»   » ಸ್ಯಾಂಡಲ್ವುಡ್ನಲ್ಲಿ 'ರಾ' ಹೆಸರಿನ ಚೆಲುವೆಯರ ಗರಂ ಹವಾ

ಸ್ಯಾಂಡಲ್ವುಡ್ನಲ್ಲಿ 'ರಾ' ಹೆಸರಿನ ಚೆಲುವೆಯರ ಗರಂ ಹವಾ

By: ಜೀವನರಸಿಕ
Subscribe to Filmibeat Kannada

ಕೆಲವೊಂದು ಕಾಕತಾಳೀಯಗಳು ಅಚ್ಚರಿ ಹುಟ್ಟಿಸುತ್ತವೆ. ಆದ್ರೆ ಅದ್ರಲ್ಲಿ ಯಾವುದೇ ತರ್ಕ ಇರೋದಿಲ್ಲ. ಅದು ಸತ್ಯವಂತೂ ಅಲ್ಲ. ಆದ್ರೆ ವಾಸ್ತವ ಅನ್ನೋದು ಮಾತ್ರ ಖಂಡಿತ. ದಶಕದಿಂದೀಚೆಗೆ ಚಂದನವನಕ್ಕೆ ಬಂದ ಚೆಂದದ ಚೆಲುವೆಯರಲ್ಲಿ ಗೆದ್ದವರಲ್ಲಿ 'ರ' ಅಕ್ಷರದಿಂದ ಹೆಸರಿಟ್ಟುಕೊಂಡಿರುವ ನಟಿಯರದ್ದೇ ಕಾರುಬಾರು.

ಹೌದು 'ರ' ಅಕ್ಷರದಿಂದ ಶುರುವಾಗೋ ಹೆಸರಿರೋ ನಟಿಯರೇ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟಿಯರಾಗೋ ಲೆವೆಲ್ಗೆ ಬೆಳೆದಿದ್ದಾರೆ. ಆದರೆ ತಮಾಷೆ ಅಂದರೆ, `ರ'ಗೂ ಅವ್ರವ್ರ ಪ್ರತಿಭೆಗೂ ಯಾವುದೇ ಸಂಬಂಧವಿಲ್ಲ. ಅಥವಾ ಚಿತ್ರರಂಗಕ್ಕೆ ಬಂದಮೇಲೆ ಆ ಅಕ್ಷರ ನೋಡಿ ಅದೃಷ್ಟ ಬಂತೊ? ಆ ದೇವರೇ ಬಲ್ಲ.

ಆದ್ರೂ ಈ `ರ' ಹೆಸರಿನ ಸುಂದರಿಯರು ಸ್ಯಾಂಡಲ್ವುಡ್ನ ದಶಕಗಳ ಕಾಲ ಆಳಿದ್ದಾರೆ. ಅನಭಿಷಿಕ್ತ ರಾಣಿಯರನ್ನಾಗಿ ಅವರನ್ನು ಅಭಿಮಾನಿಗಳು ಮಿಂಚಿಸಿ ಮೆರೆದಾಡಿಸಿದ್ದಾರೆ. ಈಗಲೂ ಈ 'ರಾ' ಮೆಟೀರಿಯಲ್ಗಳದ್ದೇ ಹವಾ. ಹಾಗಂತ ಉಳಿದವರು ಕಡಿಮೆಯೇನಿಲ್ಲ. ಆದರೆ, ಇವರ ಹವಾ ಮಾತ್ರ ಬಲೇ ಜೋರು. ಅವ್ರು ಯಾರ್ಯಾರೂ ಅಂತ ಸ್ಲೈಡ್ ತಿರುಗಿಸ್ತಾ ನೋಡಿ..

ಚಿತ್ರರಂಗದಲ್ಲಿ ರಂಗು ಚೆಲ್ಲಿದ ರಮ್ಯಾ

ಸ್ಯಾಂಡಲ್ವುಡ್ನಲ್ಲಿ ಸಿನಿರಸಿಕರ ಫೇವರಿಟ್ ಬ್ಯೂಟಿಯಾಗಿ ಮಿಂಚಿದ ರಮ್ಯಾ 15 ವರ್ಷಗಳಿಂದೀಚೆಗೆ ಸ್ಯಾಂಡಲ್ವುಡ್ನ ಎಲ್ಲಾ ಸೂಪರ್ಸ್ಟಾರ್ಗಳಿಗೆ ಜೋಡಿಯಾದ ನಟಿ. ರಮ್ಯ ಮೊದಲ ಹೆಸ್ರು ದಿವ್ಯಾ ಸ್ಪಂದನಾ. ಆದ್ರೆ ರಮ್ಯಾ ಆಗಿ ಈ ಸ್ಯಾಂಡಲ್ವುಡ್ ಕ್ವೀನ್ ಸ್ಟಾರ್ ಆಗಿ ಬೆಳೆದ ನಟಿ ರಾಜಕೀಯಕ್ಕೂ ಕಾಲಿಟ್ಟು ಅಲ್ಲೂ ಹವಾ ಎಬ್ಬಿಸಿದವರು.

ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್

ರಮ್ಯಾ ಜೊತೆ ಜೊತೆಗೆ ಸ್ಯಾಂಡಲ್ವುಡ್ನಲ್ಲಿ ಗೆಲುವಿನ ಸುಂಟರಗಾಳಿ ಎಬ್ಬಿಸಿ ಪರಭಾಷೆಗಳಿಗೂ ಎಂಟ್ರಿ ಕೊಟ್ಟ ಚೆಲುವೆ ರಕ್ಷಿತಾ. ತನ್ನ ಅಭಿನಯ ಮತ್ತು ಪಾತ್ರಗಳಿಂದ ಅಭಿಮಾನಿಗಳ ಮೆಚ್ಚಿನ ಕ್ರೇಜಿಕ್ವೀನ್. ಆದರೆ, ಅದೇಕೋ ಏನೋ ಅವರ ದಢೂತಿ ದೇಹ ಅವರನ್ನು ನಟಿಯಾಗಿ ಮುಂದುವರಿಯಲು ಬಿಡಲಿಲ್ಲ. ಸದ್ಯಕ್ಕೆ ಯಶಸ್ವಿ ಪ್ರೊಡ್ಯೂಸರ್ ಅವರು.

ಪ್ರತಿಭಾವಂತೆ ರಾಧಿಕಾ ಕುಮಾರಸ್ವಾಮಿ

ನೀಲಮೇಘಶ್ಯಾಮ ಅನ್ನೋ ಸಿನಿಮಾ ಮೂಲಕ ಸೃಜನ್ ಲೋಕೇಶ್ಗೆ ಜೋಡಿಯಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ಮಂಗಳೂರು ಚೆಲುವೆ. ರಾಧಿಕಾ ಕುಮಾರಸ್ವಾಮಿ ತಮ್ಮ ಟ್ಯಾಲೆಂಟ್ನಿಂದ ಸ್ಟಾರ್ ನಟಿಯಾಗಿ ಯಾರೂ ಊಹಿಸದ ಲೆವೆಲ್ಗೆ ಬೆಳೆದ ಪ್ರತಿಭಾವಂತೆ. ನಟನೆ ಹುಚ್ಚು ಇನ್ನೂ ಅವರನ್ನು ಬಿಟ್ಟಿಲ್ಲ.

ರಾಜಕುಮಾರಿ, ನಂ.1 ನಟಿ ರಾಧಿಕಾ ಪಂಡಿತ್

ರಾಣಿಯಾಗಿ ರಮ್ಯಾ ಮಿಂಚಿದ ನಂತ್ರ ನಂಬರ್ ಒನ್ ಪಟ್ಟಕ್ಕೇನಾದ್ರೂ ಸೂಕ್ತ ಅಂತಿದ್ರೆ ಅದು ರಾಧಿಕಾ ಪಂಡಿತ್ ಅಂತ ರಮ್ಯಾರಿಂದಲೇ ಹೊಗಳಿಸಿಕೊಂಡ ಚೆಲುವೆ ರಾಧಿಕಾ ಪಂಡಿತ್. ರಾಧಿಕಾ ಸಿನಿ ಕೆರಿಯರ್ ನೋಡಿದ್ರೇ ಗೊತ್ತಾಗುತ್ತೆ ರಾಧಿಕಾ ನಂಬರ್ 1 ಹೌದಾ ಅಲ್ಲವಾ ಅಂತ. ಸದ್ಯಕ್ಕಂತೂ ನಂ.1, ಮುಂದೆ ಮದುವೆಯಾದ ಮೇಲೆ ಹೇಗೋ ಏನೋ?

ನಾಟಿ ಕೋಳಿ ಖ್ಯಾತಿಯ ರಾಗಿಣಿ ದ್ವಿವೇದಿ

ಸ್ಯಾಂಡಲ್ವುಡ್ನ ಗ್ಲಾಮರ್ಡಾಲ್ ಅಂದರೆ ರಾಗಿಣಿ ದ್ವಿವೇದಿ. ಹಿಂದೆ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದವರು ಕೂಡ. ಈ ಟ್ರೆಂಡ್ನ ಹೆಚ್ಚಿನ ಸ್ಟಾರ್ಗಳಿಗೆ ಜೋಡಿಯಾದ ನಟಿ. ಗ್ಲಾಮರ್ನಿಂದಾನೆ ಸಿನಿಪ್ರೇಮಿಗಳ ಎದೆಗೆ ಕಿಚ್ಚುಹಚ್ಚೋ ಈ ಚೆಲುವೆ ಚಂದನವನದ ನಾಯಕಿಯರ ಲಿಸ್ಟ್ನಲ್ಲಿ ಯಾವಾಗ್ಲೂ ಟಾಪ್ನಲ್ಲಿರ್ತಾರೆ.

ಸ್ಯಾಂಡಲ್ವುಡ್ನ ಹೊಸಗಾಳಿ ರಚಿತಾ ರಾಮ್

ಮುಂದಿನ ಟ್ರೆಂಡ್ನ ನಾಯಕಿ ಅನ್ನಿಸಿಕೊಂಡಿರೋ ರಚಿತಾ ರಾಮ್ ಒಂದೊಂದೇ ಸೂಪರ್ಸ್ಟಾರ್ಗಳ ಜೊತೆ ನಟಿಸ್ತಿದ್ದಾರೆ. ಸೌಂದರ್ಯದ ಜೊತೆಗೆ ಅದೃಷ್ಟವೂ ಕೂಡಿಬಂದಿದೆ. ರಚಿತಾ ರಾಮ್ ಅಭಿನಯದ 'ರನ್ನ' ಚಿತ್ರ ಸದ್ಯದಲ್ಲೇ ರಿಲೀಸಾಗಲಿದೆ.

English summary
What's in the name? Ask Radhika Kumaraswamy, Ramya, Ragini Dwivedi, Rakshitha, Radhika Pandit, Rachita Ram. It is sheer coincidence that actresses with name starting from R have ruled the Kannada film industry for decades. It has not stopped yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada