»   » ಪ್ರೋ ಕಬಡ್ಡಿಗೆ ಬಲ ತುಂಬಲು ಬರ್ತಾರಾ ಕನ್ನಡದ ಸ್ಟಾರ್ಸ್

ಪ್ರೋ ಕಬಡ್ಡಿಗೆ ಬಲ ತುಂಬಲು ಬರ್ತಾರಾ ಕನ್ನಡದ ಸ್ಟಾರ್ಸ್

By: ಜೀವನರಸಿಕ
Subscribe to Filmibeat Kannada

ಎಲ್ಲೆಲ್ಲೂ ಪ್ರೋ ಕಬಡ್ಡಿ ಹವಾ ಶುರುವಾಗಿದೆ. ಕಳೆದ ಬಾರಿ ಶುರುವಾದ ಮೊದಲ ಸೀಸನ್ ಭರ್ಜರಿ ಸಕ್ಸಸ್ ಪಡ್ಕೊಂಡಿದ್ರಿಂದ ಈ ಬಾರಿಯೂ ಅದೇ ಜೋಷ್ನಲ್ಲಿ ಶುರುವಾಗಿದ್ದು ಮಾಧ್ಯಮಗಳಿಂದ ಕಬಡ್ಡಿಗೆ ಭರ್ಜರಿ ಪ್ರಚಾರ ಸಿಕ್ಕಿದೆ.

ಸೀಸನ್-2ನ ಓಪನಿಂಗ್ನಲ್ಲಿ ಅಮಿತಾಭ್ ಬಚ್ಚನ್ ರಾಷ್ಟ್ರಗೀತೆ ಹಾಡಿದ್ದಾರೆ. ಬಚ್ಚನ್ ಕುಟುಂಬವೇ ಕ್ರೀಡಾಂಗಣದಲ್ಲಿ ಬಂದಿಳಿದು ಸಪೋರ್ಟ್ ಮಾಡಿದೆ. ಇನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಜೆನಿಲಿಯಾ ಡಿಸೋಜಾ, ರಿತೇಶ್ ದೇಶಮುಖ್, ರಾಹುಲ್ ಬೋಸ್ರಂತಹಾ ಸ್ಟಾರ್ಗಳು ಕ್ರೀಡಾಂಗಣಕ್ಕಿಳಿದಿದ್ರು. ಅಷ್ಟೇ ಯಾಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೂಡ ಕಬಡ್ಡಿಗಾಗಿ ತೊಡೆ ತಟ್ಟಿದ್ರು. [ಕ್ರಿಕೆಟ್ ಮುಗೀತು, ತಿಂಗಳ ಕಾಲ ಪ್ರೋ ಕಬಡ್ಡಿ ಕಿಕ್]

Will Kannada stars support Pro Kabaddi?

ಆದ್ರೆ ಪ್ರಶ್ನೆ ಇರೋದು ಮುಂದಿನ ತಿಂಗಳು ಪಂದ್ಯಾಟ ಬೆಂಗಳೂರಲ್ಲಿ ನಡೆಯಲಿದೆ. ಮೂರು ದಿನಗಳು ಬೆಂಗಳೂರಲ್ಲೂ ನಡೆಯೋ ಪಂದ್ಯಾಟದಲ್ಲಿ ಕನ್ನಡದ ಸೂಪರ್ಸ್ಟಾರ್ಗಳು ಬಂದು ರಾಷ್ಟ್ರಗೀತೆ ಹಾಡ್ತಾರಾ? ಇಲ್ಲ.. ಬಿಗ್ ಬಾಸ್, ಡಾನ್ಸಿಂಗ್ಸ್ಟಾರ್ ಅಂತ ಅವ್ರವ್ರ ಸ್ವಂತ ಕೆಲಸದಲ್ಲೇ ಉಳಿದು ಹೋಗ್ತಾರಾ?

ಹಾಗೆ ನೋಡಿದ್ರೆ ಮಾಧ್ಯಮಗಳೂ ಅವ್ರಿಗೆ ಬೇಕಾದ ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನ ಪ್ರಚಾರ ಮಾಡ್ತಾ ಕಬಡ್ಡಿಯನ್ನ ಕಡೆಗಣಿಸಿರಬಹುದು. ಆದ್ರೆ ನಮ್ಮ ದೇಶದ ಕ್ರೀಡೆಯನ್ನ ಮೇಲೆತ್ತಬೇಕು ಅನ್ನೋ ಜವಾಬ್ಧಾರಿ ಮತ್ತು ದೇಶಪ್ರೇಮ ಪ್ರತಿಯೊಬ್ಬ ಮಾಧ್ಯಮದವ್ರಿಗೂ ಇದೆ. [ಕಬಡ್ಡಿ ಕಿಶೋರ್ ಮೀಸೆಯಂಚಿನಲ್ಲಿ ಗೆಲುವಿನ ನಗು]

Will Kannada stars support Pro Kabaddi?

ಮಾಧ್ಯಮದವ್ರಿಗಿರೋದಕ್ಕಿಂತ ಹೆಚ್ಚಿನ ಸಾಮಾಜಿಕ ಜವಾಬ್ಧಾರಿ ಇರಬೇಕಾಗಿರೋದು ಲಕ್ಷಾಂತರ, ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರೋ ಸ್ಟಾರ್ಗಳಿಗೆ. ಕಳೆದ ಬಾರಿ ಕಬಡ್ಡಿಗೆ ಬೆಂಗಳೂರಿನಲ್ಲಿ ಸಿನಿಮಾ ನಟರಿಂದ ಅಷ್ಟಾಗಿ ಬೆಂಬಲ ಸಿಕ್ಕಿರಲಿಲ್ಲ. ಈ ಬಾರಿಯಾದ್ರೂ ಸಿಕ್ಕಲಿ ಅಂತಿದ್ದಾರೆ ದೇಶಪ್ರೇಮಿ ಕಬಡ್ಡಿ ಪ್ರೇಮಿಗಳ ಆಶಯ.
English summary
Pro Kabaddi is gaining much popularity in India after Cricket because of the publicity given to the indigenous sports and support by Bollywood stars like Amitabh Bachchan, Abhishek Bachchan and others. But, will Kannada film stars support Pro Kabaddi? League matches are played in Bengaluru also.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada