»   » ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!

ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!

Posted By: ಭರತ್ ಕುಮಾರ್
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಈಗ ವಿಷ್ಣುವರ್ಧನ್‌ ರವರ ಪರ್ವ ಕಾಲ ಅಂದ್ರೆ ಖಂಡಿತ ತಪ್ಪಾಗಲ್ಲ. ಯಾಕಂದ್ರೆ, ಇತ್ತೀಚಿನ ಚಿತ್ರಗಳಲ್ಲಿ 'ಸಾಹಸ ಸಿಂಹ'ನ ಘರ್ಜನೆಯೇ ಹೆಚ್ಚು. ಡಾ.ವಿಷ್ಣುವರ್ಧನ್ ರವರಿಗೆ ತೆರೆಮೇಲೆ ಮರು ಜೀವ ನೀಡಿರುವ 'ನಾಗರಹಾವು' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇನ್ನೂ ಸುದೀಪ್ ರವರ 'ಕೋಟಿಗೊಬ್ಬ-2' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರವರನ್ನ ನೆನಪು ಮಾಡಿಕೊಳ್ಳಲಾಗಿತ್ತು. ಹಾಗಂತ, ಬರೀ ಸುದೀಪ್ ಮಾತ್ರ ವಿಷ್ಣು ದಾದಾ ರವರನ್ನ ನೆನಪು ಮಾಡಿಕೊಳ್ಳುತ್ತಾರೆ ಅಂತಲ್ಲ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನೇ ತೆಗೆದುಕೊಳ್ಳಿ...ಆ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿ ಆಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದರು. ವಿಷ್ಣು ರವರ 'ನಾಗರಹಾವು' ಚಿತ್ರದ ರಾಮಾಚಾರಿಯಂತೆ ಸದಾ ಬುಸುಗುಡುವ ಯುವಕನಾಗಿ ಯಶ್ ಮಿಂಚಿದ್ದರು.

ಈಗ ಡಾ.ಶಿವರಾಜ್ ಕುಮಾರ್ ಸರದಿ. 'ರಾಮಾಚಾರಿ' ಆಗಿ 'ನಾಗರಹಾವಿನ' ಹನ್ನೆರಡು ವರ್ಷದ ಸೇಡನ್ನ ಹೊತ್ತು, 'ಶ್ರೀಕಂಠ'ನ ಅವತಾರ ತಾಳಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಇಂಟ್ರೆಸ್ಟಿಂಗ್ ಅನಿಸಿದ್ರೆ, ಹೆಚ್ಚಿನ ಮಾಹಿತಿ ಓದಿ....

'ಶ್ರೀಕಂಠ'ನ ಅವತಾರ ತಾಳಿದ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿರುವ ಹೊಚ್ಚ ಹೊಸ ಸಿನಿಮಾ 'ಶ್ರೀಕಂಠ' ಟೀಸರ್ ಇವತ್ತು ಬಿಡುಗಡೆ ಆಗಿದೆ. 'ಶ್ರೀಕಂಠ' ಟೀಸರ್ ನೋಡಿದವರಿಗೆ 'ಬಿಗ್' ಸರ್ ಪ್ರೈಸ್ ಆಗಲು ಕಾರಣ 'ನಾಗರಹಾವು'.! ['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]

'ನಾಗರಹಾವು'ಗೂ 'ಶ್ರೀಕಂಠ'ಗೂ ಏನು ಸಂಬಂಧ.?

'ಶ್ರೀಕಂಠ' ಚಿತ್ರದ ಬಗ್ಗೆ ಇದುವರೆಗೂ ಇದ್ದ ಕುತೂಹಲ ಇವತ್ತು ಡಬಲ್ ಆಗುವುದಕ್ಕೆ ಕಾರಣ 'ನಾಗರಹಾವು'. 'ಶ್ರೀಕಂಠ' ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ರವರ ಸೂಪರ್ ಹಿಟ್ 'ನಾಗರಹಾವು' ಚಿತ್ರದ 'ಹಾವಿನ ದ್ವೇಷ ಹನ್ನೆರಡು ವರ್ಷ..' ಹಾಡಿನ ಟ್ರ್ಯಾಕ್ ಬಳಸಿಕೊಳ್ಳಲಾಗಿದೆ. ಹೀಗಾಗಿ, 'ನಾಗರಹಾವು' ಚಿತ್ರಕ್ಕೂ 'ಶ್ರೀಕಂಠ' ಚಿತ್ರಕ್ಕೂ ಏನಾದ್ರೂ ಲಿಂಕ್‌ ಇದಿಯಾ ಎಂಬ ಡೌಟ್ ಅಭಿಮಾನಿಗಳನ್ನ ಕಾಡುತ್ತಿದೆ

ಬುಸುಗುಡುವ ಶಿವಣ್ಣ.!

'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಹೇಗೆ ಕಾಣಿಸಿಕೊಂಡಿದ್ರೋ, ಸೇಮ್ ಟು ಸೇಮ್ ಅದೇ 'ಆಂಗ್ರಿ ಯಂಗ್ ಮ್ಯಾನ್' ಆಗಿ 'ಶ್ರೀಕಂಠ' ಚಿತ್ರದಲ್ಲಿ ಶಿವರಾಜ್ ಕುಮಾರ್ ಬುಸುಗುಟ್ಟಿದ್ದಾರೆ. [ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ]

ವಿಷ್ಣು ಸ್ಟೈಲ್ ನಲ್ಲಿ ಶಿವಣ್ಣ.!

ಥೇಟ್ ವಿಷ್ಣುವರ್ಧನ್ ರವರ ಸ್ಟೈಲ್ ನಲ್ಲಿ ಕೈಗೆ ಕಡಗ ತೊಟ್ಟು ಶಿವಣ್ಣ ಹೇಗೆ ಕಾಣಿಸಿಕೊಂಡಿದ್ದಾರೆ ಅಂತ ನೀವೇ ನೋಡಿ....

'ಶ್ರೀಕಂಠ' ಚಿತ್ರದಲ್ಲಿ ವಿಷ್ಣು ಅಭಿಮಾನಿ ಆದ್ರಾ ಶಿವಣ್ಣ?

ಇದನ್ನೆಲ್ಲಾ ನೋಡಿದ್ಮೇಲೆ, 'ಶ್ರೀಕಂಠ' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರವರ ಅಭಿಮಾನಿ ಆಗಿ ಶಿವರಾಜ್ ಕುಮಾರ್ ಅಭಿನಯಿಸಿರಬಹುದಾ ಎಂಬ ಅನುಮಾನ 'ಶಿವ ಭಕ್ತ'ರಿಗೆ ಕಾಡುತ್ತಿದೆ.

ಇದೇ ಮೊದಲು

ಇಲ್ಲಿಯವರೆಗೂ ಶಿವರಾಜ್ ಕುಮಾರ್‌ ಅಭಿನಯದ ಚಿತ್ರಗಳಲ್ಲಿ ವಿಷ್ಣು ರವರನ್ನಾಗಲಿ, ಅವರ ಚಿತ್ರಗಳ ಹೆಸ್ರನ್ನಾಗಲಿ ಬಳಿಸಿರಲಿಲ್ಲ. ಆದ್ರೆ, ಇದೇ ಮೊದಲ ಬಾರಿಗೆ ಶ್ರೀಕಂಠ ಚಿತ್ರದಲ್ಲಿ ಇದು ಸಾಧ್ಯವಾಗಿದೆ.

ಕಾಮನ್‌ ಮ್ಯಾನ್‌ 'ಶಿವಣ್ಣ'

ಹೇಳಿ ಕೇಳಿ, 'ಶ್ರೀಕಂಠ', ಸಮಾಜಮುಖಿ ಕಥೆಯಾಗಿರುವುದರಿಂದ, ಚಿತ್ರದಲ್ಲಿ ದುಷ್ಟರ ವಿರುದ್ಧ ಸಿಡಿದೇಳುವ ಕಾಮನ್ ಮ್ಯಾನ್ ಆಗಿ 'ಕರುನಾಡ ಚಕ್ರವರ್ತಿ' ಮಿಂಚಿದ್ದಾರೆ. ['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

ಚಿತ್ರದಲ್ಲಿದ್ಯಾ 'ಕಾವೇರಿ' ವಿವಾದ?

'ಶ್ರೀಕಂಠ' ಚಿತ್ರದ ಟೀಸರ್ ನೋಡ್ತಿದ್ರೆ, ಕಾವೇರಿ ಗಲಭೆ ಪ್ರಕರಣವೂ ಚಿತ್ರದಲ್ಲಿದ್ಯಾ ಎಂಬ ಅನುಮಾನ ಕಾಡದೆ ಇರಲ್ಲ.

'ಶ್ರೀಕಂಠ' ಬಿಡುಗಡೆ ಯಾವಾಗ?

'ಶ್ರೀಕಂಠ' ಚಿತ್ರಕ್ಕೆ ಮಂಜು ಸ್ವರಾಜ್‌ ಸಾರಥಿ. ಎಂ.ಎಸ್‌.ಮನುಗೌಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಮಲಯಾಳಂ ನಟಿ ಚಾಂದಿನಿ ಶ್ರೀಧರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಕೊನೆಯ ಹಂತದ ಶೂಟಿಂಗ್ ಮಾಡ್ತಿರುವ 'ಶ್ರೀಕಂಠ' ಸದ್ಯ, ಆಡಿಯೋ ಬಿಡುಗಡೆ ಮಾಡೋ ತಯಾರಿಯಲ್ಲಿದೆ.

'ಟೀಸರ್' ಇಲ್ಲಿದೆ ನೋಡಿ.....

ವಿಷ್ಣುವರ್ಧನ್ ಸ್ಟೈಲ್ ನಲ್ಲಿ ಶಿವಣ್ಣ ಮಿಂಚಿರುವ 'ಶ್ರೀಕಂಠ' ಚಿತ್ರದ ಟೀಸರ್ ಲಿಂಕ್ ಇಲ್ಲಿದೆ, ನೋಡಿ...

English summary
Kannada Actor Shiva Rajkumar starrer Kannada Movie 'Srikanta' teaser is out. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada