For Quick Alerts
  ALLOW NOTIFICATIONS  
  For Daily Alerts

  ಆ ಸಂದರ್ಭದಲ್ಲಿ 'ಮತ್ತೆ ನಟಿಸುವುದೇ ಬೇಡ' ಎಂದುಕೊಂಡಿದ್ದರಂತೆ ರಾಧಿಕಾ! ಕಾರಣ ಏನಾಗಿತ್ತು?

  |
  Radhika Kumaraswamy shares her experience about her movie Damayanthi | Filmibeat Kannada

  2000ನೇ ಇಸವಿ ಬಳಿಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಾಯಕಿಯರಲ್ಲಿ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ಪ್ರಮುಖರು. ಕುಮಾರಸ್ವಾಮಿ ಅವರ ಜೊತೆ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಸರಿದ್ದರು. ಬಳಿಕ ಸಿನಿಮಾ ಮಾಡುವುದು ಬಹುತೇಕ ಅನುಮಾನವಾಗಿತ್ತು.

  ರಾಧಿಕಾ ಕುಮಾರಸ್ವಾಮಿ ಕೂಡ ಅದಾಗಲೇ ಒಂದು ಬಲವಾದ ನಿರ್ಧಾರಕ್ಕೆ ಬಂದಿದ್ದರು. 'ಇನ್ಮುಂದೆ ಸಿನಿಮಾ ಮಾಡುವುದು ಬೇಡ' ಎಂಬ ಅಭಿಪ್ರಾಯ ಹೊಂದಿದ್ದ ಸ್ವೀಟಿ, ಸ್ಯಾಂಡಲ್ ವುಡ್ ಜೀವನಕ್ಕೆ ಬ್ರೇಕ್ ಹಾಕಿದರು.

  ಇದ್ದಕ್ಕಿದ್ದಂತೆ ಸಿನಿಮಾ ಇಂಡಸ್ಟ್ರಿಯಿಂದ ರಾಧಿಕಾ ಯಾಕೆ ದೂರವಾಗಲು ನಿರ್ಧರಿಸಿದರು? ಎಂಬ ಪ್ರಶ್ನೆ ಕಾಡುವುದು ಸಹಜ. ಈ ಕುರಿತು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  ಮದುವೆ ಬಳಿಕ ಅವಕಾಶ ಕಷ್ಟವಿತ್ತು

  ಮದುವೆ ಬಳಿಕ ಅವಕಾಶ ಕಷ್ಟವಿತ್ತು

  ಹೀರೋಯಿನ್ ಗಳು ಮದುವೆ ಆದ್ಮೇಲೆ ಸಹಜವಾಗಿ, ಸಿನಿಮಾ ಅವಕಾಶಗಳು ಕಡಿಮೆ ಆಗುತ್ತೆ ಎಂಬ ಸಂಪ್ರದಾಯ ಇಂಡಸ್ಟ್ರಿಯಲ್ಲಿದೆ. ಆದರೆ ಕೆಲವು ನಟಿಯರು ಮಾತ್ರ ಈ ಸಂಪ್ರದಾಯವನ್ನ ಮೀರಿ ಸಕ್ಸಸ್ ಕಾಣ್ತಾರೆ. ಕೆಲವರು ಮದುವೆ ಬಳಿಕ ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ. ಇದೇ ನಿರ್ಧಾರಕ್ಕೆ ರಾಧಿಕಾ ಕೂಡ ಬಂದಿದಗ್ದರು. ''ಆ ದಿನಗಳಲ್ಲಿ ಸಾಮಾನ್ಯವಾಗಿ ಯಾವುದೇ ನಾಯಕಿಗೆ ಮದುವೆಯ ಬಳಿಕ ಮತ್ತೆ ನಾಯಕಿಯಾಗುವ ಅವಕಾಶ ಸಿಗುವುದು ಕಷ್ಟವಿತ್ತು. ಮದುವೆ ಟೈಮಲ್ಲಿ ಇನ್ನು ಮುಂದೆ ನಟನೆಗೆ ಮರಳುವುದೇ ಬೇಡ ಎಂದುಕೊಂಡಿದ್ದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

  'ಕುಂಗ್ ಫು' ಕಲಿತು ಆಕ್ಷನ್ ಸಿನಿಮಾ ಮಾಡುವಾಸೆ ಎಂದ 'ದಮಯಂತಿ' ರಾಧಿಕಾ!'ಕುಂಗ್ ಫು' ಕಲಿತು ಆಕ್ಷನ್ ಸಿನಿಮಾ ಮಾಡುವಾಸೆ ಎಂದ 'ದಮಯಂತಿ' ರಾಧಿಕಾ!

  ಗ್ಲಾಮರ್ ಪಾತ್ರ ಮಾಡಲು ಕಷ್ಟ

  ಗ್ಲಾಮರ್ ಪಾತ್ರ ಮಾಡಲು ಕಷ್ಟ

  ''ಎರಡನೇ ಇನ್ನಿಂಗ್ಸ್ ಆರಂಭ ಮಾಡುವಾಗ ವಿವಾಹಿತೆಯೆನ್ನುವ ಜವಾಬ್ದಾರಿ ಇದ್ದ ಕಾರಣ, ಗ್ಲಾಮರ್ ಪ್ರದರ್ಶನಕ್ಕೆ ಒತ್ತು ಕೊಡುವ ಪಾತ್ರಗಳನ್ನು ಮಾಡುವಂತೆಯೂ ಇರಲಿಲ್ಲ. ಆದರೆ ಈಗ 'ದಮಯಂತಿ'ಯ ಮೂಲಕ ಪ್ರವೇಶ ಮಾಡಿರುವ ಜಾನರ್ ಖಂಡಿತವಾಗಿಯೂ ಗ್ಲಾಮರ್ ಗಿಂತಲೂ ಅಭಿನಯದ ಗ್ರಾಮರ್ ಗೆ ಹೆಚ್ಚು ಮಹತ್ವ ನೀಡಿರುವುದನ್ನು ಕಾಣಬಹುದು'' ಎಂದು ಕಂಬ್ಯಾಕ್ ಕುರಿತು ಖುಷಿ ಹಂಚಿಕೊಂಡಿದ್ದಾರೆ.

  ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡ್ತಾರೆ ದರ್ಶನ್ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡ್ತಾರೆ ದರ್ಶನ್

  ಚಿತ್ರರಂಗದಲ್ಲೇ ಉಳಿಯುತ್ತಾರೆ

  ಚಿತ್ರರಂಗದಲ್ಲೇ ಉಳಿಯುತ್ತಾರೆ

  ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾರಂಗದಿಂದ ದೂರವಾಗ್ತಾರೆ. ರಾಜಕೀಯಕ್ಕೆ ಹೋಗ್ತಾರೆ ಎಂಬ ಮಾತುಗಳು ಆಗಾಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುತ್ತೆ. ಆದರೆ, ಇದೆಲ್ಲವೂ ಬರಿ ವದಂತಿಗಳಷ್ಟೆ ಎಂದು ರಾಧಿಕಾ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ಬರುವ ಬಗ್ಗೆ ಈಗಲೇ ಅಲ್ಲೆಗಳೆಯವುದಿಲ್ಲ ಎಂದು ಹೇಳುವು ಮೂಲಕ ಭವಿಷ್ಯದಲ್ಲಿ ರಾಜಕೀಯಕ್ಕೆ ಬರಬಹುದು ಎಂಬ ಸೂಚನೆ ಕೊಟ್ಟಿದ್ದಾರೆ.

  ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್

  ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್

  ದಮಯಂತಿ ರಿಲೀಸ್ಗೆ ಸಿದ್ಧವಾಗಿದೆ. ಅದಾದ ಬಳಿಕ ಮತ್ತೊಂದು ಚಾಲೆಂಜಿಂಗ್ ಸಿನಿಮಾ 'ಬೈರಾದೇವಿ' ರೆಡಿಯಾಗಿದೆ. ರವಿಚಂದ್ರನ್ ಜೊತೆ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ನಟನೆಯ 'ಕಾಂಟ್ರ್ಯಾಕ್ಟ್' ಚಿತ್ರದಲ್ಲೂ ರಾಧಿಕಾ ಕಾಣಿಸಿಕೊಂಡಿದ್ದಾರೆ.

  English summary
  Kannada Radhika Kumaraswamy taken strong decision after her marriage. later, she breaks her own decision for good film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X