ್ ಏನು ಎಂಬುದು ನನಗೆ ಗೊತ್ತಿದೆ: ವಿನೋದ್

  ''ಯಾರೇ ಕತೆ ಹೇಳೋಕೆ ಬಂದರು ಮೊದಲ ಅವರ ಬಜೆಟ್ ಕೇಳುತ್ತೇನೆ. ನನ್ನ ಸಿನಿಮಾಕ್ಕೆ ಎಷ್ಟು ಲಾಭ ಬರಬಹುದು ಎಂಬ ಅಂದಾಜು ನನಗೆ ಇದೆ. ಹಾಗಾಗಿ ಅವರಿಗೆ ಇಷ್ಟು ಬಜೆಟ್ ಒಳಗೆ ಸಿನಿಮಾ ಮಾಡಿ ಎಂದು ನಾನೇ ಹೇಳಿಬಿಡುತ್ತೇನೆ. ನನ್ನ ಸ್ಟೇಟಸ್ ಏನು ಎಂದು ನನಗೆ ಗೊತ್ತಿದೆ'' ಎಂದಿದ್ದಾರೆ ವಿನೋದ್ ಪ್ರಭಾಕರ್.

  ''ವಿನೋದ್ ಜೊತೆ ಸಿನಿಮಾ ಮಾಡಿ ಲಾಸ್‌ ಆದೆ ಅನ್ತಾರೆ''

  ''ವಿನೋದ್ ಜೊತೆ ಸಿನಿಮಾ ಮಾಡಿ ಲಾಸ್‌ ಆದೆ ಅನ್ತಾರೆ''

  ''10 ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿ ಐದು ಕೋಟಿ ಮಾತ್ರ ರಿಕವರಿ ಆಯ್ತು ಎಂದರೆ ಹೊರಗೆ ಹೋಗಿ ವಿನೋದ್ ಜೊತೆ ಸಿನಿಮಾ ಮಾಡಿ 10 ಕೋಟಿ ಹೋಯ್ತು ಅಂತ ಹೇಳಿಕೊಳ್ತಾರೆ. ಅದೇ 5 ಕೋಟಿ ಒಳಗೆ ಸಿನಿಮಾ ಮಾಡಿದ್ರೆ 5.50 ವಾಪಸ್ ಬಂದ್ರೂ ಸಾಕು. ಅವರೇ ಬಂದು ಇನ್ನೂ ನೂರು ಸಿನಿಮಾ ನನ್ನ ಜೊತೆ ಮಾಡ್ತಾರೆ'' ಎಂದು ಲೆಕ್ಕ ಕೊಟ್ಟಿದ್ದಾರೆ ವಿನೋದ್ ಪ್ರಭಾಕರ್.

  ನನ್ನ ಅನ್ನ ಕಸಿಯುವ ಕೆಲಸ ಮಾಡಬೇಡಿ: ವಿನೋದ್

  ನನ್ನ ಅನ್ನ ಕಸಿಯುವ ಕೆಲಸ ಮಾಡಬೇಡಿ: ವಿನೋದ್

  ''ನನ್ನ ಮೇಲೆ ಬಂಡವಾಳ ಹೂಡಲು ಬರುವ ನಿರ್ಮಾಪಕ ಸೇಫ್ ಆಗಿರಲಿ ಎಂದು ನಾನು ಸದಾ ಬಯಸುತ್ತೀನಿ. ನನ್ನ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲ ಬ್ಯುಸಿನೆಸ್‌ನಲ್ಲೂ ನಾನು ಉತ್ಸಾಹದಿಂದ ತೊಡಗಿಸಿಕೊಳ್ಳುತ್ತೀನಿ. ದಯವಿಟ್ಟು ನನ್ನ ವಿರುದ್ಧ ಅಪಪ್ರಚಾರ ಮಾಡಬೇಡಿ. ನನ್ನ ಅನ್ನವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಬೇಡಿ'' ಎಂದಿದ್ದಾರೆ ವಿನೋದ್ ಪ್ರಭಾಕರ್.

  'ವರದ' ಸಿನಿಮಾದಲ್ಲಿ ವಿನೋದ್ ಪ್ರಭಾಕರ್

  'ವರದ' ಸಿನಿಮಾದಲ್ಲಿ ವಿನೋದ್ ಪ್ರಭಾಕರ್

  ವಿನೋದ್ ಪ್ರಭಾಕರ್ 'ವರದ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ವಿನೋದ್ ಜೊತೆಗೆ ನಟ ಚರಣ್ ರಾಜ್ ಸಹ ನಟಿಸುತ್ತಿದ್ದಾರೆ. ನಾಯಕಿಯಾಗಿ ಅಮಿತಾ ನಟಿಸಿದ್ದಾರೆ. ಮಠ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ತಂದೆ-ಮಗನ ಬಾಂಧವ್ಯದ ಬಗ್ಗೆ ಹೇಳುವ ಕತೆಯಾಗಿದೆ ಎಂದಿದ್ದಾರೆ ವಿನೋದ್ ಪ್ರಭಾಕರ್.

  English summary
  Vinod Prabhakar request people to not spread fake news about him and his remuneration. He said i always try to safe my producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X