For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!

  |

  ಕನ್ನಡದ ಹಿರಿಯ ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ವಿವಾದ ದೊಡ್ಡ ಮಟ್ಟಕ್ಕೆ ತಲುಪಿದೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಕೆಲವು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ''ದರ್ಶನ್ ಅವರ ಬಗ್ಗೆ ನೀವು ಮಾತನಾಡಿದ್ದು ಸರಿಯಿಲ್ಲ, ನೀವು ಫ್ಯಾನ್ಸ್ ಬಳಿ ಕ್ಷಮೆ ಕೇಳಿ'' ಎಂದು ಏಕವಚನದಲ್ಲಿ ಅವಮಾನಿಸಿದ್ದಾರೆ.

  ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು | Filmibeat Kannada

  ಚಿತ್ರರಂಗದ ಹಿರಿಯ ನಟರೊಬ್ಬರನ್ನು ಅಭಿಮಾನಿಗಳು ಈ ರೀತಿ ನಡೆಸಿಕೊಂಡಿದ್ದು ತಪ್ಪು ಎಂಬ ಅಭಿಪ್ರಾಯ ಮೂಡಿದೆ. ಮತ್ತೊಂದೆಡೆ ದರ್ಶನ್ ಹುಡುಗರ ಕುರಿತು ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಷಯದ ಬಗ್ಗೆ ಕೂತು ಬಗೆಹರಿಸಿದರೆ ಒಳ್ಳೆಯದು ಎಂದು ಸಲಹೆ ಕೊಡ್ತಿದ್ದಾರೆ.

  ಜಗ್ಗೇಶ್ ಲೈವ್: ಮಾಧ್ಯಮ, ಸ್ಟಾರ್‌ಡಂ, ರೌಡಿಸಂ ಸಂಸ್ಕೃತಿ ಮೇಲೆ ಸಿಟ್ಟು

  ನಿನ್ನೆ ಮೈಸೂರಿನಲ್ಲಿ ನಡೆದ ಘಟನೆ ಬಳಿಕ ನಟ ಜಗ್ಗೇಶ್ ತೀವ್ರವಾಗಿ ನೊಂದಿದ್ದಾರೆ. ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದ ಜಗ್ಗೇಶ್ ''ಚಿತ್ರರಂಗದಲ್ಲಿ ರೌಡಿಸಂ ಸಂಸ್ಕೃತಿ ಬಂದಿದೆ, ಇಂಡಸ್ಟ್ರಿ ಹಾಳಾಗಿ ಹೋಗಿದೆ'' ಎಂದು ಕಿಡಿಕಾರಿದರು. ಸದ್ಯಕ್ಕೆ ಈ ವಿವಾದ ತಣ್ಣಗಾಗುವು ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಅದೊಂದೆ ಮಾರ್ಗ. ಮುಂದೆ ಓದಿ...

  ದರ್ಶನ್ ಏಕೆ ಮೌನವಾಗಿದ್ದಾರೆ?

  ದರ್ಶನ್ ಏಕೆ ಮೌನವಾಗಿದ್ದಾರೆ?

  ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಈ ವಿವಾದ ಬಗ್ಗೆ ಇದುವರೆಗೂ ನಟ ದರ್ಶನ್ ಪ್ರತಿಕ್ರಿಯಿಸಿಲ್ಲ. ಈ ಕುರಿತು ದಾಸನ ಗಮನಕ್ಕೆ ಬಂದಿಲ್ಲವೋ ಅಥವಾ ತಿಳಿದಿದ್ದರೂ ಸಣ್ಣ ವಿಚಾರ ಅಂತ ಸುಮನ್ನಿದ್ದಾರೋ ಗೊತ್ತಿಲ್ಲ. ಈಗಲಾದರೂ ನಟ ದರ್ಶನ್ ಈ ಕುರಿತು ಪ್ರತಿಕ್ರಿಯೆ ನೀಡಿ ಅಭಿಮಾನಿಗಳನ್ನು ತಣ್ಣಗಾಗಿಸುವ ಅನಿವಾರ್ಯತೆ ಇದೆ. ''ಖಾಸಗಿ ವಾಹಿನಿ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು ಸಹ ದರ್ಶನ್ ಈಗಲಾದರೂ ಮಾತನಾಡಿ ಈ ಸಮಸ್ಯೆ ಬಗೆಹರಿಸಲಿ'' ಎಂದು ಸಲಹೆ ಕೊಟ್ಟಿದ್ದಾರೆ.

  ದರ್ಶನ್ ಮತ್ತು ಜಗ್ಗೇಶ್ ಬಹಳ ಚೆನ್ನಾಗಿಯೇ ಇದ್ದರು

  ದರ್ಶನ್ ಮತ್ತು ಜಗ್ಗೇಶ್ ಬಹಳ ಚೆನ್ನಾಗಿಯೇ ಇದ್ದರು

  ದರ್ಶನ್ ಅವರ ಹುಟ್ಟುಹಬ್ಬಕ್ಕೂ ಎರಡು ದಿನ ಹಿಂದೆ ಈ ಆಡಿಯೋ ಕ್ಲಿಪ್ ಲೀಕ್ ಆಗಿತ್ತು. ಇದಾದ ಬಳಿಕ ದರ್ಶನ್ ಹುಟ್ಟುಹಬ್ಬಕ್ಕೆ ಜಗ್ಗೇಶ್ ಟ್ವಿಟ್ಟರ್ ಮೂಲಕ ಶುಭ ಕೋರಿದರು. ನಟ ದರ್ಶನ್ ಸಹ ಜಗ್ಗೇಶ್ ಅವರ ಶುಭಾಶಯಕ್ಕೆ ಧನ್ಯವಾದ ತಿಳಿಸಿದ್ದರು. ಅಲ್ಲಿಗೆ ಈ ಘಟನೆ ಕಲಾವಿದರ ನಡುವಿನ ಸಂಬಂಧಕ್ಕೆ ಯಾವುದೇ ಕಂಟಕವಾಗಿರಲಿಲ್ಲ ಎನ್ನುವುದನ್ನು ಸಾರಿತ್ತು. ಆದರೂ ಇಂತಹ ಬೆಳವಣಿಗೆ ನಡೆದಿದ್ದರ ಹಿಂದಿನ ಉದ್ದೇಶ ಏನು ಎನ್ನುವುದು ಪ್ರಶ್ನೆಯಾಗಿದೆ.

  ನಾವು ಮೂರ್ನಾಲ್ಕು ಜನ ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ: ಜಗ್ಗೇಶ್ ಆಕ್ರೋಶದ ನುಡಿ

  ಜಗ್ಗೇಶ್ ಜೊತೆ ಮಾತನಾಡಿಲ್ಲ?

  ಜಗ್ಗೇಶ್ ಜೊತೆ ಮಾತನಾಡಿಲ್ಲ?

  ದರ್ಶನ್ ಅವರಾಗಲಿ ಅಥವಾ ಜಗ್ಗೇಶ್ ಅವರಾಗಲಿ ಈ ಬೆಳವಣಿಗೆ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಶೂಟಿಂಗ್ ಸ್ಥಳಕ್ಕೆ ದರ್ಶನ್ ಅಭಿಮಾನಿಗಳಿಗೂ ಮುತ್ತಿಗೆ ಹಾಕಿದ ವೇಳೆ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಪಟ್ಟರಾದರೂ ನಂಬರ್ ಕನೆಕ್ಟ್ ಆಗಿಲ್ಲ ಎಂದು ಹೇಳಲಾಗಿದೆ. ಈ ಘಟನೆ ಬಳಿಕವೂ ಈ ಇಬ್ಬರು ಕಲಾವಿದರು ಮಾತನಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ನಟ ದರ್ಶನ್ ಈ ಘಟನೆ ಬಗ್ಗೆ ಟ್ವಿಟ್ಟರ್ ಅಥವಾ ಫೇಸ್‌ಬುಕ್‌ನಲ್ಲಿ ಪಾಸಿಟಿವ್ ಆಗಿ ಸಂದೇಶ ರವಾನಿಸಿದರೆ ಎಲ್ಲವೂ ಕೂಲ್ ಆಗುವ ಸಾಧ್ಯತೆ ಇದೆ.

  ಯಾವುದು ನನಗೆ ಬೇಡ

  ಯಾವುದು ನನಗೆ ಬೇಡ

  ಈ ಘಟನೆಯಿಂದ ತೀವ್ರ ಬೇಸರಗೊಂಡ ಜಗ್ಗೇಶ್ ''ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದೆ, ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ! ಮುಂದೆ ನನ್ನ ಸಿನಿಮಾ ನನ್ನ ztv showಗೆ ಮೀಸಲು ಬದುಕು! ಕಾರಣ ತುಂಬ ತಾಮಸವಾಗಿದೆ ನಮ್ಮರಂಗ, ದೊಡ್ಡವರು ಬದುಕಿದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ'' ಎಂದು ಟ್ವೀಟ್ ಮಾಡಿದರು.

  English summary
  Darshan Fans and Jaggesh Controversy: Why Darshan did not react on Darshan Fans attacking on jaggesh yesterday?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X