»   » ಮುಂಗಾರುಮಳೆ 2 ಡಿ.29ಕ್ಕೆ ಬರಬೇಕು, ಯಾಕೆ ಗೊತ್ತಾ?

ಮುಂಗಾರುಮಳೆ 2 ಡಿ.29ಕ್ಕೆ ಬರಬೇಕು, ಯಾಕೆ ಗೊತ್ತಾ?

By: ಕುಸುಮ
Subscribe to Filmibeat Kannada

'ಮುಂಗಾರುಮಳೆ2' ಡಿಸೆಂಬರ್ 29ಕ್ಕೆ ಬಂದರೆ ಚೆನ್ನಾಗಿರುತ್ತೆ ಅಂತ ಯಾಕೆ ಹೇಳ್ತಿದ್ದೀವಿ ಗೊತ್ತಾ? ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ, ರಕ್ತಸಿಕ್ತ ಚಿತ್ರಗಳ ಚಿಂದಿ ಚಿಂದಿ ಸೋಲುಗಳನ್ನು ಆಯುತ್ತಿದ್ದ ಚಂದನವನದಲ್ಲಿ ಹೊಸ ಪಥವನ್ನೇ ಹುಟ್ಟುಹಾಕಿದ 'ಮುಂಗಾರುಮಳೆ' ಅನ್ನೋ ಅಮರ ಪ್ರೇಮಕಾವ್ಯ ತೆರೆಗೆ ಬಂದು ಅಂದಿಗೆ ಭರ್ತಿ 10 ವರ್ಷಗಳಾಗಲಿವೆ. ಆ ಸಂದರ್ಭವೇ ಮುಂಗಾರುಮಳೆ 2ಕ್ಕೆ ಸೂಕ್ತ ಅಲ್ಲವಾ?

ಕಾಮಿಡಿ ಟೈಂ ಗಣೇಶ್ ಅನ್ನೋ ಸಾಮಾನ್ಯ ಕಾಮಿಡಿ ಕಲಾವಿದ, ಹೆಸರೇ ಗೊತ್ತಿಲ್ಲದ ಪಂಜಾಬಿನ ಹುಡುಗಿ ಪೂಜಾ ಗಾಂಧಿ ರಾತ್ರೋ ರಾತ್ರಿ ಸ್ಟಾರ್ಗಳನ್ನಾಗಿ ಮಾಡಿದ ಸಿನಿಮಾ ಅದು. ಯೋಗರಾಜ್ ಭಟ್ ಅನ್ನೋ ಮಾಂತ್ರಿಕ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಹುಟ್ಟುಪಡೆದ ದಿನ. 70 ಲಕ್ಷ ಬಜೆಟ್ನಲ್ಲಿ 70 ಕೋಟಿ ಗಳಿಸಿತು ಎನ್ನುವ ಸುದ್ದಿಯೇ ನಮ್ಮ ಕಿವಿಗೆ ಎಂತಹಾ ರೋಮಾಂಚನ ಉಂಟು ಮಾಡುತ್ತೆ ಅಲ್ಲವಾ? ಹತ್ತು ವರ್ಷಗಳಾದರೂ ಮತ್ತೆ ಅಂತಹಾ ಪ್ರೇಮಕಾವ್ಯ ಕನ್ನಡ ಚಿತ್ರರಂಗದಲ್ಲಿ ಮರುಕಳಿಸಿಲ್ಲ. [ಮುಂಗಾರುಮಳೆ ಹುಡುಗನ ವಯಸ್ಸೆಷ್ಟು? ಏನು ವಿಶೇಷ?]

Why should Mungaru Male 2 release on 29th December

ಆದರೆ ಈಗ ಅದೇ ಟೈಟಲ್ನ ಮುಂದುವರಿದ ಭಾಗ (ಕಥೆ ಮುಂದುವರಿದ ಭಾಗವಲ್ಲ) ಮತ್ತೊಂದು ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ. ಸೋ, ಆ ಚಿತ್ರ ಕೂಡ ಸರಿಯಾಗಿ 10 ವರ್ಷದ ನಂತರ ತೆರೆಗೆ ಬಂದರೆ ನೋಡೋಕೆ ಮತ್ತೊಂದು ಕಾರಣವೂ ಸಿಗುತ್ತಲ್ಲ? ಅಂತಹದ್ದೇ ಮತ್ತೊಂದು ಮ್ಯಾಜಿಕ್ ನಡೆಯಲಿ. ಕನ್ನಡ ಚಿತ್ರರಂಗ ಗೆಲುವಿನಿಂದ ತೇಲಾಡುವಂತಹಾ ಮತ್ತೊಂದು ಮುಂಗಾರುಮಳೆ ನಮ್ಮ ಮುಂದೆ ಬರಲಿ ಅನ್ನುವುದು ಪ್ರತಿಯೊಬ್ಬ ಕನ್ನಡ ಸಿನಿಪ್ರೇಮಿಯ ಕನಸು ಅಲ್ಲವಾ?

ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಅಂತಹಾ ಸೆಂಟಿಮೆಂಟ್ ಇಟ್ಟುಕೊಂಡಿಲ್ಲವಂತೆ. ಸಿನಿಮಾ ಯಾವಾಗ ತೆರೆಗೆ ಬಂದರೂ ಓಕೆ ಅಂತಾರೆ. ಚಿತ್ರತಂಡ ಈಗಾಗಲೇ ಟೀಸರ್ ರಿಲೀಸ್ ಮಾಡಿದೆ. ಜುಲೈನ ಜೋರಾದ ಮಳೆಗಾಲದಲ್ಲಿ, ಇಲ್ಲದಿದ್ದರೆ ಆಗಸ್ಟ್ ವೇಳೆಗೆ ಜೂಮ್ ನಂತರ ಮುಂಗಾರುಮಳೆ 2 ತೆರೆಗೆ ಬರೋದು ಖಚಿತ ಎನ್ನುತ್ತಿದೆ ನಿರ್ಮಾಪಕ ಗಂಗಾಧರ್ ಮೂಲ. ಮುಂಗಾರು ಮಳೆಯ ಜೊತೆಗೆ ಬಂದಿದ್ದ 'ಮೊಗ್ಗಿನ ಮನಸು' ನಿರ್ದೇಶಕ ಶಶಾಂಕ್ ಮನದಲ್ಲಿ ಏನೇನಿದೆಯೋ ಬಲ್ಲವರಾರು? [ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ]

English summary
Why should Mungaru Male 2 be released on 29th December? Because, exactly 10 years back on the same day Mungaru Male (first part) got released and created history by destroying many records and making Ganesh golden star. Mungaru Male 2 is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada