»   » ದುನಿಯಾ ವಿಜಯ್ ಚಿನ್ನದ ಕಿರೀಟದ ಹಿಂದಿನ ಕಥೆ

ದುನಿಯಾ ವಿಜಯ್ ಚಿನ್ನದ ಕಿರೀಟದ ಹಿಂದಿನ ಕಥೆ

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನ ಸೇಲಬಲ್ ನಟರಲ್ಲಿ ದುನಿಯಾ ವಿಜಯ್ ಸಹ ಒಬ್ಬರು ಎಂಬುದು ಗಾಂಧಿನಗರಕ್ಕೆ ಗೊತ್ತಾಗಿ ಬಹಳ ವರ್ಷಗಳೇ ಆಗಿವೆ. ಇದೀಗ ತೆರೆಕಂಡಿರುವ ಅವರ 'ಜಾಕ್ಸನ್' ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ (ಜ.20) ದುನಿಯಾ ವಿಜಯ್ ಅವರು 40ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅವರಿಗೆ 'ಜಾಕ್ಸನ್' ಚಿತ್ರದ ನಿರ್ಮಾಪಕರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನದ ಕಿರೀಟ ತೊಡಿಸಿ ಸನ್ಮಾನಿಸಿದರು. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನಡೆದ ಈ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ನಿಜಕ್ಕೂ ಹಬ್ಬದಂತಿತ್ತು. ಇಷ್ಟಕ್ಕೂ ವಿಜಿ ಅವರಿಗೆ ಚಿನ್ನದ ಕಿರೀಟ ಕೊಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಬಹಳ ಮಂದಿಯ ತಲೆ ಕೊರೆಯುತ್ತಿತ್ತು. [ಜಾಕ್ಸನ್ ಚಿತ್ರ ವಿಮರ್ಶೆ]


ಇದಕ್ಕೆ ಕಾರಣವೂ ಇಲ್ಲದಿಲ್ಲ. 'ಜಾಕ್ಸನ್' ಚಿತ್ರದ ನಿರ್ಮಾಪಕರಾದ ಅನಿಲ್ ಹಾಗೂ ಸುಂದರ್ ಗೌಡ ಅವರು ವಿಜಿಗೆ ಆತ್ಮೀಯ ಗೆಳೆಯರು. ಈ ಚಿತ್ರಕ್ಕಾಗಿ ವಿಜಿ ನಯಾಪೈಸೆ ಸಂಭಾವನೆ ತೆಗೆದುಕೊಂಡಿರಲಿಲ್ಲ. ಹಾಗಾಗಿ ಚಿನ್ನದಂತ ಮನಸ್ಸಿನ ತಮ್ಮ ಗೆಳೆಯರ ಮುಡಿಗೆ ಚಿನ್ನದ ಕಿರೀಟ ಸಮರ್ಪಿಸಿ ಕೃತಾರ್ಥರಾದರು.


Why Duniya Vijay wears golden crown?

'ಜಾಕ್ಸನ್' ಚಿತ್ರದ ನಿರ್ಮಾಪಕರು ಕೊಟ್ಟ ಚಿನ್ನದ ಕಿರೀಟವನ್ನು ವಿಜಿ ತಮ್ಮ ಮುದ್ದು ಮಗಳಿಗೆ ಉಡುಗೊರೆಯಾಗಿ ನೀಡಿದರು. ಗೆಳೆಯ ದುಡ್ಡು ಕೇಳದಿದ್ದರೆ ಏನಂತೆ ಚಿನ್ನವನ್ನೇ ಉಡುಗೊರೆಯಾಗಿ ನೀಡಿದ್ದಾರೆ ವಿಜಿ ಗೆಳೆಯರು.


ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಬೆಳ್ಳಿ ಕಿರೀಟವನ್ನು ನಿರಾಕರಿಸಿದ್ದನ್ನು ಓದಿರುತ್ತೀರಾ. ಇದನ್ನು ಕರಗಿಸಿ ಬಂದ ಹಣದಲ್ಲಿ ಯಾವುದಾದರೂ ಅನಾಥಶ್ರಾಮಕ್ಕೋ, ಮಕ್ಕಳಿಗೋ ನೀಡಿ. ಕಿರೀಟ ತೊಡಲು ನಾನು ಮಹಾರಾಜನಲ್ಲ ಎಂದಿದ್ದರು. [ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?]


ದುನಿಯಾ ವಿಜಯ್ ಈಗ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ಅವರ 'RX ಸೂರಿ' ಚಿತ್ರ ಶುರುವಾಗಿದೆ. ಇದರ ಜೊತೆಗೆ ಅವರ 25ನೇ ಚಿತ್ರವೂ ಪ್ರಕಟವಾಗಿದೆ. ರವಿ ಶ್ರೀವತ್ಸ ಆಕ್ಷನ್ ಕಟ್ ಹೇಳುತ್ತಿರುವ ಆ ಚಿತ್ರಕ್ಕೆ 'ಗವಿ' ಎಂದು ಹೆಸರಿಡಲಾಗಿದೆ. (ಏಜೆನ್ಸೀಸ್)

English summary
The team of 'Jackson' presented a golden crown worth lakhs of rupees to Duniya Vijay on his 40th birthday. Vijay hasn't taken single paisa for the film for the sake of his friendship. So the producers Anil and Sundar Gowda presented the golden crown.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada