For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಪ್ರತ್ಯಂಗಿರಾ ಹೋಮ ಮಾಡಿಸಿದ್ದೇಕೆ?

  By ಉದಯರವಿ
  |

  ನಟ ದುನಿಯಾ ವಿಜಯ್ ಅವರು ಮಂಗಳವಾರ (ಆ.7) ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತ್ಯಂಗಿರಾ ಹೋಮವನ್ನು ಮಾಡಿಸಿದ್ದಾರೆ. ಈ ಹೋಮ ಮಾಡಿಸಲು ಕಾರಣ ಏನು ಎಂಬ ಪ್ರಶ್ನೆಗೆ ಅವರೇ ಒಂದಷ್ಟು ವಿವರಗಳನ್ನೂ ನೀಡಿದ್ದಾರೆ.

  ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆದಂತೆಲ್ಲಾ ಅವನಿಗೆ ಶತ್ರುಗಳೂ ಹೆಚ್ಚಾಗುತ್ತಾರೆ. ತಾವು ಈ ಹೋಮವನ್ನು ನನಗೂ ಒಳ್ಳೆಯದಾಗಲಿ ಹಾಗೆಯೇ ನನ್ನ ಶತ್ರುಗಳಿಗೂ ಒಳ್ಳೆಯದಾಗಲಿ ಎಂದು ಮಾಡಿಸುತ್ತಿದ್ದೇನೆ ಎಂದಿದ್ದಾರೆ. ಭೀಮನ ಅಮಾವಾಸ್ಯೆ ದಿನ ಸಂಜೆ 6ಕ್ಕೆ ಆರಂಭವಾದ ಹೋಮ ರಾತ್ರಿ 9 ಗಂಟೆಗೆ ಮುಗಿದಿದೆ.

  ಜ್ಯೋತಿಷಿಗಳೊಬ್ಬರು ಹೇಳುವ ಪ್ರಕಾರ ಈ ಹೋಮವನ್ನು ಮನುಷ್ಯನಲ್ಲಿನ ನೆಗಟೀವ್ ಎನರ್ಜಿಯನ್ನು ಹೊರಹಾಕಲು ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸಲು ಮಾಡಿಸಲಾಗುತ್ತದೆ. ಹಾಗೆಯೇ ಯಾರಾದರೂ ಮಾಟ ಮಂತ್ರ ತಂತ್ರಗಳನ್ನು ಪ್ರಯೋಗಿಸಿದ್ದರೆ ಅದರ ಪರಿಣಾಮ ತಮ್ಮ ಮೇಲೆ ಆಗದಿರಲು ಮಾಡಿಸುತ್ತಾರೆ ಎನ್ನುತ್ತಾರೆ.

  ಆದರೆ ದುನಿಯಾ ವಿಜಯ್ ಮಾತ್ರ ತಾನು 'ಜಯಮ್ಮನ ಮಗ' ಚಿತ್ರದಲ್ಲಿ ಕಾಳಿ ಪಾತ್ರವನ್ನು ಪೋಷಿಸಿದ್ದೇನೆ. ಅದಕ್ಕಾಗಿ ಶಾಂತಿ ಮಾಡಿಸಲು ಈ ಹೋಮ ಎಂದಿದ್ದಾರೆ. ಹಿರಣ್ಯಕಶಿಪುವನ್ನು ಉಗ್ರನರಸಿಂಹ ಸಂಹರಿಸಿದ ಮೇಲೆ ಆತನನ್ನು ಶಾಂತಗೊಳಿಸಲು ಶಿವನ ಮೂರನೇ ಕಣ್ಣಿನಿಂದ ಪ್ರತ್ಯಂಗಿರಾ ದೇವಿ ಹೊರಹೊಮ್ಮುತ್ತಾಳೆ.

  ದುನಿಯಾ ವಿಜಯ್ ನಿರ್ಮಿಸಿ ನಟಿಸಿರುವ 'ಜಯಮ್ಮನ ಮಗ' ಚಿತ್ರದ ಸಕ್ಸಸ್ ಗಾಗಿ ಹಾಗೂ ಕುಟುಂಬ ಕಲಹಗಳಿಂದ ಧೃತಿಗೆಟ್ಟಿರುವ ವಿಜಯ್ ಈ ಹೋಮ ಮಾಡಿಸಿರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ.

  English summary
  Why Kannada actor Duniya Vijay performs Prathyangira Homa? This amazing Homa will help him to provide relief from evil eyes, physical ailments and mental traumas. It will help to get rid of negative energy in any form enemies, accidents, evil eye casting and other hostile elements.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X