For Quick Alerts
  ALLOW NOTIFICATIONS  
  For Daily Alerts

  ಪವರ್‌ಸ್ಟಾರ್‌ಗೆ ಹಲೋ, ಪುನೀತ್ ರಾಜ್ ಕುಮಾರ್ ಹೇಗಿದ್ದೀಯಾ ಎಂದ ಪುಟಾಣಿ!

  By Muralidhara.v
  |

  ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ ಬಹುಶಃ ಯಾರೂ ಹೆಸರಿಟ್ಟು ಸಾರ್ವಜನಿಕವಾಗಿ ಕರೆದಿದ್ದೇ ಇಲ್ಲ. ಅಭಿಮಾನಿಗಳು ಅಪ್ಪು ಅಂತಲೇ ಕರೆಯುತ್ತಾರೆ. ಇನ್ನೂ ಕೆಲವರು ನಟಸಾರ್ವಭೌಮ ನಮ್ಮ ಅಪ್ಪು ಎಂದೇ ಹೇಳುತ್ತಾರೆ. ಬಹುತೇಕರು ರಾಜಕುಮಾರ ಅಂತಲೇ ಕರೆಯುತ್ತಾರೆ. ಪುನೀತ್ ರಾಜ್ ಕುಮಾರ್ ಗಿಂತಲೂ ದೊಡ್ಡವರು ಕೂಡ ಹೆಸರಿಟ್ಟು ಕೂಗಿದ್ದು ಇಲ್ಲ! ಆದ್ರೆ ಎರಡು ವರ್ಷದ ಪುಟ್ಟ ಪೋರಿ ಪುನೀತ್ ರಾಜ್ ಕುಮಾರ್‌ಗೆ ಕರೆ ಮಾಡಿ "ಹಲೋ ಪುನೀತ್ ರಾಜ್ ಕುಮಾರ್ ಹೇಗಿದ್ದೀಯಾ" ಎಂದು ಕೇಳಿದ್ದಾಳೆ ! ಹೀಗೆ ಪುಟ್ಟ ಕಂದಮ್ಮನ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಪುನೀತ್ ರಾಜ್ ಕುಮಾರ್ ವಿಡಿಯೋ ಕಾಲ್ ಮಾಡಿ ಸರಿಯಾಗಿಯೇ ಉಡುಗೊರೆ ಕೊಟ್ಟಿದ್ದಾರೆ.

  Puneeth Rajkumar ಗೆ ಫ್ರೆಂಡ್ ತರ ಮಾತನಾಡಿಸಿದ ಪುಟಾಣಿ | Filmibeat Kannada

  ಅಚ್ಚರಿಯಾದರೂ ಸತ್ಯ. ರೇಡಿಯೋ ಸಿಟಿ ಆರ್ ಜೆ. ಸೌಜನ್ಯ ಮುದ್ದು ಮಗಳ ರಿಯಲ್ ಸ್ಟೋರಿ. ಅಂದಹಾಗೆ ಮಾತಿನಲ್ಲಿ ಅಮ್ಮನನ್ನು ಮೀರಿಸುವ ಎರಡು ವರ್ಷದ ಪುಟಾಣಿ ಮುದ್ದು ಮುದ್ದು ಮಾತುಗಳು ಆಕೆ ಹೇಳುವ ಸ್ಟೋರಿಗಳು ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ.

  ಇತ್ತೀಚೆಗೆ ಟಿವಿ ರಿಮೋಟ್ ತೆಗೆದುಕೊಂಡು ಕರೆ ಮಾಡಿ ಹಲೋ ಪುನೀತ್ ರಾಜ್ ಕುಮಾರ್ ಹೇಗಿದ್ದೀಯಾ? ಎಂದು ಕುಶಲೋಪಹರಿ ವಿಚಾರಿಸಿದ್ದಾಳೆ. ರಿಮೋಟ್‌ನ್ನೇ ಮೊಬೈಲ್ ಎಂದು ತಿಳಿದು ಪುಟಾಣಿ ನಟ ಪುನೀತ್ ರಾಜ್ ಕುಮಾರ್ ಎಂದು ಭಾವಿಸಿ ನಡೆಸಿದ ಸಂಭಾಷಣೆ ನಡೆಸುವ ಕ್ಷಣಗಳನ್ನು ಆರ್.ಜೆ. ಸೌಜನ್ಯ ವಿಡಿಯೋ ಮಾಡಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

  ಈ ಪುಟಾಣಿಯ ವಿಡಿಯೋ ನೋಡಿ ಫಿದಾ ಆಗಿರುವ ನಟ ಪುನೀತ್ ರಾಜ್ ಕುಮಾರ್, ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಮಾತ್ರವಲ್ಲದೇ ಸುಮಾರು ಹೊತ್ತು ಪುಟಾಣಿ ಮಾತು ಕೇಳಿಸಿಕೊಂಡು ಖುಷಿ ಪಟ್ಟಿದ್ದಾರೆ. ಪುಟಾಣಿಯ ಪುಟ್ಟ ವಿಡಿಯೋ ನೋಡಿ ಕರೆ ಮಾಡಿ ಮಾತನಾಡಿದ ಅಪ್ಪು ಸರಳತೆಯನ್ನು ಮೆಚ್ಚಿ ಆರ್.ಜೆ. ಸೌಜನ್ಯ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಚಲಿತ ವಿದ್ಯಮಾನ ತಿಳಿಸುವ ಸುದ್ದಿಯಲ್ಲ. ಆದರೆ ನಟ ಪುನೀತ್ ರಾಜ್ ಕುಮಾರ್ ಅವರ ಸರಳತೆ ಹಾಗೂ ಪುಟಾಣಿ ಪಟಾಕಿ ತರದ ಮಾತು ನೋಡುಗರಿಗೆ ಮುದ ನೀಡುತ್ತದೆ. ಪುಟಾಣಿಗಳ ಮುಗ್ಧ ಲೋಕದ ಭಾವನೆಗಳ ಪ್ರೀತಿಗೆ ಈ ಘಟನೆ ಕನ್ನಡಿ ಹಿಡಿದಂತಾಗಿದೆ.

  English summary
  Actor Puneeth Rajkumar simplicity: Story of RJ soujanya's daughter know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X