»   » ಪ್ರೇಮಿಗಳೇ ಎಚ್ಚರ...ಇನ್ಮೇಲೆ 'ನವರಂಗಿ ದಳ'ದವರು ಬರಬಹುದು.!

ಪ್ರೇಮಿಗಳೇ ಎಚ್ಚರ...ಇನ್ಮೇಲೆ 'ನವರಂಗಿ ದಳ'ದವರು ಬರಬಹುದು.!

Posted By:
Subscribe to Filmibeat Kannada

ಪ್ರೇಮಿಗಳಿಗೆ ಮನೆಯವರ ಭಯ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಪ್ರೇಮಿಗಳನ್ನ ವಿರೋಧಿಸುವ ಕೆಲವು ಸಂಘಟನೆಗಳ ಭಯವಂತೂ ಇದ್ದೇ ಇದೆ. ಅದರಲ್ಲೂ ಪ್ರೇಮಿಗಳ ದಿನದಂದು ಕದ್ದು ಮುಚ್ಚಿ ಪ್ರೀತಿ ಮಾಡೋರನ್ನ ಹಿಡಿದು ಒತ್ತಾಯವಾಗಿ ಮದುವೆ ಮಾಡಿಸುವ ಘಟನೆಗಳು ಆದ್ಮೆಲೆ ಪ್ರೇಮಿಗಳು ಧೈರ್ಯದಿಂದ ಪಾರ್ಕ್, ಸಿನಿಮಾ ಅಂತಾ ಸುತ್ತಾಡೋದು ಕಡಿಮೆ ಮಾಡಿದ್ದಾರೆ.

ಈ ರೀತಿ ಪ್ರೇಮಿಗಳ ಮದುವೆ ಮಾಡಿಸುವ ಸಂಘಟನೆಗಳ ಕ್ರಮವನ್ನ ಕೆಲವರು ಒಪ್ಪಿದ್ದಾರೆ. ಇನ್ನು ಕೆಲವರು ವಿರೋಧಿಸಿದ್ದಾರೆ. ಕೆಲವೊಂದು ಸಮಯದಲ್ಲಿ ಇಂತಹ ಕೆಲವು ನಿರ್ಧಾರಗಳು ಹೇಗೆ ದುರುಪಯೋಗ ಆಗುತ್ತೆ ಎನ್ನುವುದನ್ನ 'ನಮ್ದು ಕೆ' ತಂಡದ ಪ್ರತಿಭಾನಿತ್ವ ಯುವಕರು ಕಿರುಚಿತ್ರದ ಮೂಲಕ ತೋರಿಸಿದ್ದಾರೆ.

ಹೌದು, 'ನವರಂಗಿ ದಳ' ಹೆಸರಿನಲ್ಲಿ ಕಿರುಚಿತ್ರ ತಯಾರಾಗಿದ್ದು, ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. 6 ನಿಮಿಷ 30 ಸೆಕೆಂಡ್ ಕಾಲಾವಧಿ ಹೊಂದಿರುವ ಈ ಸಿನಿಮಾ ಪ್ರೇಮಿಗಳಿಗೆ ಮತ್ತು ಸಂಘಟನೆಗಳಿಗೆ ಒಂದೊಳ್ಳೆ ಸಂದೇಶ ನೀಡಿದೆ. ಒಳ್ಳೆಯ ಕೆಲಸದ ಅರಿವಿನಲ್ಲಿ, ಕೆಲವೊಮ್ಮೆ ತಪ್ಪು ಆಗುತ್ತೆ ಎಂಬುದು ತುಂಬಾ ಚೆನ್ನಾಗಿ, ಹಾಸ್ಯ ರೂಪದಲ್ಲಿ ಚಿತ್ರಿಸಿದ್ದಾರೆ.

Watch Navarangi Dala Kannada short film

ದೊಡ್ಡ ಕಸನು ಕಂಡಿದ್ದವನ ಬಾಳಲ್ಲಿ 'ಅನಾಹುತ' ಆಗೋಯ್ತು

ಯುವ ಪ್ರೇಮಿಗಳಿಬ್ಬರು ತಮ್ಮ ಮದುವೆಗೆ ಮನೆಯವರು ಅಡ್ಡಿಯಾಗಬಹುದು ಎಂಬ ಭಯದಿಂದ ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗ, ಸ್ನೇಹಿತನೊಬ್ಬನ ಸಲಹೆ ಮೆರೆಗೆ ಪಾರ್ಕ್ ನಲ್ಲಿ ಕೂತಿರುತ್ತಾರೆ. ಈ ವೇಳೆ ನವರಂಗಿದಳಕ್ಕೆ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಲವ್ ಮಾಡ್ತಿರುವ ವಿಚಾರಕ್ಕೆ ಗೊತ್ತಾಗುತ್ತೆ. ಅಲ್ಲಿಗೆ ಬಂದ ನವರಂಗಿ ದಳದ ಸದಸ್ಯರು ಆ ಪ್ರೇಮಿಗಳಿಗೆ ಒತ್ತಾಯಪೂರ್ವವಾಗಿ ಮದುವೆ ಮಾಡಿಸುತ್ತಾರೆ. ಅಲ್ಲಿಗೆ ಆತಂಕದಲ್ಲಿದ್ದ ಪ್ರೇಮಿಗಳೂ ಖುಷಿಯಿಂದ ಒಂದಾಗ್ತಾರೆ. ಇದು ಪೂರ್ವ ನಿಯೋಜಿತವಾಗಿ ಮಾಡಿದ್ದು ಎಂದು 'ನವರಂಗಿ ದಳ'ದ ಗಮನಕ್ಕೆ ಬಾರದೆ ಇರುವುದು ನಿಜಕ್ಕೂ ದುರಂತ.

'DubsMash' ಮಾಡುವ ಕಲಾವಿದರೇ ಎಚ್ಚರ.!

ಇನ್ನುಳಿದಂತೆ ಶ್ರವಣ್ ಸಾರಥ್ಯದಲ್ಲಿ ಮೂಡಿಬಂದಿರುವ 'ನವರಂಗಿ ದಳ' ಕಿರುಚಿತ್ರದಲ್ಲಿ ಅನುಷಾ ವಿಶ್ವನಾಥ್, ಸಂದೀಪ್, ನರೇಶ್ ಭಟ್, ಗೌತಮ್ ಅನೇಶ್, ಶ್ರವಣ್ ಅಭಿನಯಿಸಿದ್ದಾರೆ. ನವ್ಯ ಕಡಮೆ ಅವರು ಈ ಕಿರುಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಇನ್ನುಳಿದಂತೆ ಉಮಾಶಂಕರ್, ರಾಕೇಶ್ ಮಯ್ಯ, ಅಭ್ಯುದಯ ರಾಮ್ ಪೋಸ್ಟರ್ ಡಿಸೈನ್ ಮಾಡಿ ಚಿತ್ರಕ್ಕೆ ಸಾತ್ ನೀಡಿದ್ದಾರೆ.

English summary
watch kannada short film 'Navarangi Dala' Presented by Namdu k. Anusha, Sandeep TC, Naresh Bhat, Gowtham anesh, Shravan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada