»   » 'ಬಾಕ್ಸರ್' ನಲ್ಲಿ ಡೈರೆಕ್ಟರ್ ಸ್ಪೆಷಲ್ ಹುಡುಗನ ಜಬರ್ದಸ್ತ್ ಫೈಟ್

'ಬಾಕ್ಸರ್' ನಲ್ಲಿ ಡೈರೆಕ್ಟರ್ ಸ್ಪೆಷಲ್ ಹುಡುಗನ ಜಬರ್ದಸ್ತ್ ಫೈಟ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಡೈರೆಕ್ಟರ್ ಸ್ಪೆಷಲ್ ಹುಡುಗ ಗಾಂಧಿನಗರದಲ್ಲಿ ಇದೀಗ ಸಖತ್ ಬ್ಯುಸಿ ಹೀರೋ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ 'ಬಾಕ್ಸರ್', 'ಬದ್ಮಾಶ್', 'ಜೆಸ್ಸಿ' ಚಿತ್ರವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ಧನಂಜಯ್ ಅವರ 'ಬಾಕ್ಸರ್' ಚಿತ್ರದ ಮತ್ತೊಂದು ಹೊಸ ಟೀಸರ್ ಬಿಡುಗಡೆಯಾಗಿದೆ.

ಧನಂಜಯ್, ಕೃತಿಕಾ ಜಯಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಬಾಕ್ಸರ್' ಚಿತ್ರದ ಟೀಸರ್ ಇಲ್ಲಿದೆ ನೋಡಿ...


watch-kannada-movie-boxer-official-teaser

ಹೆಸರೇ ಹೇಳುವಂತೆ 'ಬಾಕ್ಸರ್' ಚಿತ್ರ ಓರ್ವ ಕಿಕ್ ಬಾಕ್ಸರ್ ಸುತ್ತ ಸುತ್ತುವ ಕಥೆ. ಕಟ್ಟುಮಸ್ತಾದ ದೇಹ ಬೆಳೆಸಿಕೊಂಡು ಸ್ಟಂಟ್ ಮಾಸ್ಟರ್ ರವಿವರ್ಮ ಸಾಹಸ ಸಂಯೋಜನೆಯಲ್ಲಿ ಧನಂಜಯ್ ಜಬರ್ದಸ್ತ್ ಸ್ಟಂಟ್ ಮಾಡಿದ್ದಾರೆ.


'ಇದು ಬಿಗ್ ಬಾಸ್ ಮನೆ ಅಲ್ಲಾ ಬಾಕ್ಸಿಂಗ್ ರಿಂಗ್' ಅಂತ ಸಖತ್ ಪಂಚ್ ಡೈಲಾಗ್ಸ್ ಇರುವುದು ಟೀಸರ್ ನ ಹೈಲೈಟ್. ಸ್ಪೆಷಲ್ ಆಗಿ 'ಬಾಕ್ಸರ್' ಚಿತ್ರಕ್ಕಾಗಿಯೇ ಹಲವು ತಿಂಗಳುಗಳ ಕಾಲ ಟ್ರೈನಿಂಗ್ ಪಡೆದುಕೊಂಡಿರುವ ಧನಂಜಯ್ ಸಖತ್ ಫೈಟ್ ಕೂಡ ಮಾಡಿದ್ದಾರೆ.['ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್]


ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಬರುತ್ತಿರುವ 'ಬಾಕ್ಸರ್' ಚಿತ್ರಕ್ಕೆ 'ದಿಲ್ ರಂಗೀಲಾ'['ದಿಲ್ ರಂಗೀಲಾ': ಸವಕಲು ಕಥೆ ಹೊಸ ನಿರೂಪಣೆ ] ಫೇಮಸ್ ಡೈರೆಕ್ಟರ್ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳಿದ್ದಾರೆ. ಹೊಸ ಪ್ರತಿಭೆ ಕೃತಿಕಾ ಜಯಕುಮಾರ್ ಧನಂಜಯ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ಇನ್ನೂ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ವಿ.ಹರಿಕೃಷ್ಣ ಚಿತ್ರದ ಸುಂದರ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.


ಟೀಸರ್ ಮೂಲಕ ಭಾರಿ ಕೂತೂಹಲ ಸೃಷ್ಟಿಸಿರುವ 'ಬಾಕ್ಸರ್' ತೆರೆ ಕಾಣಲು ಇನ್ನೂ ಟೈಮಿದೆ. 'ಬಾಕ್ಸರ್' ನ ಹೆಚ್ಚಿನ ಸುದ್ದಿಗಾಗಿ 'ಫಿಲ್ಮಿಬೀಟ್' ಕನ್ನಡ ನೋಡುತ್ತಿರಿ.

English summary
Kannada Movie 'Boxer' official Teaser is released. 'Boxer' features Kannada actor Dhananjay, Actress Kruthika Jayakumar in the lead role. The movie is directed by Preetham Gubbi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada