»   » ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!

ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕೃಷ್ಣನಾಗಿ ಇಲ್ಲಿಯವರೆಗೂ ತಮ್ಮ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಹೇಳಿದ್ದ ಅಜೇಯ್ ರಾವ್, ಇದೀಗ ಒಂದು ಕಲರ್ ಫುಲ್ ಕಿಕ್ ಸ್ಟೋರಿ ಹೇಳೋಕೆ ನಿರ್ಮಾಪಕನ ಪಟ್ಟಕ್ಕೇರಿದ್ದಾರೆ.

'ಕೃಷ್ಣಲೀಲಾ' ಚಿತ್ರಕ್ಕೋಸ್ಕರ 'ಶ್ರೀ ಕೃಷ್ಣ ಕ್ರಿಯೇಷನ್ಸ್' ಬ್ಯಾನರ್ ನಡಿ ಪ್ರೊಡ್ಯೂಸರ್ ಆಗಿರುವ ಅಜೇಯ್ ರಾವ್, ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಜೇಬು ಖಾಲಿ ಮಾಡಿಕೊಂಡಿದ್ದಾರಂತೆ. ಜೇಬು ಖಾಲಿ ಆದರೂ ಅಜೇಯ್ ತಲೆಕಡೆಸಿಕೊಳ್ಳದೆ ಸದಾ ಸ್ಮೈಲ್ ಮಾಡ್ತಿದ್ದಾರಂತೆ. ಇಂಥ ಅಜೇಯ್ ಗೆ ಏನನ್ನಬೇಕು?

Krishna Leela1

ಈ ಪ್ರಶ್ನೆಗೆ ನೀವು ಏನಂತ ಉತ್ತರ ಕೊಡುತ್ತೀರೋ, ಬಿಡುತ್ತೀರೋ. ಆದರೆ 'ಕೃಷ್ಣಲೀಲಾ' ಚಿತ್ರತಂಡ ಮಾತ್ರ ಅಜೇಯ್ ಗೆ 'ಪೆಸಲ್ ಮ್ಯಾನ್' ಅನ್ನುವ ಹಣೆಪಟ್ಟಿ ನೀಡಿದೆ. ಇದರೊಂದಿಗೆ ಒಂದು ಹಾಡನ್ನೂ ಅವರಿಗೆ ಡೆಡಿಕೇಟ್ ಮಾಡಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಆ ಹಾಡು ಅಂತಿಂಥ ಹಾಡಲ್ಲ ಬಿಡಿ! ನೀವು ಊಹಿಸುವುದಕ್ಕೆ ಅಸಾಧ್ಯವಾಗಿರುವ ಹಾಡು. ಇಲ್ಲಿವರೆಗೂ ನೀವು ಲವ್ ಸಾಂಗ್, ಮಾಸ್ ಸಾಂಗ್, ಪ್ಯಾಥೋ ಸಾಂಗ್ ಕೇಳಿರಬಹುದು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರ್ಯಾಪ್ ಸಾಂಗ್, ಹಿಪ್ ಹಾಪ್ ಸಾಂಗ್ ನೋಡಿರಬಹುದು. ಆದ್ರೆ, ಅದೆಲ್ಲವನ್ನೂ ನಿವಾಳಿಸಿ ಬಿಸಾಕುವಂತಿದೆ ಈ 'ಪೆಸಲ್ ಸಾಂಗ್'.

Krishna Leela2

'ಪೆಸಲ್ ಮ್ಯಾನ್'ಗಾಗಿ ರೆಡಿಯಾಗಿರುವ 'ಪೆಸಲ್ ಸಾಂಗ್'ಗೆ 'ಪೆಸಲ್ ಸಿಂಗರ್' ದನಿಯಾಗಿರುವುದು ಮತ್ತೊಂದು ಪೆಸಾಲಿಟಿ. ತುಂಬಾನೇ 'ಪೆಸಲ್' ಕಂಠ ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹಾಡಿರುವ 'ಪೆಸಲ್ ಸಾಂಗ್' ಹೇಗಿದೆ ಅಂತ ಒಮ್ಮೆ ನೋಡಿಬಿಡಿ.....


ಶ್ರೀಧರ್.ವಿ.ಸಂಭ್ರಮ್ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ 'ಪೆಸಲ್ ಸಾಂಗ್', ಕೇಳುವುದಕ್ಕೆ ಎಷ್ಟು ಮಜವಾಗಿದೆಯೋ, ಅಷ್ಟೇ ಮಜ ಮಾಡಿಕೊಂಡು ಹಾಡಿದ್ದಾರೆ ಪುನೀತ್.

'ಕೃಷ್ಣಲೀಲಾ' ಚಿತ್ರದ ಸೂಪರ್ ಸ್ಪೆಷಲ್ ಆಗಿರುವ ಈ ಹಾಡಿಗೆ ಪುನೀತ್ ದನಿಯಿದ್ದರೆ, ಚಂದ ಅಂತ ಅಭಿಪ್ರಾಯ ಪಟ್ಟ ನಿರ್ದೇಶಕ ಶಶಾಂಕ್, ಕೂಡಲೇ ಅಪ್ಪುಗೆ ಫೋನ್ ಮಾಡಿದ್ದಾರೆ. ಹಾಡಿನ ಟ್ರ್ಯಾಕ್ ತರಿಸಿಕೊಂಡು ಕಾರಲ್ಲೇ ಕೇಳಿದ್ದ ಅಪ್ಪು, ಫುಲ್ ಇಂಪ್ರೆಸ್ ಆಗಿ ತಕ್ಷಣ ಗಾನ ಸುಧೆ ಹರಿಸುವುದಕ್ಕೆ ಒಪ್ಪಿಕೊಂಡುಬಿಟ್ಟರಂತೆ. ಹಾಗಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ಶಶಾಂಕ್ ಹೇಳಿದರು.

Krishna Leela3

''ಕೃಷ್ಣಲೀಲಾ ಚಿತ್ರದಲ್ಲಿ ಸ್ಕೂಲ್ ವ್ಯಾನ್ ಚಾಲಕನ ಪಾತ್ರ ಮಾಡುತ್ತಿರುವ ಅಜೇಯ್, ಕಾರ್ಮಿಕರನ್ನ ಪ್ರತಿನಿಧಿಸುವುದರಿಂದ ಈ ಹಾಡು ಅನಿವಾರ್ಯವಾಗಿತ್ತು. ಮಾಸ್ ಸಾಂಗ್ ಮಾಡುವ ಬದಲು ಎಲ್ಲರನ್ನು ಆಕರ್ಷಿಸುವುದಕ್ಕೆ ಈ ಹಾಡನ್ನ ರೆಡಿಮಾಡಿದ್ವಿ. ಲಿರಿಕ್ಸ್ ನ ಶ್ರೀಧರ್ ತುಂಬಾ ಕ್ಯಾಚಿಯಾಗಿ ಬರೆದಿದ್ದಾರೆ'', ಅಂತಾರೆ ನಿರ್ದೇಶಕ ಶಶಾಂಕ್.

ಹಾಡಲ್ಲಿ ಚಿತ್ರವಿಚಿತ್ರ ಕಾಸ್ಟ್ಯೂಮ್ ಧರಿಸಿ, ಮಿಲ್ಕು ಮ್ಯಾನ್, ಸಿಲ್ಕು ಮ್ಯಾನ್, ಜಾಜಿ ಮ್ಯಾನ್, ಸೂಜಿ ಮ್ಯಾನ್ ಗಳನ್ನೆಲ್ಲಾ ಮೀರಿಸಿರುವ ಅಜೇಯ್ 'ಪೀಪೀ' ಊದುವ 'ಪೆಸಲ್ ಮ್ಯಾನ್' ಆಗಿ ಹೇಗೆ ಹೆಜ್ಜೆ ಹಾಕಿದ್ದಾರೆ ಅನ್ನುವುದಕ್ಕೆ ಡಿಸೆಂಬರ್ 20ರ ವರೆಗೂ ಕಾಯಿರಿ. ಯಾಕಂದ್ರೆ, 'ಕೃಷ್ಣಲೀಲಾ' ಹಾಡುಗಳು ಅಂದು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

Krishna Leela4

ಪ್ಯಾಂಟು ಮೇಲೆ ಚಡ್ಡಿ ಹಾಕಿ ನಿಲ್ಲೋನು ಸೂಪರ್ ಮ್ಯಾನ್...

ಪ್ರಾಬ್ಲಂ ಫೇಸು ಮಾಡಿ, ನಿಲ್ಲೋನೇ ಪೆಸಲ್ ಮ್ಯಾನ್..

ಕೋಟಿ ಕೋಟಿ ಇದ್ರೂನು ಕೊರಗೋನು ಗೋಳು ಮ್ಯಾನ್...

ಖಾಲಿ ಜೇಬು ಇದ್ರೂನು ನಗುವವನೇ ಪೆಸಲ್ ಮ್ಯಾನ್....

ಹೇ...ಪೆಸಲು...ಪೆಸಲು...ಪೆಸಲು...ಪೆಸಲು ಮ್ಯಾನ್....
(ಫಿಲ್ಮಿಬೀಟ್ ಕನ್ನಡ)

English summary
Ajai Rao starrer Krishna Leela has become Talk of the Town from the song Pesal Man. Puneeth Rajkumar has sung this song, which has catchy lyrics. Watch the Pesal Man song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada