»   » ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?

ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ವೀರಪ್ಪನ್ ಜೀವನ ಚರಿತ್ರೆ ಕುರಿತ ಚಿತ್ರ 'ಅಟ್ಟಹಾಸ' ನಂತ್ರ ನಿರ್ದೇಶಕ ಎ.ಎಮ್.ಆರ್.ರಮೇಶ್ ಕೈಗೆತ್ತಿಕೊಂಡಿರುವ ಚಿತ್ರ 'ಗೇಮ್'. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ 'ಗೇಮ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಬಾಲಿವುಡ್ ನಟಿ ಮನಿಷಾ ಕೊಯಿರಾಲಾ, ಕಾಲಿವುಡ್ ನಟ ಶ್ಯಾಮ್ ನಟಿಸಿರುವ 'ಗೇಮ್' ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿದೆ. ಇತ್ತೀಚೆಗಷ್ಟೆ ರಿಲೀಸ್ ಆಗಿರುವ 'ಗೇಮ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

'ಸೈನೈಡ್' ಮತ್ತು 'ಅಟ್ಟಹಾಸ'ದಂತಹ ಕ್ರೈಂ, ಸಸ್ಪೆನ್ಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ಎ.ಎಮ್.ಆರ್.ರಮೇಶ್, 'ಗೇಮ್' ಚಿತ್ರದ ಮೂಲಕ ಮತ್ತೊಂದು ಕ್ರೈಂ ಕಥೆಯನ್ನ ತೆರೆಮೇಲೆ ಹೇಳಲಿದ್ದಾರೆ. [ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಗೇಮ್' ಶುರು]

'ಗೇಮ್' ಚಿತ್ರದ ಟ್ರೈಲರ್, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತದೆ. ಕೊಲೆ ಕೇಸ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದರೆ, ಕೊಲೆಯಾದ ಹೆಂಗಸಿನ ಪತಿಯಾಗಿ ಶ್ಯಾಮ್ ಅಭಿನಯಿಸಿದ್ದಾರೆ. ಒರ್ವ ಮರ್ಡರ್ ಸುತ್ತ ನಡೆಯುವ ಹಾವು ಏಣಿ ಆಟವೇ ಈ 'ಗೇಮ್'. [ಸ್ಯಾಂಡಲ್ ವುಡ್ ನಲ್ಲಿ ಮನಿಷಾ ಕೊಯಿರಾಲ 'ಗೇಮ್']

game

ಮೂಲಗಳ ಪ್ರಕಾರ, 'ಗೇಮ್' ನೈಜ ಘಟನೆಯನ್ನಾಧರಿಸಿದ ಸಿನಿಮಾ. ಆದ್ರೆ, ಯಾವ ಮರ್ಡರ್ ಮಿಸ್ಟರಿ ಕುರಿತು ಅನ್ನೋದನ್ನ ನಿರ್ದೇಶಕ ಎ.ಎಮ್.ಆರ್.ರಮೇಶ್ ಬಹಿರಂಗ ಮಾಡಿಲ್ಲ. ಬೆಳ್ಳಿತೆರೆ ಮೇಲೆ 'ಗೇಮ್' ನೋಡುವುದಕ್ಕೆ ಇನ್ನೂ ಟೈಮ್ ಇದೆ. ಅದಕ್ಕೂ ಮುನ್ನ ಈ ಟ್ರೈಲರ್ ಒಮ್ಮೆ ನೋಡಿಬಿಡಿ.

English summary
Action King Arjun Sarja, Bollywood Actress Manisha Koirala starrer Kannada-Tamil Bilingual Movie 'Game' trailer is out. Watch AMR Ramesh directorial 'Game' trailer here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada