»   » ಮೀಸೆ ಮಣ್ಣು ಮಾಡಿಕೊಂಡ ಮೇಲೆ ಕ್ಷಮೆ ಕೇಳಿದ ರಾಘವ ದ್ವಾರ್ಕಿ

ಮೀಸೆ ಮಣ್ಣು ಮಾಡಿಕೊಂಡ ಮೇಲೆ ಕ್ಷಮೆ ಕೇಳಿದ ರಾಘವ ದ್ವಾರ್ಕಿ

Posted By:
Subscribe to Filmibeat Kannada

'ಇರಲಾರದವರು ಇರುವೆ ಬಿಟ್ಟುಕೊಂಡರು' ಎಂಬಂತೆ, ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ನೂತನ ಪ್ರಯೋಗ 'ಅಪೂರ್ವ' ಚಿತ್ರದ ಬಗ್ಗೆ ವಿಸ್ತೃತ ವಿಮರ್ಶೆ ಮಾಡಿದ ನಂತರ ''Ravichandran is Ekangi now, Crazy Star is missing, Sorry to say this'' ಎಂಬ ವಿಡಿಯೋನ 'ಶಂಭು', 'ಗುನ್ನ', 'ಮತ್ತೆ ಮುಂಗಾರು' ಚಿತ್ರಗಳ ನಿರ್ದೇಶಕ ರಾಘವ ದ್ವಾರ್ಕಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ರು.

ಈ ವಿಡಿಯೋ ನೋಡಿದ ರವಿಚಂದ್ರನ್ ಅಭಿಮಾನಿಗಳು ರಾಘವ ದ್ವಾರ್ಕಿಗೆ ಬೆಂಡೆತ್ತಿ ಬ್ರೇಕ್ ಹಾಕಿದ್ರು. ವ್ಯಾಪಕ ಟೀಕೆಗೆ ಗುರಿಯಾಗಿದ್ದ ರಾಘವ ದ್ವಾರ್ಕಿ ಇದೀಗ ಕನ್ನಡ ಚಿತ್ರರಂಗದ 'ರಸಿಕ' ರವಿಚಂದ್ರನ್ ರವರಿಗೆ ಕ್ಷಮೆ ಕೇಳಿದ್ದಾರೆ. [ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!]


ಕ್ಷಮೆ ಕೇಳುವ ಮುನ್ನ, ತಾವು ಆಡಿದ ಮಾತುಗಳ ಬಗ್ಗೆ ರಾಘವ ದ್ವಾರ್ಕಿ ಸ್ಪಷ್ಟನೆ ನೀಡುವ ಪ್ರಯತ್ನವನ್ನೂ ಮಾಡಿದ್ದಾರೆ (Justification ಅಲ್ಲ Clarification). ಮುಂದೆ ಓದಿ....


ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ ಕ್ಷಮೆಯಾಚಿಸಿರುವ ವಿಡಿಯೋ.!

ಕ್ರೇಜಿ ಸ್ಟಾರ್ ರವಿಚಂದ್ರನ್ ರವರಿಗೆ ನಿರ್ದೇಶಕ ರಾಘವ ದ್ವಾರ್ಕಿ ಕ್ಷಮೆಯಾಚಿಸಿರುವ ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. ರಾಘವ ದ್ವಾರ್ಕಿ ಆಡಿರುವ ಮಾತುಗಳನ್ನ ಅವರ ಮಾತುಗಳಲ್ಲೇ ಓದಿರಿ, ಮುಂದಿನ ಸ್ಲೈಡ್ ನಲ್ಲಿ....


ಮಿಸ್ ಲೀಡ್ ಮಾಡಿದ್ದಾರಂತೆ.!

''ರವಿ ಸರ್ ಗೆ ಹೇಳಿರುವ ಬಹಿರಂಗ ಪತ್ರವನ್ನು ಕೆಲವರು ತಿರುಚಿ, ಮಿಸ್ ಲೀಡ್ ಮಾಡುತ್ತಿದ್ದಾರೆ. ನನ್ನ ವಿಮರ್ಶೆಯಲ್ಲಾಗಲಿ, ಬಹಿರಂಗ ಪತ್ರದಲ್ಲಾಗಲಿ, ನಾನು ಎಲ್ಲೂ 'ಅಪೂರ್ವ' ಸಿನಿಮಾ ಬಗ್ಗೆ ರವಿ ಸರ್ ಬಗ್ಗೆ ಸಣ್ಣ ತಪ್ಪು ಮಾತುಗಳನ್ನು ಆಡಿಲ್ಲ'' - ರಾಘವ ದ್ವಾರ್ಕಿ [ಹೆದರಿಕೊಂಡೇ 'ಅಪೂರ್ವ' ನೋಡಿದವರು ಬರೆದಿರುವ ಅಪರೂಪದ ಪತ್ರ.!]


ರಾಘವ ದ್ವಾರ್ಕಿ ಆಸೆ ಏನು?

''ಹಾಲಿವುಡ್, ಬಾಲಿವುಡ್ ನೋಡಿ ಬೆಚ್ಚ ಬೇಕಾದ ಸಬ್ಜೆಕ್ಟ್ 'ಅಪೂರ್ವ' ಅನ್ನೋದನ್ನ ನಾನು ಕನ್ವೇ ಮಾಡಿದ್ದೇನೆ. ಎಲ್ಲೋ ಒಂದು ಕಡೆ ಪ್ರೀತಿ, ಪ್ರೇಮ, ಪ್ರಣಯ ಹೊರತು ಪಡಿಸಿ, ಸ್ವಲ್ಪ ವಿಭಿನ್ನವಾಗಿ ನಿಮ್ಮನ್ನ ನೋಡ್ಬೇಕು ಅಂತ ಆಸೆ ಅಷ್ಟೆ'' - ರಾಘವ ದ್ವಾರ್ಕಿ [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]


ಲೆಜೆಂಡ್ ರವಿಚಂದ್ರನ್

''ರವಿ ಸರ್ ಅನ್ನೋ ಲೆಜೆಂಡ್, ಕೈಗೆ ಸಿಗುವಷ್ಟು ಸಣ್ಣವರಲ್ಲ, ಅಗಾಧ ಅಂತ ಪ್ರತಿ ಮಾತಿನಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ. ಚಿತ್ರರಂಗದ ಮುಂದಿನ ದಿನಗಳನ್ನ ರವಿ ಸರ್ ಅಂತಹ ಲೀಡರ್ಸ್ ಮಾತ್ರ ನಡೆಸುವುದಕ್ಕೆ ಸಾಧ್ಯ ಅನ್ನೋದು ನನ್ನ ಅಚಲವಾದ ನಂಬಿಕೆ. ಅದನ್ನ ಅವರ ಅಪ್ಪಟ ಅಭಿಮಾನಿಯಾಗಿ, ಅವರ ವಿಶ್ವಾಸಿಯಾಗಿ ಹೇಳಬೇಕೆನಿಸಿದ್ದು, ಹೇಳಬೇಕಾಗಿದ್ದು, ನನ್ನ ಕರ್ತವ್ಯ ಅನಿಸಿತು, ಹೇಳಿದ್ದೇನೆ'' - ರಾಘವ ದ್ವಾರ್ಕಿ


ಇಲ್ಲಿಗೆ ಬಿಟ್ಟುಬಿಡಿ.!

''ದಯವಿಟ್ಟು ಯಾರೂ ನನ್ನ ಮಾತುಗಳನ್ನ ತಿರುಚಬೇಡಿ. ಡ್ರ್ಯಾಗ್ ಮಾಡಬೇಡಿ. ಇದನ್ನ ಇಲ್ಲಿಗೆ ಬಿಟ್ಟುಬಿಡಿ'' - ರಾಘವ ದ್ವಾರ್ಕಿ [ರವಿಚಂದ್ರನ್ ಬಗ್ಗೆ ಕೊಂಕು ನುಡಿದವರಿಗೆ ಗುಂಡ್ ಪಿನ್ ಚುಚ್ಚಿದ ಯೋಗರಾಜ್ ಭಟ್]


ಎಳೆದಾಡಬೇಡಿ.!

''ನಾನು ದೊಡ್ಡವನಲ್ಲ. ಬಹಳ ಸಣ್ಣವನು. ರವಿ ಸರ್ ತುಂಬಾ ದೊಡ್ಡವರು. ಸುಮ್ಮನೆ ನಮ್ಮ ವಿಷ್ಯವನ್ನು ಇಟ್ಟು ಎಳೆದಾಡುವುದು ಬೇಡ'' - ರಾಘವ ದ್ವಾರ್ಕಿ


ಚೀಪ್ ಗಿಮಿಕ್.?

''ಅಷ್ಟು ಚೀಪ್ ಗಿಮಿಕ್ ಮಾಡುವುದಕ್ಕೆ ರವಿ ಸರ್ ಹೆಸರನ್ನ ತರುವುದು ಬೇಡ. ಅದಕ್ಕೆ ಬೇಕಾದಷ್ಟು ದಾರಿ ಇದೆ. ಆದರಿಂದ ನನ್ನ ಮಾತುಗಳನ್ನ ದಯವಿಟ್ಟು ಅರ್ಥ ಮಾಡಿಕೊಂಡು ಇದನ್ನ ಇಲ್ಲಿಗೆ ನಿಲ್ಲಿಸಿ'' - ರಾಘವ ದ್ವಾರ್ಕಿ


'ಸಾರಿ ಸರ್'

''ರವಿ ಸರ್, ನನ್ನ ಮಾತುಗಳು ಸೂಕ್ಷ್ಮವಾಗಿ ನೀವು ಗಮನಿಸಿರುತ್ತೀರಿ. ನನ್ನ ಮಾತುಗಳಿಂದ ತಮಗೆ ಬೇಸರವಾಗಿದ್ದರೆ, I'm extremely Sorry'' - ರಾಘವ ದ್ವಾರ್ಕಿ


ಈ ವಿಡಿಯೋ ಯೂಟ್ಯೂಬ್ ನಲ್ಲಿ ಇಲ್ಲ.!

ಬಹಿರಂಗವಾಗಿ, ಯೂಟ್ಯೂಬ್ ನಲ್ಲಿ ''Ravichandran is Ekangi now, Crazy Star is missing, Sorry to say this'' ಎಂಬ ವಿಡಿಯೋ ಅಪ್ ಲೋಡ್ ಮಾಡಿದ್ದ ರಾಘವ ದ್ವಾರ್ಕಿ, ರವಿಚಂದ್ರನ್ ರವರಿಗೆ ಕ್ಷಮೆ ಕೇಳಿದ ವಿಡಿಯೋ ಮಾತ್ರ ಯೂಟ್ಯೂಬ್ ನಲ್ಲಿ ಹಾಕಿಲ್ಲ (ಇಲ್ಲಿಯವರೆಗೂ).!


ಕನಿಷ್ಠ ಎದುರಿಗೆ ಕ್ಷಮೆ ಕೇಳಬಹುದಿತ್ತು.!

'ರವಿಚಂದ್ರನ್ ವಿಶ್ವಾಸಿ' ಅಂತ ಹೇಳಿಕೊಳ್ಳುವ ರಾಘವ ದ್ವಾರ್ಕಿ, ರವಿಚಂದ್ರನ್ ಎದುರಿಗೆ ಕ್ಷಮೆ ಕೇಳಬೇಕು ಎಂಬುದು ಕ್ರೇಜಿ ಅಭಿಮಾನಿಗಳ ಆಗ್ರಹವಾಗಿತ್ತು. ಅದನ್ನೂ ರಾಘವ ದ್ವಾರ್ಕಿ ಮಾಡಿಲ್ಲ.


ಯೂಟ್ಯೂಬ್ ನಿಂದ ವಿಡಿಯೋ ನಾಪತ್ತೆ.!

ಈ ಮೊದಲು ರಾಘವ ದ್ವಾರ್ಕಿ ಅಪ್ ಲೋಡ್ ಮಾಡಿದ್ದ ''Ravichandran is Ekangi now, Crazy Star is missing, Sorry to say this'' ಎಂಬ ವಿಡಿಯೋ ಸದ್ಯಕ್ಕೆ ಯೂಟ್ಯೂಬ್ ನಿಂದ ಡಿಲೀಟ್ ಆಗಿದೆ.


'ಸಾರಿ' ವಿಡಿಯೋ ನೋಡಿ..!

ರಾಘವ ದ್ವಾರ್ಕಿ ರವರ 'ಸಾರಿ' ಕಮ್ 'ಕ್ಲಾರಿಫಿಕೇಷನ್' ವಿಡಿಯೋ ಲಿಂಕ್ ಇಲ್ಲಿದೆ, ಕ್ಲಿಕ್ ಮಾಡಿ....


English summary
Director Raghava Dwarki has apologized Crazy Star V.Ravichandran for his video - 'Ravichandran is Ekangi Now, Crazy Star is missing, Sorry to say this'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada