twitter
    For Quick Alerts
    ALLOW NOTIFICATIONS  
    For Daily Alerts

    ಡಾ ವಿಷ್ಣು ಸ್ಮಾರಕ ವಿನ್ಯಾಸ: ವಾಹ್....ಎನ್ನುವಂತಿದೆ ಯೋಜನೆಗಳು, ಏನೆಲ್ಲ ಇರಲಿದೆ?

    |

    ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ಕಾರ್ಯ ನಡೆದಿದೆ. ಸಿಎಂ ಯಡಿಯೂರಪ್ಪ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಕಳೆದ ಹತ್ತು ವರ್ಷದಿಂದ ಸ್ಮಾರಕ ವಿಚಾರದಲ್ಲಿ ಏಳುಬೀಳುಗಳನ್ನು ಕಂಡ ವಿಷ್ಣುವರ್ಧನ್ ಕುಟುಂಬ ಅಂತಿಮವಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವಲ್ಲಿ ಮುನ್ನಡೆ ಸಾಧಿಸಿದೆ.

    ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಹೇಳಿದಂತೆ ಇದು ಬರಿ ಸ್ಮಾರಕವಲ್ಲ, ಗ್ರಂಥಾಲಯ, ಸ್ಟುಡಿಯೋ, ಕಲಿಕೆಯ ತರಬೇತಿ ಕೇಂದ್ರ ಹೀಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರು ಎಂ9 ಸ್ಡುಡಿಯೋ ಅವರು ನೀಲಿಚಿತ್ರ (blueprint) ಬಿಡುಗಡೆ ಮಾಡಿದ್ದಾರೆ. ವಿಷ್ಣು ಸ್ಮಾರಕ ಆವರಣದಲ್ಲಿ ಏನೆಲ್ಲ ಇರಲಿದೆ ಎಂಬ ಚಿತ್ರಗಳು ಗಮನ ಸೆಳೆಯುತ್ತಿದೆ. ಮುಂದೆ ಓದಿ...

    20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು! 20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು!

    5 ಎಕೆರೆ ಜಾಗದಲ್ಲಿ ವಿಷ್ಣು ಸ್ಮಾರಕ

    5 ಎಕೆರೆ ಜಾಗದಲ್ಲಿ ವಿಷ್ಣು ಸ್ಮಾರಕ

    ಮೈಸೂರಿನ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಒಟ್ಟು 11 ಕೋಟಿ ರೂಪಾಯಿ ಯೋಜನೆ ಇದಾಗಿದೆ.

    ವಿಷ್ಣು ಪುತ್ಥಳಿಯೂ ಇರಲಿದೆ

    ವಿಷ್ಣು ಪುತ್ಥಳಿಯೂ ಇರಲಿದೆ

    ಎಂ9 ಸ್ಡುಡಿಯೋ ಅವರು ವಿಷ್ಣು ಸ್ಮಾರಕದ ವಿನ್ಯಾಸ ಮಾಡಿದ್ದು, ಆವರಣದಲ್ಲಿ ಏನೆಲ್ಲ ಇರಲಿದೆ ಎಂಬ ನೀಲಿಚಿತ್ರ ಪ್ರಸ್ತುತಪಡಿಸಿದ್ದಾರೆ. 2 ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ತಲೆ ಎತ್ತಲಿದೆ. ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ನಿರ್ಮಾಣವಾಗಲಿದೆ.

    ಸ್ಮಾರಕ ಮತ್ತು ಗ್ಯಾಲರಿ

    ಸ್ಮಾರಕ ಮತ್ತು ಗ್ಯಾಲರಿ

    ಸ್ಮಾರಕ ಚಿತ್ರ ಮತ್ತು ಗ್ಯಾಲರಿಯನ್ನು 35.40 ಮೀಟರ್ ವೃತ್ತಾಕಾರದಲ್ಲಿ ನಿರ್ಮಿಸಲಾಗುತ್ತಿದ್ದು, ಗ್ಯಾಲರಿಯ ಮುಂಭಾಗದಲ್ಲಿ ನೀರಿನ ಚಿಲುಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನೀರಿನ ಚಿಲುಮೆಯ ಮುಂಭಾಗದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.

    ಸಭಾಂಗಣ ಕಟ್ಟಡ

    ಸಭಾಂಗಣ ಕಟ್ಟಡ

    ಕಟ್ಟಡ ವಿನ್ಯಾಸ ನೋಡುವುದಾದರೆ

    ತಳಮಹಡಿ - 457.70 ಚ.ಮೀ

    ನೆಲಮಹಡಿ - 997.00 ಚ.ಮೀ

    ಒಟ್ಟು ವಿಸ್ತೀರ್ಣ - 1454.70 ಚ.ಮೀ

    ಸಭಾಂಗಣ ಕಟ್ಟಡಲ್ಲಿರುವ ಸೌಲಭ್ಯಗಳು

    ಸಭಾಂಗಣ ಕಟ್ಟಡಲ್ಲಿರುವ ಸೌಲಭ್ಯಗಳು

    - ತಳಮಹಡಿಯಲ್ಲಿ ಸಂಭಾಂಗಣ, ಕಲಾವಿದರ ಕೊಠಡಿ ಮತ್ತು ಶೌಚಾಲಯ ಮಾತ್ರ ಇರುತ್ತದೆ.

    -ನೆಲ ಮಹಡಿಯಲ್ಲಿ ಕಲಾವಿದರ ಕೊಠಡಿ ಮತ್ತು ಶೌಚಾಲಯ ಇರುತ್ತದೆ.

    - ಲಾಬಿ

    - 2 ತರಗತಿಗಳ ಕೊಠಡಿ

    - ಡೈರೆಕ್ಟರ್ ಕ್ಯಾಬಿನ್

    ಆಫೀಸ್ ಸ್ಟಾಫ್

    - ಪುರುಷರ ಶೌಚಾಲಯ

    -ಮಹಿಳಾ ಶೌಚಾಲಯ

    Recommended Video

    ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
    ಮ್ಯೂಸಿಯಂ ಇರಲಿದೆ

    ಮ್ಯೂಸಿಯಂ ಇರಲಿದೆ

    ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ.

    English summary
    Dr Vishnuvardhan memorial at Mysuru: Here is the construction budget, plan, designer, front view and more details in kannada.
    Tuesday, September 15, 2020, 14:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X