For Quick Alerts
  ALLOW NOTIFICATIONS  
  For Daily Alerts

  ವಿಷ್ಣು,ಭಾರತಿ ಅಪಾಯದಿಂದ ಪಾರು : ನಿಜಕ್ಕೂ ಪವಾಡ!

  By Super Admin
  |
  ಬೆಂಗಳೂರು, ಸೆಪ್ಟೆಂಬರ್ 11 : ನಟ ಡಾ.ವಿಷ್ಣುವರ್ಧನ್ ಮತ್ತು ಭಾರತಿ ಗಂಡಾಂತರವೊಂದರಿಂದ ಪಾರಾಗಿದ್ದಾರೆ.

  ಸೆ.9ರಂದು ಹೈದರಾಬಾದ್ ನಲ್ಲಿ ಫ್ಲೈಓವರ್ ಕುಸಿತದಿಂದ ಇಬ್ಬರು ಮೃತಪಟ್ಟು, ಸುಮಾರು ಮಂದಿ ಗಾಯಗೊಂಡ ಸುದ್ದಿ ನಿಮಗೆ ಗೊತ್ತು. ಈ ನತದೃಷ್ಟ ಫ್ಲೈಓವರ್ ಬಳಸಿಕೊಂಡು ವಿಷ್ಣುವರ್ಧನ್ ದಂಪತಿಗಳು ಪ್ರಯಾಣ ಮಾಡಬೇಕಿತ್ತು. ಒಂದು ವೇಳೆ ಈ ತಾರಾಜೋಡಿ ಪ್ರಯಾಣ ಮುಂದುವರೆಸಿದ್ದರೆ,ಅಪಾಯ ಸಂಭವಿಸುತ್ತಿತ್ತು ಎನ್ನಲಾಗಿದೆ.

  ತೆಲುಗು ಚಿತ್ರ 'ಧೀ' 150 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾರಂಭಕ್ಕೆ ಕಾರಿನಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ತೆರಳುತ್ತಿದ್ದರು. ಪಂಜಾಗುಡ್ಡ ಫ್ಲೈ ಓವರ್ ಮುಖಾಂತರ ಹೋಗಬೇಕಿತ್ತು. ಇಲ್ಲಿನ ಟ್ರಾಫಿಕ್ ಕಿರಿಕಿರಿಯಿಂದಾಗಿ , ಬೇರೆ ಮಾರ್ಗದಲ್ಲಿ ಅವರ ಕಾರು ಮುಂದುವರೆಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಟ ಮೋಹನ್ ಲಾಲ್ ಕರೆ ಮಾಡಿ, ವಿಷ್ಣುವರ್ಧನ್ ಗೆ ಫ್ಲೈ ಓವರ್ ಕುಸಿತದ ಬಗ್ಗೆ ತಿಳಿಸಿದರು. ಆ ದಾರಿಯಲ್ಲಿ ಬರಲಿಲ್ಲ ಎಂದು ತಿಳಿದು ನೆಮ್ಮದಿಯಿಂದ ಮೋಹನ್ ಲಾಲ್ ನಿಟ್ಟುಸಿರುಬಿಟ್ಟರು.

  ಸೆ.9ರಂದು ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಕೆಳಗಿದ್ದ ಜನ ಅಪಾಯಕ್ಕೆ ಸಿಲುಕಿದ್ದರು. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿ, ಹತ್ತಾರು ಮಂದಿ ಗಾಯಗೊಂಡಿದ್ದರು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X