»   » ವಿವಾದದಲ್ಲಿ ಸಿಲುಕಿದ ವಿಷ್ಣು 'ನಾಗರಹಾವು': ಸತ್ಯ ಬಾಯ್ಬಿಟ್ಟ ನಟ ದಿಗಂತ್.!

ವಿವಾದದಲ್ಲಿ ಸಿಲುಕಿದ ವಿಷ್ಣು 'ನಾಗರಹಾವು': ಸತ್ಯ ಬಾಯ್ಬಿಟ್ಟ ನಟ ದಿಗಂತ್.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಭರ್ಜರಿ ಪ್ರಚಾರ ಗಿಟ್ಟಿಸುತ್ತಿರುವ ಸಿನಿಮಾ ಯಾವುದು ಅಂತ ಕೇಳಿದ್ರೆ, ಎಲ್ಲರೂ ಕೊಂಚ ಕೂಡ ಯೋಚನೆ ಮಾಡದೆ ನೀಡುವ ಉತ್ತರ 'ನಾಗರಹಾವು'.

ಯಾಕಂದ್ರೆ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಬರೀ 'ನಾಗರಹಾವು' ಚಿತ್ರದ್ದೇ ಸುದ್ದಿ. ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮುಖಾಂತರ ಡಾ.ವಿಷ್ಣುವರ್ಧನ್ ರನ್ನ ತೆರೆಮೇಲೆ ತಂದಿರುವುದರಿಂದ 'ನಾಗರಹಾವು' ವಿಷ್ಣು ರವರ 201ನೇ ಸಿನಿಮಾ ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಚಿತ್ರ ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.


'ನಾಗರಹಾವು' ಎಂದಕೂಡಲೆ ಡಾ.ವಿಷ್ಣುವರ್ಧನ್ ಹಾಗೂ ರಮ್ಯಾ ಹೆಸರು ಮಾತ್ರ ಕೇಳಿಬರುತ್ತಿದೆ. ಆದ್ರೆ, ಇದೇ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ದಿಗಂತ್ ಮಾತ್ರ ಎಲ್ಲೂ ಕಾಣಿಸುತ್ತಲೇ ಇಲ್ಲ. ಎಲ್ಲಾ ಕಡೆ ಡಾ.ವಿಷ್ಣುವರ್ಧನ್ ಹಾಗೂ ರಮ್ಯಾ ಇರುವ 'ನಾಗರಹಾವು' ಪೋಸ್ಟರ್ ಗಳೇ ರಾರಾಜಿಸುತ್ತಿವೆ ಹೊರತು ದಿಗಂತ್ ಮುಖ ಪತ್ತೆನೇ ಇಲ್ಲ.! ಮುಂದೆ ಓದಿ....


ಟ್ರೈಲರ್ ನಲ್ಲೂ ದಿಗಂತ್ ನಾಪತ್ತೆ

ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ 'ನಾಗರಹಾವು' ಚಿತ್ರದ ಟ್ರೈಲರ್ ಬಿಡುಗಡೆ ಆಗಿತ್ತು. ಇದರಲ್ಲಿ ವಿಷ್ಣುವರ್ಧನ್, ರಮ್ಯಾ, ಸಾಯಿ ಕುಮಾರ್ ಮಿಂಚಿದ್ದಾರೆ. ಆದ್ರೆ, ಟ್ರೈಲರ್ ನ ಒಂದೇ ಒಂದು ಫ್ರೇಮ್ ನಲ್ಲೂ ದಿಗಂತ್ ಮುಖ ಕನ್ನಡ ಸಿನಿ ಪ್ರಿಯರಿಗೆ ಕಾಣುವುದಿಲ್ಲ. ['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]


ದಿಗಂತ್ ಸೈಡ್ ಲೈನ್ ಆಗಿದ್ದಾರಾ?

'ನಾಗರಹಾವು' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೂ, ದಿಗಂತ್ ಮಾತ್ರ ಎಲ್ಲೂ ಕಾಣುತ್ತಿಲ್ಲ. ಇದನ್ನೆಲ್ಲಾ ನೋಡ್ತಿದ್ರೆ, 'ದಿಗಂತ್ ಸೈಡ್ ಲೈನ್ ಆಗ್ತಿದ್ದಾರಾ' ಎಂಬ ಅನುಮಾನ ಮೂಡುವುದು ಸಹಜ. ಇದೇ ಪ್ರಶ್ನೆಯನ್ನ ಇಟ್ಟುಕೊಂಡು 'ಚಿತ್ರಲೋಕ.ಕಾಂ' ದಿಗಂತ್ ರನ್ನ ಸಂಪರ್ಕಿಸಿದಾಗ ಸತ್ಯ ಬಯಲಾಗಿದೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ಸಂಭಾವನೆ ಕೊಟ್ಟಿಲ್ಲ ಕಣ್ರೀ.!

'ನಾಗರಹಾವು' ಚಿತ್ರಕ್ಕಾಗಿ ದಿಗಂತ್ ಗೆ ಸಿಗಬೇಕಾದ ಸಂಪೂರ್ಣ ಸಂಭಾವನೆ ಇನ್ನೂ ನಿರ್ಮಾಪಕರಿಂದ ಸಂದಾಯ ಆಗಿಲ್ವಂತೆ. [ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..]


ಬಾಕಿ ಎಷ್ಟು ಇದೇ?

'ಚಿತ್ರಲೋಕ.ಕಾಂ'ಗೆ ದಿಗಂತ್ ಹೇಳಿರುವ ಪ್ರಕಾರ, 'ನಾಗರಹಾವು' ಚಿತ್ರದ ನಿರ್ಮಾಪಕರು ದಿಗಂತ್ ಗೆ ಇನ್ನೂ 5 ಲಕ್ಷ ರೂಪಾಯಿ ನೀಡಬೇಕಂತೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


ಸಂಭಾವನೆ ಕೊಟ್ಟಿಲ್ಲ ಅಂತ ದಿಗಂತ್ ಬರ್ತಿಲ್ವಾ?

ಸಂಪೂರ್ಣ ಸಂಭಾವನೆ ಇನ್ನೂ ಸಂದಾಯ ಆಗಿಲ್ಲ ಎಂಬ ಕಾರಣಕ್ಕೆ 'ನಾಗರಹಾವು' ಪ್ರಮೋಷನ್ ನಲ್ಲಿ ದಿಗಂತ್ ಭಾಗಿಯಾಗುತ್ತಿಲ್ಲ ಅಂತಲ್ಲ. ಇದರ ಹಿಂದೆ ಬೇರೆ ಕಾರಣ ಇದೆ.


ಯಾಕೆ ಹಾಗೆ?

''ಸಿನಿಮಾ ಶುರು ಆದಾಗ 'ಸಾಯಿ ಕುಮಾರ್' ಹಾಗೂ 'ಡಾ.ವಿಷ್ಣುವರ್ಧನ್' ರವರ ಪಾತ್ರಗಳು ಇರ್ಲಿಲ್ಲ. ನಂತರ ಸಿನಿಮಾದಲ್ಲಿ ಅನೇಕ ಬದಲಾವಣೆಗಳನ್ನ ಮಾಡಲಾಗಿದೆ. ಡಾ.ವಿಷ್ಣುವರ್ಧನ್ ರವರ ಪಾತ್ರ ತುಂಬಾ ಚಿಕ್ಕದ್ದು. ಅದು ಕ್ಲೈಮ್ಯಾಕ್ಸ್ ಭಾಗ ಮಾತ್ರ'' ಎಂದಿದ್ದಾರೆ ದಿಗಂತ್.


ಡೌಟ್ ಆಗಿದೆ

''ನಾಗರಹಾವು' ಚಿತ್ರದಲ್ಲಿ ಅನೇಕ ಬದಲಾವಣೆ ಆಗಿರುವುದರಿಂದ ಸಿನಿಮಾಗೂ ನನಗೂ ಸಂಬಂಧ ಇದ್ಯಾ ಎಂಬ ಡೌಟ್ ಕೂಡ ಕಾಡುತ್ತಿದೆ. ನನ್ನ ಭಾಗದ ಡಬ್ಬಿಂಗ್ ಕೂಡ ಮುಗಿಸಿದ್ದೇನೆ. ಸಂಭಾವನೆ ಸದ್ಯದಲ್ಲೇ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ'' ಎಂದು ಚಿತ್ರಲೋಕ.ಕಾಂಗೆ ದಿಗಂತ್ ತಿಳಿಸಿದ್ದಾರೆ.


ಈಗ ವಿವಾದ ಬೇಕಾ?

ಇಷ್ಟು ದಿನ ಉತ್ತಮ ಪ್ರಚಾರ ಗಿಟ್ಟಿಸಿದ 'ನಾಗರಹಾವು' ಚಿತ್ರ ಈಗ ವಿವಾದಕ್ಕೆ ಸಿಲುಕಬೇಕಾ? ಪ್ರಮೋಷನ್ ಗಾಗಿ ಕೋಟಿ ಕೋಟಿ ಸುರಿದಿರುವ ನಿರ್ಮಾಪಕರಿಗೆ ದಿಗಂತ್ ಸಂಭಾವನೆ ವಿಷಯ ದೊಡ್ಡ ಮಾತಲ್ಲ. 'ನಾಗರಹಾವು' ಚಿತ್ರದಲ್ಲಿ ದಿಗಂತ್ ನಟಿಸಿದ್ದಾರೆ ಅಂದ್ರೆ ಪ್ರಮೋಷನ್ ವಿಷಯದಲ್ಲಿ ಅವರಿಗೂ ಆಹ್ವಾನ ಕೊಟ್ಟರೆ ಚಿತ್ರಕ್ಕೆ ತಾನೇ ಮೈಲೇಜ್.!


English summary
Why is Kannada Actor Diganth is not part of Kannada Movie 'Nagarahavu' promotional activities? Diganth has finally answered for this question.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada