»   » 'ಜಗ್ಗುದಾದ'ನ ಸ್ನೇಹದ ಬಗ್ಗೆ ಭಾವುಕರಾದ 'ಮರಿ ಟೈಗರ್'

'ಜಗ್ಗುದಾದ'ನ ಸ್ನೇಹದ ಬಗ್ಗೆ ಭಾವುಕರಾದ 'ಮರಿ ಟೈಗರ್'

Posted By:
Subscribe to Filmibeat Kannada

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋಡಿ ಮೆಚ್ಚಿಕೊಂಡು, ಹೈದರಾಬಾದ್ ನಿಂದ ವಿಡಿಯೋ ಕೂಡ ಮಾಡಿ ಕಳುಹಿಸಿದ್ದರು. ಗೆಳೆಯನ ಚಿತ್ರಕ್ಕೆ ಒಳ್ಳಯದಾಗಲಿ ಎಂದು ಸಂಪೂರ್ಣ ಬೆಂಬಲ ಕೊಟ್ಟಿದ್ದರು.

ಇದೀಗ, ಸ್ನೇಹಿತನ ಈ ಬೆಂಬಲಕ್ಕೆ ವಿನೋದ್ ಪ್ರಭಾಕರ್ ಧನ್ಯವಾದಗಳನ್ನ ತಿಳಿಸಿದ್ದಾರೆ. ದರ್ಶನ್ ಯಾವ ರೀತಿ, ಟೈಗರ್ ಗೆ ಸಪೋರ್ಟ್ ಮಾಡಿದ್ರು ಎಂಬುದುನ್ನ ಬಿಚ್ಟಿಟ್ಟಿದ್ದಾರೆ.

ಅಷ್ಟೇ ಅಲ್ಲದೇ ದರ್ಶನ್ ಮತ್ತು ವಿನೋದ್ ಪ್ರಭಾಕರ್ ನಡುವಿನ ಸ್ನೇಹ ಸಂಬಂಧದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಮುಂದೆ ಓದಿ......

ನನ್ನ ಆತ್ಮೀಯ ಗೆಳೆಯ

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನನ್ನ ಆತ್ಮೀಯ ಗೆಳೆಯ. ಲವ್ ಯೂ ಬಾಸ್. ನಾನು ಅವರನ್ನ ಪ್ರೀತಿಯಿಂದ 'ಬಿಗ್ ಬಾಸ್', ಚಾಲೆಂಜಿಂಗ್ ಸ್ಟಾರ್ ಅಂತ ಕರೆಯುತ್ತೇನೆ'' - ವಿನೋದ್ ಪ್ರಭಾಕರ್, ನಟ

ಸ್ನೇಹಕ್ಕಾಗಿ ಪ್ರಾಣ ಕೊಡ್ತಾರೆ

''ದರ್ಶನ್ ಅವರನ್ನ ತುಂಬ ಜನ ಅರ್ಥ ಮಾಡಿಕೊಳ್ಳಲ್ಲ. ಯಾಕಂದ್ರೆ, ಅವರು ಒರಟು ಅಂತ. ಆದ್ರೆ. ಸ್ನೇಹಕೋಸ್ಕರ ಪ್ರಾಣ ಕೊಡ್ತಾರೆ. ಅವರು ಎಷ್ಟೊಂದು ಜನಕ್ಕೆ ಒಳ್ಳೆಯದು ಮಾಡಿದ್ದಾರೆ. ಆದ್ರೆ, ಯಾರಿಗೂ ಗೊತ್ತಾಗಲ್ಲ ಅಷ್ಟೇ. ಬಲಗೈಯಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗಬಾರದು ಎಂಬ ಸ್ವಭಾವ ಅವರದ್ದು'' - ವಿನೋದ್ ಪ್ರಭಾಕರ್, ನಟ

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

ಟ್ರೈಲರ್ ನೋಡಿ ಸಂತೋಷ ಪಟ್ಟಿದ್ದರು

''ಮೊದಲು ಅವರಿಗೆ ಟ್ರೈಲರ್ ತೋರಿಸಿದ್ದೆ. ಬರಿ ಟ್ರೈಲರ್ ನೋಡಿಯೇ ನನಗೆ ಹೊಗಳಿದ್ದರು. ಹೇರ್ ಸ್ಟೈಲ್, ಕಾಮಿಡಿ, ಪೊಲೀಸ್ ಗೆಟಪ್ ಹೀಗೆ....ಎಲ್ಲವೂ ಚೆನ್ನಾಗಿದೆ ಎಂದಿದ್ದರು.

ಆಪ್ತಮಿತ್ರನ ಸಿನಿಮಾ ನೋಡಿ ವಿಡಿಯೋ ಕಳುಹಿಸಿದ 'ಡಿ-ಬಾಸ್'.! ಏನಂದ್ರು.?

ಸಿನಿಮಾ ನೋಡ್ಬೇಕು ಅಂತ ಫೋನ್ ಮಾಡಿದ್ರು

'ಕ್ರ್ಯಾಕ್' ಚಿತ್ರದ ಬಗ್ಗೆ ಅವರೇ ಫೋನ್ ಮಾಡಿ ಮೈಸೂರು, ಎಲ್ಲ ಕಡೆ ವಿಚಾರಿಸಿದ್ದಾರೆ. ರೆಸ್ಪಾನ್ಸ್ ಕೇಳ್ಕೊಂಡು, ನನಗೆ ಫೋನ್ ಮಾಡಿದ್ರು. ಟೈಗರ್ ಸಿನಿಮಾ ನೋಡ್ಬೇಕು ಅಂತ. ಆಮೇಲೆ, ನಾನು ನಿರ್ಮಾಪಕರಿಗೆ ಫೋನ್ ಮಾಡಿ ಒಂದು ಸಿಡಿ ಸಿದ್ದ ಮಾಡಿ, ಹೈದರಾಬಾದ್ ಗೆ ಕೊರಿಯರ್ ಮಾಡಿದ್ವಿ. ನಂತರ ಸಿನಿಮಾ ನೋಡಿ ನಮಗೆ ಫುಲ್ ಸಪೋರ್ಟ್ ಮಾಡಿದ್ರು.

ಥ್ಯಾಂಕ್ ಯೂ ದರ್ಶನ್ ಸರ್

''ನನ್ನ ಪರವಾಗಿ, ಕರ್ನಾಟಕದ ಜನತೆಗೆ, ಅವರ ಅಭಿಮಾನಿಗಳಿಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು. ನಮ್ಮ ತಂದೆ ಅವರಂತೆ ನಾನು ಬೆಳೆಯಬೇಕು ಎಂದು ಆಶಿಸಿದರು. ಸೋ ಥ್ಯಾಂಕ್ ಯೂ ದರ್ಶನ್ ಸರ್'' ಎಂದು ತಮ್ಮ ಮನದಾಳದ ಮಾತುಗಳನ್ನ ನಟ ವಿನೋದ್ ಪ್ರಭಾಕರ್ ಹೊರ ಹಾಕಿದರು.

English summary
Kannada Actor Vinod Prabhakar speaks about Challenging Star Darshan friendship.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada