»   » ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!

ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!

Posted By:
Subscribe to Filmibeat Kannada

ಬಹುಶಃ ಡಾ.ರಾಜ್ ಕುಮಾರ್ ಹೋಮ್ ಬ್ಯಾನರ್ ನಲ್ಲೇ 'ರನ್ ಆಂಟನಿ' ಸಿನಿಮಾ ಒಂದು ವಿಭಿನ್ನ ಪ್ರಯತ್ನ ಅಂದ್ರೆ ಖಂಡಿತ ತಪ್ಪಾಗೋಲ್ಲ.!

ಫ್ಯಾಮಿಲಿ ಆಡಿಯನ್ಸ್ ಗೆ ತಕ್ಕ ಹಾಗೆ ದಶಕಗಳಿಂದ ಸದಭಿರುಚಿಯ ಸಿನಿಮಾಗಳನ್ನು ನೀಡುತ್ತಾ ಬಂದಿರುವ ರಾಜ್ ಕುಟುಂಬ ಒಡೆತನದ 'ವಜ್ರೇಶ್ವರಿ ಕಂಬೈನ್ಸ್' (ವಜ್ರೇಶ್ವರಿ ಹಾಸ್ಪಿಟಾಲಿಟೀಸ್) ಸದ್ಯ 'ರನ್ ಆಂಟನಿ' ಎಂಬ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವನ್ನ ಕೊಡುಗೆಯಾಗಿ ನೀಡುತ್ತಿದೆ.


ನಂಬಿಕೆ-ಮೋಸ-ಪೊಲೀಸ್-ಕೇಸ್ ಸುತ್ತ ಹೆಣೆದಿರುವ 'ರನ್ ಆಂಟನಿ' ಮೊದಲ ನೋಟದಲ್ಲೇ ಪ್ರೇಕ್ಷಕರ ಮನದಲ್ಲಿ ಕುತೂಹಲ ಕೆರಳಿಸುತ್ತೆ. ಬೇಕಾದ್ರೆ, ಈಗಷ್ಟೇ ಬಿಡುಗಡೆ ಆಗಿರುವ 'ರನ್ ಆಂಟನಿ' ಟ್ರೈಲರ್ ನೋಡ್ಕೊಂಡ್ ಬನ್ನಿ....''ನಾನ್ಯಾರು.? ಪ್ರತಿಯೊಂದು ಮುಖವಾಡದ ಹಿಂದೆ ಒಂದು ಮುಖ ಇರುತ್ತೆ. ಆ ಮುಖದ ಹಿಂದೆ ಒಂದು ಕಥೆ. ಇದು ನನ್ನ ಕಥೆ'' ಎಂಬ ವಾಯ್ಸ್ ಓವರ್ ನಿಂದ ಶುರುವಾಗುವ ಟ್ರೈಲರ್, 'ರನ್ ಆಂಟನಿ' ಚಿತ್ರದ ಬಗ್ಗೆ ಇದುವರೆಗೂ ಇದ್ದ ನಿರೀಕ್ಷೆಯನ್ನ ಡಬಲ್ ಮಾಡುವುದು ಗ್ಯಾರೆಂಟಿ. [ನೀವು ಅಂದುಕೊಂಡಂಗಿಲ್ಲ ವಿನಯ್ ರವರ 'ರನ್ ಆಂಟನಿ' ಸಿನಿಮಾ.!]


ಇಡೀ ಟ್ರೈಲರ್ ನ ಹೈಲೈಟ್ ವಿನಯ್ ರಾಜ್ ಕುಮಾರ್. ಎಕ್ಸ್ ಮಿಲಿಟರಿ ಆಫೀಸರ್ ಮ್ಯಾಥ್ಯೂ ಡಿಸೋಜಾ ಪುತ್ರ ಆಂಟನಿ ಡಿ'ಸೋಜಾ ಪಾತ್ರ ನಿರ್ವಹಿಸಿರುವ ವಿನಯ್ ರಾಜ್ ಕುಮಾರ್, ಸಮಸ್ಯೆಯಲ್ಲಿ ಸಿಲುಕಿರುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.


-
-
-
-
-
-
-
-
-
-
-
-
-
-
-
-
-
-
-
-
-
-

ಪೊಲೀಸ್ ಆಫೀಸರ್ ಪಾತ್ರದಲ್ಲಿ ದೇವರಾಜ್ ಮಿಂಚಿರುವುದು 'ರನ್ ಆಂಟನಿ' ಚಿತ್ರದ ಮತ್ತೊಂದು ಆಕರ್ಷಣೆ. ನಾಪತ್ತೆ ಆಗಿರುವ ಹುಡುಗಿ ಪಾತ್ರದಲ್ಲಿ ರುಕ್ಷಾರ್ ಮೀರ್ ಅಭಿನಯಿಸಿದ್ರೆ, ಫ್ಲ್ಯಾಶ್ ಬ್ಯಾಕ್ ಗರ್ಲ್ ಫ್ರೆಂಡ್ ಆಗಿ ಸುಶ್ಮಿತಾ ಜೋಶಿ ನಟಿಸಿದ್ದಾರೆ. [ಸಂದರ್ಶನ: 'ರನ್ ಆಂಟನಿ' ಆಡಿಯೋ ಆಲ್ಬಂನ ಸ್ಪೆಷಾಲಿಟಿ ಏನು?]


ಮಣಿಕಾಂತ್ ಕದ್ರಿ ಬ್ಯಾಕ್ ಗ್ರೌಂಡ್ ಸಂಗೀತ ಟ್ರೈಲರ್ ಗೆ ಹೆಚ್ಚು ತೂಕ ಕೊಟ್ಟಿದೆ. ಮನೋಹರ್ ಜೋಶಿ ಕ್ಯಾಮರಾ ಕಂಗಳಲ್ಲಿ ಬೆಂಗಳೂರಿನ ಮೆಜೆಸ್ಟಿಕ್, ಸಿಟಿ ರೈಲ್ವೆ ಸ್ಟೇಷನ್ ಚೆನ್ನಾಗಿ ಕಂಡಿದೆ. ['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]


ರಘು ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ 'ರನ್ ಆಂಟನಿ' ಟ್ರೈಲರ್ ನೋಡಿ ನಿಮ್ಮ ಕುತೂಹಲ ಡಬಲ್ ಆಗಿದ್ರೆ, ಮುಂದಿನ ತಿಂಗಳ ವರೆಗೂ ಕೊಂಚ ಕಾಯಿರಿ. ಯಾಕಂದ್ರೆ, ಜುಲೈ ತಿಂಗಳಲ್ಲಿ 'ರನ್ ಆಂಟನಿ' ಬಿಡುಗಡೆ ಆಗಲಿದೆ.

English summary
Kannada Actor Vinay Rajkumar starrer 'Run Antony' trailer is out. 'Run Antony' features Rukshar Mir, Sushmita Joshi in the lead and is directed by Raghu Shastri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada