»   » ವಿಡಿಯೋ: 'ಕ್ಲಾಸ್'ಗೂ 'ಮಾಸ್'ಗೂ ನಿಖಿಲ್ ಕುಮಾರ್ 'ಬಾಸ್' ಆಗ್ಬಹುದು.!

ವಿಡಿಯೋ: 'ಕ್ಲಾಸ್'ಗೂ 'ಮಾಸ್'ಗೂ ನಿಖಿಲ್ ಕುಮಾರ್ 'ಬಾಸ್' ಆಗ್ಬಹುದು.!

Posted By:
Subscribe to Filmibeat Kannada

ರಾಜಕಾರಣಿಗಳ ಮಕ್ಕಳು ಬರೀ ಶೋಕಿ ಮಾಡೋಕೆ ಮಾತ್ರ ಲಾಯಕ್ಕು...ಪ್ರತಿಭೆ ನಿಲ್ಲು...ವಿದ್ಯೆ ಅಂತೂ ನೈವೇದ್ಯ ಅಂತ ಕಾಮೆಂಟ್ ಮಾಡೋರ ಬಾಯಿಗೆ ಗೋದ್ರೆಜ್ ಬೀಗ ಜಡಿಯುವ ಮಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ತಯಾರಾಗಿದ್ದಾರೆ.

ಸ್ಟಂಟ್ಸ್ ನಿಂದ ಹಿಡಿದು ಡ್ಯಾನ್ಸ್ ವರೆಗೂ ಹಾಲಿವುಡ್ ಮತ್ತು ಬಾಲಿವುಡ್ ನ ಖ್ಯಾತ ನಾಮರಿಂದ ತರಬೇತಿ ಪಡೆದಿರುವ ನಿಖಿಲ್ ಕುಮಾರ್ 'ಜಾಗ್ವಾರ್' ಸಿನಿಮಾದಲ್ಲಿ ಕ್ಲಾಸ್ ಗೂ ಮಾಸ್ ಗೂ ಬಾಸ್ ಆಗುವ ರೇಂಜಿಗೆ ಪರ್ಫಾಮ್ ಮಾಡಿದ್ದಾರೆ. ಅದಕ್ಕೆ 'ಜಾಗ್ವಾರ್' ಚಿತ್ರದ ಈ ನೂತನ ಮೇಕಿಂಗ್ ಟೀಸರ್ ಸಾಕ್ಷಿ.....ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಹಾಗೂ ದೂರದ ಬಲ್ಗೇರಿಯಾದಲ್ಲಿ ಶೂಟ್ ಮಾಡಿರುವ 'ಜಾಗ್ವಾರ್' ಚಿತ್ರದ ಈ ಮೇಕಿಂಗ್ ಟೀಸರ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ 'ಹೈಲೈಟ್' ಆಗಿದ್ದರೂ, 'ಹೀರೋ' ನಿಖಿಲ್ ಮಾಡಿರುವ ಆಕ್ಷನ್ ಸನ್ನಿವೇಶಗಳತ್ತ ಕೊಂಚ ಕಣ್ಣಾಡಿಸಿ.


ಬ್ಯಾಟ್ ಮ್ಯಾನ್ ಗೆಟಪ್ ನಲ್ಲಿ ನಿಖಿಲ್ ಕುಮಾರ್ ಮಾಡಿರುವ ಬೈಕ್ ಚೇಸಿಂಗ್ ಮತ್ತು ಕಾರ್ ಸ್ಟಂಟ್ ಗಳನ್ನ ನೋಡಿದ್ರೆ, 'ಜಾಗ್ವಾರ್' ಚಿತ್ರ ಆಕ್ಷನ್ ಪ್ರಿಯರಿಗೆ ಹಬ್ಬವಾಗಬಹುದು. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]


watch-video-making-teaser-of-nikhil-kumar-starrer-jaguar

'ಬಾಹುಬಲಿ' ನಿರ್ದೇಶಕ ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿರುವ 'ಜಾಗ್ವಾರ್' ಚಿತ್ರಕ್ಕೆ ಮಹಾದೇವ್ ಸಾರಥಿ. [ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!]


ಮಗನ ಚೊಚ್ಚಲ ಸಿನಿಮಾಗೆ ಬಂಡವಾಳ ಹಾಕುವುದರ ಜೊತೆಗೆ ರೌಂಡ್ ದಿ ಕ್ಲಾಕ್ 'ಜಾಗ್ವಾರ್' ಶೂಟಿಂಗ್ ಸೆಟ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಕಾಳಜಿ ವಹಿಸಿದ್ದಾರೆ. [ತಡರಾತ್ರಿ ಎಚ್.ಡಿ.ಕುಮಾರಸ್ವಾಮಿ ಬಲ್ಗೇರಿಯಾಗೆ ಹಾರಿದ್ದು ಯಾಕೆ.?]


ಮೇಕಿಂಗ್ ನಲ್ಲೇ ಕ್ಯೂರಿಯಾಸಿಟಿ ಬಿಲ್ಡ್ ಮಾಡುವ 'ಜಾಗ್ವಾರ್' ಸಿನಿಮಾ ತೆರೆಮೇಲೆ ಬರೋಕೆ ಇನ್ನೂ ಟೈಮ್ ಬೇಕು. 'ಜಾಗ್ವಾರ್' ಚಿತ್ರದ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The making teaser of 'Jaguar' is out. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada