For Quick Alerts
  ALLOW NOTIFICATIONS  
  For Daily Alerts

  ಟೀಸರ್: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ಕ ಸ್ಪೆಷಲ್ ಗಿಫ್ಟ್ ಇದು

  By Suneetha
  |

  ಕಿಚ್ಚ ಸುದೀಪ್ ಅಂದ್ರೇನೆ ಹಾಗೆ, ಅವರು ತಮ್ಮ ಅಭಿಮಾನಿಗಳಿಗೆ ಕೊಟ್ಟ ಮಾತನ್ನು ಯಾವತ್ತಿಗೂ ಮೀರೊದಿಲ್ಲ. ಈ ಮಾತು ನಾವ್ಯಾಕೆ ಹೇಳಿದ್ವಿ ಅಂದ್ರೆ, ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ದಿನ 'ಹೆಬ್ಬುಲಿ' ಚಿತ್ರದ ಟೀಸರ್ ಬಿಡುಗಡೆ ಮಾಡ್ತೀವಿ, ಅಭಿಮಾನಿಗಳಿಗೆ ಅದೇ ನಮ್ಮ ಕಡೆಯಿಂದ ಸ್ಪೆಷಲ್ ಉಡುಗೊರೆ ಅಂತ ಹೇಳಿದ್ರು.

  ಇದೀಗ ಕೊಟ್ಟ ಮಾತನ್ನು ಉಳಿಸಿಕೊಂಡಿರುವ ನಟ ಸುದೀಪ್ ಅವರು 'ಹೆಬ್ಬುಲಿ' ಚಿತ್ರದ ಸ್ಪೆಷಲ್ ಪೋಸ್ಟರ್ ಜೊತೆಗೆ ಖಡಕ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ನಟ ಸುದೀಪ್ ಅವರು ಎದುರಾಳಿಗಳನ್ನು ಆರ್ಮಿ ಸ್ಟೈಲ್ ನಲ್ಲಿ ಬೇಟೆಯಾಡಲಿದ್ದಾರೆ, ಅನ್ನೋದು ಟೀಸರ್ ನಲ್ಲಿ ಸ್ಪಷ್ಟವಾಗುತ್ತಿದೆ.[ಸುದೀಪ್ 43: ಅಭಿಮಾನಿಗಳಿಂದ ಸಂಭ್ರಮದ 'ಕಿಚ್ಚೋತ್ಸವ 2016' ಆಚರಣೆ]

  ಎಸ್.ಆರ್.ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಹೆಬ್ಬುಲಿ' ಚಿತ್ರಕ್ಕೆ 'ಗಜಕೇಸರಿ' ಖ್ಯಾತಿಯ ನಿರ್ದೇಶಕ ಕೃಷ್ಣ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟು ಒಳಬಂದಿದ್ದು, ಸುದೀಪ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  'ಹೆಬ್ಬುಲಿ' ಟೀಸರ್ ಝಲಕ್ ನ ತುಣುಕುಗಳು ಹಾಗೂ ಟೀಸರ್ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

  ಖಡಕ್ ಲುಕ್ ನಲ್ಲಿ ಸುದೀಪ್

  ಖಡಕ್ ಲುಕ್ ನಲ್ಲಿ ಸುದೀಪ್

  ವಿಭಿನ್ನ ಗೆಟಪ್, ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿರುವ ಸುದೀಪ್ ಅವರು 'ಹೆಬ್ಬುಲಿ'ಯಲ್ಲಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಮಿ ಸ್ಟೈಲ್ ನಲ್ಲಿ ಕೈಯಲ್ಲಿ ಗನ್ ಹಿಡಿದು ವಿಲನ್ ಗಳ ಬೇಟೆಯಾಡುತ್ತಿದ್ದಾರೆ 'ಹೆಬ್ಬುಲಿ' ಕಿಚ್ಚ.['ಹೆಬ್ಬುಲಿ'ಯಲ್ಲಿ ಸುದೀಪ್ ಗೆ ಎದುರಾಗಲಿರುವ ವಿಲನ್ ಇವರೇ]

  ಎದುರಾಳಿಗಳ ಎದೆ ಸೀಳುತ್ತಿವೆ ಕಿಚ್ಚನ ಗನ್

  ಎದುರಾಳಿಗಳ ಎದೆ ಸೀಳುತ್ತಿವೆ ಕಿಚ್ಚನ ಗನ್

  ಮೆಶಿನ್ ಗನ್ ಗಳಿಂದ ರಾಕೆಟ್ ನಂತೆ ಹೊರಬರುವ ಬುಲೆಟ್ ಗಳು ಎದುರಾಳಿಯ ಎದೆಯನ್ನು ಸೀಳುತ್ತಿದ್ದರೆ, ಸುದೀಪ್ ಅವರು ಅಕ್ಷರಶಃ 'ಹೆಬ್ಬುಲಿ'ಯಂತೆ ಘರ್ಜಿಸುತ್ತಾ, ಎದುರಾಳಿಗಳ ಮೇಲೆರೆಗುತ್ತಿದ್ದಾರೆ.['ಹೆಬ್ಬುಲಿ' ಕಿಚ್ಚನ ಮತ್ತೊಂದು ಶಿಕಾರಿ ಕಬೀರ್ ದುಹಾನ್]

  ಮನರಂಜನೆಯ ಧಮಾಕ

  ಮನರಂಜನೆಯ ಧಮಾಕ

  ಈಗಾಗಲೇ ಬಿಡುಗಡೆ ಆಗಿರುವ 'ಹೆಬ್ಬುಲಿ' ಟೀಸರ್ ನೋಡುತ್ತಿದ್ದರೆ, 'ಕೋಟಿಗೊಬ್ಬ 2' ಚಿತ್ರದ ನಂತರ ಮತ್ತೆ ಅಭಿಮಾನಿಗಳಿಗೆ ಮನರಂಜನೆಯ ಧಮಾಕಾ ಪಕ್ಕಾ ಎಂದೆನಿಸುತ್ತಿದೆ.['ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?]

  ಫ್ಯಾಮಿಲಿ ಎಂರ್ಟಟೈನರ್

  ಫ್ಯಾಮಿಲಿ ಎಂರ್ಟಟೈನರ್

  ಸಖತ್ ಆಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಲವ್-ರೋಮ್ಯಾನ್ಸ್ ಸೀಕ್ವೆನ್ಸ್ ಇರೋ 'ಹೆಬ್ಬುಲಿ' ಭರಪೂರ ಮನರಂಜನೆಯುಳ್ಳ ಸಿನಿಮಾ ಆಗಬಹುದು ಎಂಬ ಸೂಚನೆಯನ್ನು ಟೀಸರ್ ನೀಡುತ್ತಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್

  ಕ್ರೇಜಿಸ್ಟಾರ್ ರವಿಚಂದ್ರನ್

  'ಮಾಣಿಕ್ಯ' ಚಿತ್ರದ ನಂತರ ರವಿಚಂದ್ರನ್ ಮತ್ತು ಸುದೀಪ್ ಅವರು ಮತ್ತೆ ಒಂದಾಗಿದ್ದು, ಈ ಬಾರಿ ರವಿಚಂದ್ರನ್ ಅವರು ಸುದೀಪ್ ಅವರ ಅಣ್ಣನ ಪಾತ್ರದಲ್ಲಿ ಮಿಂಚಿದ್ದಾರೆ.

  ಟಕ್ಕರ್ ಕೊಡಲಿರೋ ಇಬ್ಬರು ವಿಲನ್ ಗಳು

  ಟಕ್ಕರ್ ಕೊಡಲಿರೋ ಇಬ್ಬರು ವಿಲನ್ ಗಳು

  ಘಟಾನುಘಟಿ ವಿಲನ್ ಗಳು ಈ ಚಿತ್ರದಲ್ಲಿದ್ದು, 'ವೇದಲಂ' ಖ್ಯಾತಿಯ ಕಬೀರ್ ದುಹಾನ್ ಸಿಂಗ್, 'ರೇಸ್ ಗುರ್ರಂ' ಖ್ಯಾತಿಯ ರವಿ ಕಿಶನ್ ಮತ್ತಿತ್ತರರು ಸುದೀಪ್ ಅವರಿಗೆ ಟಕ್ಕರ್ ಕೊಡಲಿದ್ದಾರೆ.

  ಯಾವಾಗ 'ಹೆಬ್ಬುಲಿ' ಘರ್ಜನೆ

  ಯಾವಾಗ 'ಹೆಬ್ಬುಲಿ' ಘರ್ಜನೆ

  ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಎರಡನೇ ಹಂತದ ಚಿತ್ರೀಕರಣ ಕಾಶ್ಮೀರದಲ್ಲಿ ಸಾಗುತ್ತಿದೆ. ಒಟ್ನಲ್ಲಿ ಡಿಸೆಂಬರ್ ತಿಂಗಳಿನಲ್ಲಿ, ಎಲ್ಲಾ ಚಿತ್ರಮಂದಿರಗಳಲ್ಲಿ 'ಹೆಬ್ಬುಲಿ' ಘರ್ಜನೆ ಕೇಳುವ ಸಾಧ್ಯತೆ ಇದೆ.

  ಟೀಸರ್ ನೋಡಿ

  ಟೀಸರ್ ನೋಡಿ

  ಖಡಕ್ ಲುಕ್ ನಲ್ಲಿ ಮಿಂಚಿರುವ ಸುದೀಪ್ ಅವರ ಆಕ್ಷನ್-ಫೈಟ್ ಝಲಕ್ ನ ವಿಡಿಯೋ ನೋಡಿ ಈ ಟೀಸರ್ ನಲ್ಲಿ.....

  English summary
  Watch Kannada Movie 'Hebbuli' Official Teaser, starring Kichcha Sudeepa, V.Ravichandran, Amala Paul, Ravishankar, Ravikishen, Chikkanna. Written & Directed by Krishna. Music By Arjun Janya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X