»   » ಉಗ್ರಂ ಮುರಳಿ 'ರಥಾವರ' ಶೂಟಿಂಗ್ ಮುಗಿಯೋದ್ಯಾವಾಗ?

ಉಗ್ರಂ ಮುರಳಿ 'ರಥಾವರ' ಶೂಟಿಂಗ್ ಮುಗಿಯೋದ್ಯಾವಾಗ?

By: ಜೀವನರಸಿಕ
Subscribe to Filmibeat Kannada

ರಥಾವರ. ಉಗ್ರಂ ನಂತ್ರ ಸ್ಯಾಂಡಲ್ವುಡ್ ಸಿನಿರಸಿಕರ ತಲೆಯಲ್ಲಿ ಗಿರಿಕಿ ಹೊಡೀತಾ ಇರೋ ಮತ್ತೊಂದು ಸಿನಿಮಾ. ಶ್ರೀಮುರಳಿ ಅಭಿನಯದ ಉಗ್ರಂ ಭರ್ಜರಿ ಸಕ್ಸಸ್ ಪಡ್ಕೊಂಡ ನಂತ್ರ ಎರಡು ವರ್ಷಗಳ ಸಮಯ ತೆಗೆದುಕೊಂಡು ತಯಾರಿಸ್ತಿರೋ ಚಿತ್ರ ಇದು.

ಉಗ್ರಂನಲ್ಲಿ ಶ್ರೀಮುರಳಿಗೆ ನಾಯಕಿಯಾಗಿರೋದು ಸ್ಯಾಂಡಲ್ವುಡ್ ಬುಲ್ ಬುಲ್ ರಚಿತಾರಾಮ್. ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಮಂಗಳೂರಿನ ಸುತ್ತಮುತ್ತ ಬೀಚ್ಗಳಲ್ಲಿ ನಡೀತಿದ್ದು 8ನೇ ತಾರೀಕು ಚಿತ್ರದ ಒಟ್ಟಾರೆ ಚಿತ್ರೀಕರಣ ಮುಗಿಯಲಿದೆ.[ಉಗ್ರಂ ಮಾಡಿದ ಎಫೆಕ್ಟ್ ಎಂಥಾದ್ದು ಗೊತ್ತಾ?]

When will Sri Murali's Rathavara release?

ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ 1ಕ್ಕೆ ಆಡಿಯೋ ರಿಲೀಸ್ ಪ್ಲಾನ್ನಲ್ಲಿ ಚಿತ್ರ ತಂಡ ಇದ್ದು. ಚಿತ್ರವನ್ನ ಈ ವರ್ಷದ ಅಂತ್ಯದ ವೇಳೆಗೆ ತೆರೆಮೇಲೆ ತರ್ತೀವಿ ಅನ್ನೋ ಲೆಕ್ಕಾಚಾರದಲ್ಲಿದೆ ಮೋಹನ್ ಬಂಡಿಯಪ್ಪ ನಿರ್ದೇಶನದ ರಥಾವರ ಟೀಂ.[ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?]

ಒಂದು ರೀತಿಯಲ್ಲಿ ಉಗ್ರಂ ಸಿನೆಮಾ ಶ್ರೀಮುರಳಿಗೆ ಮರುಜೀವ ನೀಡಿತ್ತು. ಇದಕ್ಕೂ ಮೊದಲು ಮಾಡಿದ ಸಿನೆಮಾಗಳೆಲ್ಲ ಶ್ರೀಮುರಳಿಗೆ ಅಂಥ ಹೆಸರು ತಂದುಕೊಟ್ಟಿರಲಿಲ್ಲ. ಶ್ರೀಮುರಳಿ ಆರಕ್ಕೇರದೆ ಮೂರಕ್ಕಿಳಿಯದೆ ಚಿತ್ರರಂಗದಲ್ಲಿ ಇದ್ದಂತೆ ಇದ್ದರು. ಉಗ್ರಂ ಬಂದಿದ್ದೇ ಬಂದಿದ್ದು, ಶ್ರೀಮುರಳಿ ಭಾರೀ ಬೇಡಿಕೆಯ ನಟರಲ್ಲಿ ಒಬ್ಬರಾದರು.

English summary
When will Sri Murali's Rathavara release? The shooting is slowly progressing. Film team is thinking of releasing audio of the movie in the first week of November. Actress Rachita Ram is pairing up with Sri Murali. After success of Ugramm movie high expectations are on Rathavara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada