For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಕೋಟಿಗೊಬ್ಬ-3' ಪ್ರಮೋಷನ್ ಏಕೆ ಮಾಡ್ತಿಲ್ಲ?

  |

  ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಪ್ರಮೋಷನ್ ಜೋರಾಗಿದೆ. ಈ ಚಿತ್ರಕ್ಕೂ ಮುಂಚೆಯೇ ತಯಾರಾಗಿ ಬಿಡುಗಡೆಗೆ ಸಜ್ಜಾಗಿರುವ ಕೋಟಿಗೊಬ್ಬ 3 ಸಿನಿಮಾದ ಪ್ರಮೋಷನ್ ಏಕೆ ಶುರುವಾಗಿಲ್ಲ ಎಂಬ ಕುತೂಹಲ ಕಾಡುತ್ತಿದೆ.

  ಕೋಟಿಗೊಬ್ಬ 3 ಚಿತ್ರೀಕರಣ ಮುಗಿದು ಬಹಳ ತಿಂಗಳು ಆಗಿದೆ. ಮೊದಲು ರಿಲೀಸ್ ಆಗಬೇಕಿರುವುದು ಕೋಟಿಗೊಬ್ಬ ಪ್ರಮೋಷನ್ ವಿಚಾರದಲ್ಲಿ ಏಕೆ ಸೈಲೆಂಟ್ ಆಗಿದೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ವಿಕ್ರಾಂತ್ ರೋಣ ಮೊದಲು ರಿಲೀಸ್ ಆಗುತ್ತಾ ಅಥವಾ ಕೋಟಿಗೊಬ್ಬ ಚಿತ್ರವೇ ಮೊದಲು ತೆರೆಗೆ ಬರುತ್ತಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

  50 ದೇಶ, 6 ಭಾಷೆಯಲ್ಲಿ ಸುದೀಪ್ 'ವಿಕ್ರಾಂತ್ ರೋಣ' ಬಿಡುಗಡೆ

  ಈ ಕುರಿತು ಸುದೀಪ್ ಸ್ಪಷ್ಟನೆ ನೀಡಿದ್ದು, ಮೊದಲು ಕೋಟಿಗೊಬ್ಬ 3 ಸಿನಿಮಾನೇ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಚಿತ್ರದ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದ ಕಾರಣ ಕೋಟಿಗೊಬ್ಬ ಸಿನಿಮಾದ ಪ್ರಮೋಷನ್ ಮಾಡಿಲ್ಲ.

  ಅದಕ್ಕೆ ಕೋಟಿಗೊಬ್ಬ ನಿರ್ಮಾಪಕ ಸೂರಪ್ಪ ಬಾಬು ಸಹ ಸಹಕರಿಸಿದ್ದಾರೆ. ವಿಕ್ರಾಂತ್ ರೋಣದ ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಫೆಬ್ರವರಿ ಮೊದಲ ವಾರದಲ್ಲಿ ಕೋಟಿಗೊಬ್ಬ 3 ಚಿತ್ರದ ಪ್ರಚಾರ ಆರಂಭಿಸುತ್ತೇವೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.

  ಕೋಟಿಗೊಬ್ಬ 3 ಚಿತ್ರ ಬಹಳ ಚೆನ್ನಾಗಿ ಬಂದಿದೆ. ಬಹಳ ಇಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ, ಚಿತ್ರದ ಒಂದೊಂದೆ ಅಪ್‌ಡೇಟ್ ಕೊಡ್ತೀವಿ ಎಂದು ಕಿಚ್ಚ ಹೇಳಿದ್ದಾರೆ.

  ಸುದೀಪ್ ದುಬೈ ಸಂಭ್ರಮಕ್ಕೆ ಖರ್ಚಾಗಿದೆಷ್ಟು? ಬುರ್ಜ್ ಖಲೀಫಾ ಜಾಹೀರಾತಿಗೆ ಎಷ್ಟು? ಇಲ್ಲಿದೆ ಮಾಹಿತಿ

  ಇನ್ನುಳಿದಂತೆ ಶಿವಕಾರ್ತಿಕ್ ಈ ಚಿತ್ರ ನಿರ್ದೇಶನ ಮಾಡಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.

  ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ನಟಿಸೋಕೆ 2 ಕಾರಣ ಹೇಳಿಕೊಂಡ ಸುದೀಪ್ | Kabzaa | Sudeep | Upendra
  English summary
  Why kiccha Sudeep did not start Kotigobba 3 movie Promotion? when will movie hit to screen?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X