»   » 'ಪೊರ್ಕಿ' ಹುಚ್ಚ ವೆಂಕಟ್ ಲಾಂಗ್ ಹಿಡೀಬೇಕಾ?

'ಪೊರ್ಕಿ' ಹುಚ್ಚ ವೆಂಕಟ್ ಲಾಂಗ್ ಹಿಡೀಬೇಕಾ?

By: ಹರಾ
Subscribe to Filmibeat Kannada

ಎಲ್ಲರೂ ಕಿವಿ ಕ್ಲೀನ್ ಮಾಡಿಕೊಂಡು ಕೇಳಿ...''ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್...ಎಲ್ಲಾ ಕಡೆ 'ಐಟಂ ಸಾಂಗ್' ಬ್ಯಾನ್ ಆಗ್ಬೇಕ್!''

''ಎಷ್ಟ್ ದಿನ ಅಂತ ನೀವು ಪಾಕಿಸ್ತಾನದವರನ್ನ ವೈರಿಗಳ ತರಹ ನೋಡ್ತೀರಾ. ಅಲ್ಲಿ ಒಂದು ಹೆಣ್ಣಿನ ಅತ್ಯಾಚಾರ ಮಾಡಿದ್ರೆ, ನೇಣು ಹಾಕ್ತಾರೆ. ಆದ್ರೆ ಇಲ್ಲಿ ಬೇಲ್ ಕೊಡ್ತಾರೆ. ಇದು ಇಂಡಿಯಾ. ಬದಲಾಗ್ಬೇಕ್.!''

watch-porki-huccha-venkat-official-trailer

ಅಪ್ಪಿ ತಪ್ಪಿ ಇವು ಬದಲಾಗ್ಲಿಲ್ಲ ಅಂದ್ರೆ ಹುಚ್ಚ ವೆಂಕಟ್ ಲಾಂಗ್ ಹಿಡಿತಾನೆ.! ಹಾಗಂತ ಖುದ್ದು ಹುಚ್ಚ ವೆಂಕಟ್ ಹೇಳಿಕೊಂಡಿದ್ದಾನೆ. ಇದು ಮತ್ತೆ ಯಾವುದೋ ಕಾಮಿಕ್ ವಿಡಿಯೋ ಅಂದ್ಕೊಂಡುಬಿಟ್ಟೀರಾ ಜೋಕೆ. ಇದೆಲ್ಲಾ ಹುಚ್ಚ ವೆಂಕಟ್ ಅಭಿನಯಿಸಲಿರುವ ಹೊಸ ಸಿನಿಮಾ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಡೈಲಾಗ್ಸ್.! ['ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್']

ನಂಬೋದಕ್ಕೆ ಕಷ್ಟವಾದರೂ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ. ಹುಚ್ಚ ವೆಂಕಟ್ ಹೊಸ ಸಿನಿಮಾ ಮಾಡಿದ್ದಾರೆ. ಅದರ ಹೆಸರು 'ಪೊರ್ಕಿ ಹುಚ್ಚ ವೆಂಕಟ್' ಅಂತ. ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಸ್ವಲ್ಪ ಕಣ್ಣು-ಕಿವಿ ಉಜ್ಜಿಕೊಂಡು ಟ್ರೈಲರ್ ನೋಡಿ....

ನೋಡಿದ್ರಲ್ಲಾ...ಹುಚ್ಚ ವೆಂಕಟನ ರೋಷ, ಆವೇಷ, ಅಳಲು, ಗೋಳು ಎಲ್ಲಾ. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜೊತೆ ನಟನೆಯನ್ನೂ ಮಾಡುತ್ತಿರುವ ಹುಚ್ಚ ವೆಂಕಟ್, ಇಡೀ ಟ್ರೈಲರ್ ನಲ್ಲಿ ಅಬ್ಬರಿಸಿದ್ದಾರೆ. ಆದ್ರೆ, ನಿರ್ಮಾಪಕರು ಯಾರು ಅಂತ ಕೇಳ್ಬೇಡಿ. [ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್]

ತಂದೆ, ತಾಯಿ ಜೊತೆ ಮಾತನಾಡುವ ಕೆಲ ಸನ್ನಿವೇಶಗಳು. ಅದೇ ಗ್ಯಾಪಲ್ಲಿ 'ಕಾವೇರಿ' ('ಶರಪಂಜರ' ಕಾವೇರಿ ಅಲ್ಲ) ನೆನದು ಗೊಳೋ ಅಂತ ಟ್ರೈಲರ್ ನಲ್ಲಿ ಹುಚ್ಚ ವೆಂಕಟ್ ಅತ್ತುಬಿಟ್ಟಿದ್ದಾರೆ. ಕಣ್ಣೀರು ಒರೆಸೋಕೆ ಯಾರೂ ಇಲ್ಲ ಅಷ್ಟೆ.[ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!]

'ಪೊರ್ಕಿ ಹುಚ್ಚ ವೆಂಕಟ್'ನ ಸಂಕಟ ಇರುವ ಈ ಟ್ರೈಲರ್ ನ ನೋಡಿ ನಗ್ತೀರೋ, ಬಿಡ್ತೀರೋ ನೀವೇ ಡಿಸೈಡ್ ಮಾಡಿ....

English summary
After 'Huccha Venkat', Kannada Actor Huccha Venkat directorial 'Porki Huccha Venkat' trailer is out. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada