Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮರಿ ಹುಲಿ 'ಟೈಸನ್' S/O ಟೈಗರ್ ಟೀಸರ್ ನೋಡಿ...
''ತಾಕತ್ತಿರೋನು ಹೊಡೆದ್ರೆ ತಾಯಿತ ಕಟ್ಟಿಸ್ಕೋತೀರಾ...ಪವರ್ ಇರೋನು ಹೊಡೆದ್ರೆ ಪುತ್ತೂರ್ ಕಟ್ ಹಾಕಿಸ್ಕೋತೀರಾ...ಧಮ್ ಇರೋನು ಹೊಡೆದ್ರೆ ಧರ್ಮಾಸ್ಪತ್ರೆಯಲ್ಲಿ ಕಟ್ ಹಾಕಿಸ್ಕೋತೀರಾ...ಟೈಸನ್ ಹೊಡೆದ್ರೆ ಚಟ್ಟ ಕಟ್ಟಿಸ್ಕೋತೀರಾ...'' ಹೀಗಂತ ಅಬ್ಬರಿಸುತ್ತಾ ಗಾಂಧಿನಗರದ ಅಂಗಳದಲ್ಲಿ ಮತ್ತೊಮ್ಮೆ ಸೌಂಡ್ ಮಾಡಿರುವುದು ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್.
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ವರ್ಷಗಳೇ ಕಳೆದ್ರೂ, ವಿನೋದ್ ಪ್ರಭಾಕರ್ ಗೆ ಈವರೆಗೂ ಬಿಗ್ ಬ್ರೇಕ್ ಅಂತ ಸಿಕ್ಕಿಲ್ಲ. ಕಳೆದ ವರ್ಷ ರಿಲೀಸ್ ಆದ 'ಬೆಳ್ಳಿ' ಸಿನಿಮಾದ ಮೂಲಕ ಫಾರ್ಮ್ ಗೆ ಮರಳಿದ ವಿನೋದ್ ಈಗ 'ಟೈಸನ್' ಆಗಿದ್ದಾರೆ.
'ಟೈಸನ್' ಅಂತ ಟೈಟಲ್ ಕೇಳಿದ ತಕ್ಷಣ 'ಬಾಕ್ಸರ್' ಮೈಕ್ ಟೈಸನ್ ರನ್ನ ನೆನಪಿಸಿಕೊಳ್ಳುವಂತಿಲ್ಲ. ಯಾಕಂದ್ರೆ, ಈ 'ಟೈಸನ್' ಖಡಕ್ ಪೊಲೀಸ್ ಆಫೀಸರ್. ಖಾಕಿ ತೊಟ್ಟು ದುಷ್ಟ ನಿಗ್ರಹ ಮಾಡುವ ಆರಕ್ಷಕನಾಗಿದ್ದಾರೆ ವಿನೋದ್ ಪ್ರಭಾಕರ್.
ಇತ್ತೀಚೆಗಷ್ಟೇ ಫೋಟೋಶೂಟ್ ಮುಗಿಸಿರುವ 'ಟೈಸನ್' ಚಿತ್ರದ ಟೀಸರ್ ಈಗ ಬಿಡುಗಡೆ ಆಗಿದೆ. ಟೀಸರ್ ನಲ್ಲಿ ಅಬ್ಬರಿಸಿರುವ ವಿನೋದ್, ಇಡೀ ಚಿತ್ರದಲ್ಲಿ ಖೇಡಿಗಳ ರುಂಡ ಚೆಂಡಾಡಲಿದ್ದಾರಂತೆ. ['ಟೈಸನ್' ಆದ ಮರಿ ಟೈಗರ್ ವಿನೋದ್ ಪ್ರಭಾಕರ್]
'ಟೈಸನ್'ಗೆ ರವಿವರ್ಮಾ, ಡಿಫರೆಂಟ್ ಡ್ಯಾನಿ ಮತ್ತು ಮಾಸ್ ಮಾದ ಸಾಹಸ ಸಂಯೋಜಿಸಿದ್ರೆ, ವಿ.ಹರಿಕೃಷ್ಣ, ಜೆಸ್ಸಿ ಗಿಫ್ಟ್ ಮತ್ತು ಆರ್.ಎಸ್.ಗಣೇಶ್ ಸಂಗೀತ ಸಂಯೋಜಿಸಲಿದ್ದಾರೆ. ಟಿ.ಬಾಬು ರೆಡ್ಡಿ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಲಿದ್ದಾರೆ. 'ಪೈಪೋಟಿ' ಚಿತ್ರವನ್ನ ನಿರ್ದೇಶಿಸಿದ್ದ ಕೆ.ರಾಮ್ ನಾರಾಯಣ್ 'ಟೈಸನ್' ಚಿತ್ರದ ಸೂತ್ರಧಾರ.
'ನಮೋ ಭೂತಾತ್ಮ' ಚಿತ್ರದಲ್ಲಿ ಕೋಮಲ್ ಜೊತೆಯಾಗಿದ್ದ ಗಾಯತ್ರಿ ಐಯ್ಯರ್, ಇಲ್ಲಿ ವಿನೋದ್ ಪ್ರಭಾಕರ್ ಹೃದಯಕ್ಕೆ ಬಾಣ ಬಿಡುವ ಹುಡುಗಿ. ಟೀಸರ್ ಮಾತ್ರದಿಂದಲೇ ಸಖತ್ ಸೌಂಡ್ ಮಾಡುತ್ತಿರುವ 'ಟೈಸನ್' ಸದ್ಯದಲ್ಲೇ ಸೆಟ್ಟೇರಲಿದೆ. (ಫಿಲ್ಮಿಬೀಟ್ ಕನ್ನಡ)