»   » ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶ್ರೀಮುರಳಿ

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶ್ರೀಮುರಳಿ

Posted By:
Subscribe to Filmibeat Kannada

ಸದ್ಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಲಿಂಗಾ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಮಂಡ್ಯ, ಮೈಸೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಅಭಿಮಾನಿಗಳು ರಜನಿಯನ್ನು ನೋಡಲು ಹರಸಾಹಸ ಪಟ್ಟಿದ್ದನ್ನೂ ಓದಿಯೇ ಇರುತ್ತೀರ.

ಇದೀಗ ಸೈಲೆಂಟ್ ಸ್ಟಾರ್ ಶ್ರೀಮುರಳಿ ಅವರ ರಜನಿಯೊಂದಿಗಿನ ಚಿತ್ರ ಫೇಸ್ ಬುಕ್ ನಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದೆ. ಇಷ್ಟಕ್ಕೂ ಈ ಚಿತ್ರ ಇತ್ತೀಚೆಗಿನದಲ್ಲ. ಅಂಬಿ ಸಂಭ್ರಮದಲ್ಲಿ ತೆಗೆದದ್ದು. ಆಗ ತೆಗೆದ ಫೋಟೋ ಈಗ ಯಾಕೆ ಹಾಕಿದರು ಎಂಬುದನ್ನು ಸ್ವತಃ ಶ್ರೀಮುರಳಿ ಹೇಳಿದ್ದಾರೆ. [ಇದು ಜೋಕ್ ಅಲ್ಲ ನಿಜ, ಟ್ವಿಟ್ಟರ್ ಗೆ ರಜನಿಕಾಂತ್]

When Sri Murali met Rajini

ರಜನಿ ಅವರು ಟ್ವಿಟ್ಟರ್ ಗೆ ಅಡಿಯಿಟ್ಟದ್ದು ಅವರು ಫಾಲೋವರ್ಸ್ ಸಂಖ್ಯೆ ದಿನೇದಿನೇ ಏರುತ್ತಿರುವುದು. ಅದು ಒಂದಲ್ಲ ಒಂದು ದಿನ ಕೋಟಿ ಗಡಿ ತಲುಪುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಾರೆ ಶ್ರೀಮುರಳಿ. ಈ ಸಂದರ್ಭದಲ್ಲಿ ಒಂದು ನೆನಪಿನ ಫೋಟೋ ಹಾಕಿ ತಲೈವಾಗೆ ಸಲ್ಯೂಟ್ ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ರಜನಿ ಜೊತೆಗಿನ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಶ್ರೀಮುರಳಿ ಸಂಭ್ರಮಿಸಿದ್ದಾರೆ. ಇನ್ನು ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರ 75 ದಿನಗಳನ್ನು ಪೂರೈಸಿದ್ದು ಶತದಿನೋತ್ಸವಕ್ಕೆ ಹತ್ತಿರವಾಗುತ್ತಿದೆ. ರಜನಿ ಅವರ ಅನಿಮೇಶನ್ ಚಿತ್ರ ಕೋಚಡಿಯಾನ್ ಚಿತ್ರ ಮೇ.23ಕ್ಕೆ ತೆರೆಕಾಣುತ್ತಿದೆ. (ಏಜೆನ್ಸೀಸ್)

English summary
Kannada adctor Sri Murali posted an image, where he is seen with Rajinikanth and Mohan Babu. The actor met the duo in Ambareesh's 60th birthday, which was held in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada