»   » 'ರಾಜ್ಯೋತ್ಸವ'ದಲ್ಲಿ ನಂದೇ ಸ್ಟೈಲ್, ಎಂದ ಚಿನ್ನದ ಹುಡುಗ

'ರಾಜ್ಯೋತ್ಸವ'ದಲ್ಲಿ ನಂದೇ ಸ್ಟೈಲ್, ಎಂದ ಚಿನ್ನದ ಹುಡುಗ

Posted By:
Subscribe to Filmibeat Kannada

ಈ ಬಾರಿಯ 60ನೇ ಕನ್ನಡ ರಾಜ್ಯೋತ್ಸವ (ನವೆಂಬರ್ 1) ಭರ್ಜರಿಯಾಗಿ ನೇರವೇರಿದೆ. ಕರ್ನಾಟಕದಾದ್ಯಂತ ಈ ನವೆಂಬರ್ 1 ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬಹುದು ಎಂದು ಕರ್ನಾಟಕ ಸಿ.ಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಅಂದಹಾಗೆ ಸ್ಯಾಂಡಲ್ ವುಡ್ ನ ತಾರೆಯರು ಕೂಡ 60ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು, ಅದ್ರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಸ್ಟೈಲ್ ಕಿಂಗ್ ಚಿತ್ರತಂಡ, ವಿಶೇಷವಾಗಿ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸುವ ಹಾಡಿನ ಚಿತ್ರೀಕರಣ ಮಾಡುವ ಮೂಲಕ ಬಹಳ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡಿತು.

Watch: Kannada movie 'Style King' Team Celebrating Kannada Rajyotsava

ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ 26ನೇ ಚಿತ್ರದಲ್ಲಿ ಬಹಳ ಅದ್ಧೂರಿಯಾಗಿ ಕನ್ನಡ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ನಟ ಗಣೇಶ್ ಅವರು ನಟಿಸಿದ 25 ಚಿತ್ರಗಳಲ್ಲೂ ಅವರಿಗೆ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಯಾವುದೆ ಹಾಡಿನಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿರಲಿಲ್ಲ.[ಮುಂಗಾರು ಮಳೆ ಲವರ್ ಬಾಯ್ ಇದೀಗ ಗ್ಯಾಂಗ್ ಸ್ಟರ್]

ಆದರೆ ಇದೀಗ 26 ನೇ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಳದಿ ಮತ್ತು ಕೆಂಪು ಬಣ್ಣದ ಕಲರ್ ಫುಲ್ ಬಟ್ಟೆ ಧರಿಸಿ ಹೊಸ ಚಿತ್ರ 'ಸ್ಟೈಲ್ ಕಿಂಗ್' ನಲ್ಲಿ ತಾಯಿ ಕನ್ನಡಾಂಬೆಗೆ ನಮಿಸಿದ್ದಾರೆ.

ಬಣ್ಣಬಣ್ಣದ ಬಟ್ಟೆ ಧರಿಸಿ ಸಹನೃತ್ಯಗಾರರೊಂದಿಗೆ, 'ಧ್ಯಾನ ಕನ್ನಡ, ಜ್ಞಾನ, ಕನ್ನಡ, ಬಾಳೇ ಕನ್ನಡ, ಸ್ಟೈಲೋ, ಸ್ಟೈಲೋ ನಂದೇ ನಂದೇ', ಅನ್ನೋ ಕನ್ನಡದ ಹಿರಿಮೆ ಗರಿಮೆಯನ್ನು ಸಾರುವ ಇಂಟ್ರೊಡಕ್ಷನ್ ಹಾಡಿಗೆ ಸಖತ್ ಕಲರ್ ಫುಲ್ ಆಗಿ, ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ.[ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!]

ನಿರ್ದೇಶಕ ಪಿ.ಸಿ ಶೇಖರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ, ಈ ಕನ್ನಡದ ಹಿರಿಮೆಯನ್ನು ಸಾರುವ ಹಾಡಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..

Watch: Kannada movie 'Style King' Team Celebrating Kannada Rajyotsava

ಅಂದಹಾಗೆ ನಿರ್ದೇಶಕ ಪಿ.ಸಿ ಶೇಖರ್ ಅವರು 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಗಣೇಶ್ ಅವರಿಗೆ ಡಿಫರೆಂಟ್ ಇಂಟ್ರೊಡಕ್ಷನ್ ಕೊಡೋ ಆಲೋಚನೆ ಮಾಡಿದಾಗ ಅವರ ಮನಸ್ಸಲ್ಲಿ ಹುಟ್ಟಿಕೊಂಡಿದ್ದೇ ಈ ಕನ್ನಡದ ಹಾಡು.

ಸುಮಾರು ನೂರಕ್ಕೂ ಹೆಚ್ಚು ಸಹ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿರುವ ಸ್ಟೈಲ್ ಕಿಂಗ್ ಗಣೇಶ್ ಅವರು ಇದೇ ಮೊದಲ ಬಾರಿಗೆ ಕನ್ನಡ ಭಾಷೆಗೆ ಸಂಬಂಧಿಸಿದ ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.

ತೆಲುಗು ಹಾಗೂ ತಮಿಳಿನ ಖ್ಯಾತ ತಾರೆಯರಿಗೆ ಕೊರಿಯೋಗ್ರಫಿ ಮಾಡಿದ ನೃತ್ಯ ನಿರ್ದೇಶಕ ಬಾಬಾ ಭಾಸ್ಕರ್ ಅವರು ಗೋಲ್ಡನ್ ಸ್ಟಾರ್ ಗೆ ನೃತ್ಯ ಹೇಳಿಕೊಟ್ಟಿದ್ದಾರೆ. ಕೇರಳದ ಮಲ್ಲು ಕುಟ್ಟಿ ರೆಮ್ಯ ನಂಬೀಸನ್ ಅವರು 'ಸ್ಟೈಲ್ ಕಿಂಗ್' ಜೊತೆ ಡ್ಯುಯೆಟ್ ಹಾಡಿದ್ದಾರೆ.

ಸತತ ನಾಲ್ಕು ದಿನಗಳಿಂದ ಈ ಹಾಡಿನ ಚಿತ್ರೀಕರಣಕ್ಕೆ ತಯಾರಿ ನಡೆಸಿದ್ದು, ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಈ ಹಾಡನ್ನು ಪ್ರೇಕ್ಷಕರ ಹಾಗೂ ಗಣಿ ಅಭಿಮಾನಿಗಳ ಕೈಗೆ ಸೇರಿಸುವ ಪ್ರಯತ್ನದಲ್ಲಿ 'ಸ್ಟೈಲ್ ಕಿಂಗ್' ಚಿತ್ರತಂಡ ಬ್ಯುಸಿಯಾಗಿದೆ.

ಎಲ್ಲವೂ ಅಂದುಕೊಂಡಂತೆ ಬೇಗ ಬೇಗ ಮುಗಿದರೆ ಡಿಸೆಂಬರ್ ತಿಂಗಳಿನಲ್ಲಿ 'ಸ್ಟೈಲ್ ಕಿಂಗ್' ಸ್ಟೈಲಾಗಿ ಥಿಯೇಟರ್ ಗೆ ಬರಲಿದ್ದಾನೆ. ಜೊತೆಗೆ ಡಿಸೆಂಬರ್ ತಿಂಗಳಿನಲ್ಲಿ ಗೋಲ್ಡನ್ ಸ್ಟಾರ್ ಅವರ ಲಕ್ಕಿ ದಿನದಂದು ಈ ಸಿನಿಮಾವನ್ನು ತೆರೆಗೆ ತರುವ ಆಲೋಚನೆಯನ್ನು ನಿರ್ದೇಶಕರು ಮಾಡಿದ್ದಾರೆ. 'ಸ್ಟೈಲ್ ಕಿಂಗ್' ನ ಹೆಚ್ಚಿನ ಅಪ್ ಡೇಟ್ ಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

English summary
Watch Kannada movie 'Style King' Team Celebrating Kannada Rajyotsava with Golden Star Ganesh. 'Style King' features Kannada Actor Ganesh, Actress Remya Nambeesen in the lead role. The movie is directed by PC Shekar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada