For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?

  |
  ಕನ್ನಡ ಚಿತ್ರರಂಗಕ್ಕೆ ಮುಂದಿನ 'ಯಜಮಾನ' ಯಾರಾಗಬಹುದು.? | FILMIBEAT KANNADA

  ಡಾ ರಾಜ್-ವಿಷ್ಣು ನಂತರ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ 'ಯಜಮಾನ'ನಂತಿದ್ದರು. ಇಂಡಸ್ಟ್ರಿಗೆ ಸಂಬಂಧಪಟ್ಟಂತೆ ಯಾವುದೇ ವಿಷ್ಯವಿದ್ರು ಅಂತಿಮವಾಗಿ ಅಂಬಿ ಮನೆಯಲ್ಲೇ ನಿರ್ಧಾರವಾಗ್ತಿತ್ತು. ಒಂದು ರೀತಿ 'ಜಲೀಲ'ನ ಮನೆ ಚಿತ್ರರಂಗದ ಹೆಡ್ ಆಫೀಸ್ ಆಗಿತ್ತು.

  ಆದ್ರೀಗ, ಸಿನಿಕುಟುಂಬವನ್ನ ಬಿಟ್ಟು ಹೋಗಿದ್ದಾರೆ 'ಅಂಬಿ'. ಅಲ್ಲಿ ಇಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ತಪ್ಪುಗಳನ್ನ ತಿದ್ದಿ ಮುನ್ನಡೆಸುತ್ತಿದ್ದ ಮೇಷ್ಟು ಇನ್ನು ನೆನಪು ಮಾತ್ರ. ಈಗ ಅಂತಹ ಜವಾಬ್ದಾರಿಯನ್ನ ನಿರ್ವಹಿಸುವುದು ಯಾರು.?

  ಡಾ.ರಾಜ್ ಕಂಡಿದ್ದ ಕನಸನ್ನ ಅಂಬರೀಶ್ ಈಡೇರಿಸಿಬಿಟ್ಟರು

  ಒಡೆಯನಿಲ್ಲದ ಮನೆಯ ಸಾರಥಿ ಯಾರಾಗಬಹುದು. ಅಂಬಿ ನಂತರದ ಸ್ಥಾನದಲ್ಲಿ ಹಲವರು ಕಲಾವಿದರಿದ್ದಾರೆ. ಎಲ್ಲರೂ ಅವರದ್ದೇ ಆದ ಸಾಧನೆ ಮೂಲಕ, ಕಲೆ ಮೂಲಕ ಅಭಿಮಾನಿ ಮತ್ತು ಅಭಿಮಾನವನ್ನ ಗಳಿಸಿಕೊಂಡಿದ್ದಾರೆ. ಹಾಗಿದ್ರೆ, ಅಂಬಿಯ ನಂತರದ 'ಯಜಮಾನ' ಯಾರು.? ಮುಂದೆ ಓದಿ.....

  ದೊಡ್ಮನೆ ಹುಡುಗ ಶಿವಣ್ಣ

  ದೊಡ್ಮನೆ ಹುಡುಗ ಶಿವಣ್ಣ

  ರಾಜ್ ಕುಮಾರ್ ನಂತರ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿದ್ದರು ಅಂಬರೀಶ್. ಅಂಬಿಯ ನಂತರ ಶಿವರಾಜ್ ಕುಮಾರ್ ಅವರ ಸ್ಥಾನದಲ್ಲಿ ಕೂರಬಹುದು. ದೊಡ್ಮನೆ ಅಂದ್ರೆ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ವಿಶೇಷ ಗೌರವವಿದೆ. ಶಿವಣ್ಣ ಅಂದ್ರೂ ಅಷ್ಟೇ ಅಭಿಮಾನ ಇದೆ. ಕಲಾವಿದರ ಸಂಘದಲ್ಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಶಿವರಾಜ್ ಕುಮಾರ್, ಬಹುಶಃ ಅಧ್ಯಕ್ಷರಾಗಬಹುದು ಎಂಬ ನಿರೀಕ್ಷೆ ಇದೆ. ಸತತ ಸಿನಿಮಾಗಳಲ್ಲಿ ಸದಾ ಬ್ಯುಸಿ ಇರುವ ಶಿವಣ್ಣ, ಈ ಜವಾಬ್ದಾರಿಯನ್ನ ಪಡೆದುಕೊಳ್ತಾರೆ ಗೊತ್ತಿಲ್ಲ.

  ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು

  ಚಿತ್ರಬ್ರಹ್ಮ ರವಿಚಂದ್ರನ್

  ಚಿತ್ರಬ್ರಹ್ಮ ರವಿಚಂದ್ರನ್

  ಶಿವರಾಜ್ ಕುಮಾರ್ ಅವರ ಸಾಲಿನಲ್ಲಿ ಬರುವ ಇನ್ನೊಬ್ಬ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಸುಮಾರು 4 ದಶಕಗಳಿಂದ ಈಶ್ವರಿ ಪ್ರೊಡಕ್ಷನ್ ಕಾರ್ಯನಿರ್ವಹಿಸುತ್ತಿದೆ. ನಟ, ನಿರ್ದೇಶಕ, ನಿರ್ಮಾಪಕ, ವಿತರಕ ಹಾಗೂ ತಂತ್ರಜ್ಞರಾಗಿರುವ ರವಿಚಂದ್ರನ್ ಇದಕ್ಕೆ ಸೂಕ್ತ ಆಯ್ಕೆ ಎನ್ನಬಹುದು. ಆದ್ರೆ, ಇಂತಹ ಜವಾಬ್ದಾರಿಯನ್ನ ಕ್ರೇಜಿಸ್ಟಾರ್ ತೆಗೆದುಕೊಳ್ಳುವುದು ಅನುಮಾನ. ಯಾಕಂದ್ರೆ, ಕನಸು ಮತ್ತು ಕೆಲಸ ಬರಿ ಸಿನಿಮಾ ಎನ್ನುವ ವ್ಯಕ್ತಿ ಅವರು. ಸಿನಿಮಾ ಮೂಲಕವೇ ಏನಾದರೂ ಮಾಡಬೇಕು ಎಂಬ ಛಲ ಅವರದ್ದು. ಹೆಚ್ಚಿನ ಜವಾಬ್ದಾರಿ ಸ್ವೀಕರಿಸ್ತಾರಾ ಕಾದುನೋಡಬೇಕಿದೆ.

  ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

  ಜಗ್ಗೇಶ್ ಆಗಬಹುದು

  ಜಗ್ಗೇಶ್ ಆಗಬಹುದು

  ಹಾಗ್ನೋಡಿದ್ರೆ, ಜಗ್ಗೇಶ್ ಅವರು ಕೂಡ ಉತ್ತಮ ಆಯ್ಕೆಯಾಗಬಹುದು. ಯಾಕಂದ್ರೆ, ಅಂಬರೀಶ್ ಇದ್ದಾಗಲೂ, ಜಗ್ಗೇಶ್ ಅನೇಕ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ನೆರವಾಗಿದ್ದಾರೆ. ಯಾವುದಾದರೂ ಸಮಸ್ಯೆಗಳು ಬಂದ್ರೆ, ಮೊದಲು ಓಡಿಬರ್ತಾರೆ. ಎಲ್ಲ ಕಲಾವಿದ, ನಿರ್ದೇಶಕ, ನಿರ್ಮಾಪಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈ ಕಡೆ ರಾಜಕೀಯದಲ್ಲೂ ಇದ್ದಾರೆ. ಬಟ್, ಜಗ್ಗಣ್ಣ ಏನಂತರೋ ಗೊತ್ತಿಲ್ಲ.

  ದೊಡ್ಡಣ್ಣ-ರಾಕ್ಲೈನ್

  ದೊಡ್ಡಣ್ಣ-ರಾಕ್ಲೈನ್

  ಅಂಬರೀಶ್ ಅವರ ಜೊತೆ ಸದಾ ಸಕ್ರೀಯರಾಗಿದ್ದ ಇಬ್ಬರು ನಟರು ಅಂದ್ರೆ ದೊಡ್ಡಣ್ಣ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್. ಸಿನಿಮಾರಂಗದ ಎಲ್ಲಾ ಆಗುಹೋಗುಗಳ ಬಗ್ಗೆ ಅರಿವುಳ್ಳ ಇವರಿಬ್ಬರಲ್ಲಿ ಒಬ್ಬರು ಲೀಡ್ ಮಾಡಬಹುದು. ಅಥವಾ ಇಬ್ಬರು ಸೇರಿ ಮುನ್ನಡೆಸಬಹುದು.

  ಆ ದಿನ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನ ಬಿಚ್ಚಿಟ್ಟ ದೊಡ್ಡಣ್ಣ!

  ಯುವ ನಟರ ಜವಾಬ್ದಾರಿ ಏನು.?

  ಯುವ ನಟರ ಜವಾಬ್ದಾರಿ ಏನು.?

  ಹಾಗ್ನೋಡಿದ್ರೆ ನಟಿಯರಲ್ಲಿ ಲೀಲಾವತಿ, ಜಯಂತಿ, ಬಿ ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್ ಅಂತಹ ಹಿರಿಯ ನಟಿಯರಿದ್ದಾರೆ. ಬಟ್, ಇಂದಿನ ಪರಿಸ್ಥಿತಿಗಳನ್ನ, ಇಂದಿನ ಒತ್ತಡಗಳನ್ನ ನಿಭಾಯಿಸುವಲ್ಲಿ ಈ ಲೆಜೆಂಡ್ ನಟಿಯರಿಗೆ ಕಷ್ಟವಾಗಬಹುದು. ಇನ್ನು ಸುದೀಪ್, ದರ್ಶನ್, ಯಶ್, ಗಣೇಶ್, ಪುನೀತ್ ಅಭಿಮಾನಿಗಳನ್ನ ರಂಜಿಸುವಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಈ ಸ್ಥಾನವನ್ನ ಯಾರೊ ಕೊಟ್ಟು ಯಾರೋ ನಿರ್ವಹಿಸುವುದಲ್ಲ, ಅದು ತಾನಾಗಿಯೇ ಬರಬೇಕು. ಅಂತಹ ವ್ಯಕ್ತಿತ್ವ ಅಂತಹ ಸಂದರ್ಭ ಅದನ್ನ ಅಂತಿಮ ಮಾಡುತ್ತೆ.

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

  English summary
  Ambarish was not only a hero in movies, but also a leader for kannada film industry. Apart him who will leads the industry now.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X