»   » ನಟ ದರ್ಶನ್ ಬಗ್ಗೆ ಸೃಜನ್ ಲೋಕೇಶ್ 'ಸತ್ಯ'ವಾಗ್ಲೂ ಹೇಳಿದ ದೊಡ್ಡ ಮಾತಿದು.!

ನಟ ದರ್ಶನ್ ಬಗ್ಗೆ ಸೃಜನ್ ಲೋಕೇಶ್ 'ಸತ್ಯ'ವಾಗ್ಲೂ ಹೇಳಿದ ದೊಡ್ಡ ಮಾತಿದು.!

Posted By:
Subscribe to Filmibeat Kannada
Srujan Lokesh speaks about Challenging Star Darshan | Watch Video | Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಹೇಗೋ... ಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೂಡ ಕುಚ್ಚಿಕ್ಕು ಗೆಳೆಯರು.

ಆತ್ಮೀಯ ಸ್ನೇಹಿತರಾಗಿರುವ ಇವರಿಬ್ಬರು ತಮ್ಮ ಸ್ನೇಹಕ್ಕೆ ಸಾಕ್ಷಿಯಾಗಿ ಎರಡು ಎತ್ತುಗಳಿಗೆ 'ಚಾಲೆಂಜಿಂಗ್ ಸ್ಟಾರ್ ಗಜ' ಮತ್ತು 'ಟಾಕಿಂಗ್ ಸ್ಟಾರ್ ಸುಜ' ಅಂತ ನಾಮಕರಣ ಕೂಡ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!

ಒಬ್ಬರನ್ನೊಬ್ಬರು ಎಂದೂ ಬಿಟ್ಟುಕೊಡದ ಈ ಗೆಳೆಯರ ಗೆಳೆತನ ಎಂಥದ್ದು ಅನ್ನೋದನ್ನ ಸ್ವತಃ ಸೃಜನ್ ಲೋಕೇಶ್ ರವರ ಮಾತುಗಳಲ್ಲಿಯೇ ಕೇಳಿರಿ...

ದರ್ಶನ್ ಇದ್ದರೆ....

''ನಿನ್ನಂಥ ಫ್ರೆಂಡ್ ಇದ್ದರೆ ಶತ್ರುಗಳೇ ಬೇಡ'' ಅಂತ ಸ್ನೇಹಿತರ ಜೊತೆ ಮಾತನಾಡುವಾಗ ಹೇಳುತ್ತೇವೆ. ಆದ್ರೆ, ದರ್ಶನ್ ತರಹ ಒಬ್ಬ ಫ್ರೆಂಡ್ ಇದ್ದರೆ, ಯಾವ ಶತ್ರು ಕೂಡ ಹತ್ತಿರ ಬರೋದಿಲ್ಲ'' ಅಂತ ನಟ ಸೃಜನ್ ಲೋಕೇಶ್ ಹೆಮ್ಮೆಯಿಂದ ಹೇಳಿದ್ದಾರೆ.

ದರ್ಶನ್ ಬಗ್ಗೆ ನಟ ಸೃಜನ್ ಮಾಡಿದ ಕಾಮೆಂಟ್ ಏನು?

ನಾನು ನನ್ನ ಜೀವನದಲ್ಲಿ ನೋಡಿರುವ ಏಕೈಕ ವ್ಯಕ್ತಿ

''ಮೊದಲನೇ ಸಿನಿಮಾ 'ಮೆಜೆಸ್ಟಿಕ್' ನಿಂದ ಹಿಡಿದು ಈಗ ಬಿಡುಗಡೆ ಆಗಿರುವ 'ತಾರಕ್'ವರೆಗೂ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದಿರುವ ದರ್ಶನ್, ಹುಟ್ಟಿದಾಗಿನಿಂದ ಹೇಗಿದ್ದರೋ ಈಗಲೂ ಹಾಗೇ ಇರುವ ಏಕೈಕ ವ್ಯಕ್ತಿ ನಾನು ನನ್ನ ಜೀವನದಲ್ಲಿ ನೋಡಿರೋದು'' ಅಂತ ಹೇಳ್ತಾ ದರ್ಶನ್ ವ್ಯಕ್ತಿತ್ವದ ಬಗ್ಗೆ ಸೃಜನ್ ಲೋಕೇಶ್ ಹಾಡಿ ಹೊಗಳಿದ್ದಾರೆ.

'ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!

ದರ್ಶನ್ ತರಹ ಫ್ರೆಂಡ್ ಸಿಗಲ್ಲ

''ಪ್ರತಿಯೊಂದು ಹಂತದಲ್ಲಿಯೂ ಸಿನಿಮಾ ಹೀರೋಗಳನ್ನು ನೋಡಿ ಫಾಲೋ ಮಾಡುತ್ತೀರಾ. ಹಾಗೆ ನೀವು ಫಾಲೋ ಮಾಡುವ ಹಾಗಿದ್ದರೆ, ಇನ್ನೊಬ್ಬರಿಗೆ ನೀವು ದರ್ಶನ್ ತರಹ ಫ್ರೆಂಡ್ ಆಗಿರಿ. ಸತ್ಯವಾಗಲೂ ಹೇಳ್ತೀನಿ, ಆ ತರಹ ಒಂದು ಫ್ರೆಂಡ್ ಸಿಗಲ್ಲ'' ಎಂದಿದ್ದಾರೆ ಸೃಜನ್ ಲೋಕೇಶ್.

ಮೈಸೂರಲ್ಲಿ ಸೃಜನ್ ಮಾತು

ಅಷ್ಟಕ್ಕೂ ಇದನ್ನೆಲ್ಲ ಸೃಜನ್ ಲೋಕೇಶ್ ಹೇಳಿದ್ದು ಮೈಸೂರಿನಲ್ಲಿ ನಡೆದ 'ಯುವ ದಸರಾ' ಸಮಾರಂಭದಲ್ಲಿ. ದರ್ಶನ್ ಸಮ್ಮುಖದಲ್ಲಿಯೇ ಇದನ್ನೆಲ್ಲ ಸೃಜನ್ ಲೋಕೇಶ್ ಹೇಳಿದರು. ಸೃಜನ್ ಆಡಿದ ದೊಡ್ಡ ಮಾತಿಗೆ ನೆರೆದಿದ್ದ ಜನತೆಯಿಂದ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಯ್ತು. ವಿಡಿಯೋ ನೋಡಿ...

English summary
Kannada Actor Srujan Lokesh speaks about Challenging Star Darshan in Yuva Dasara in Mysuru. Watch Video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada