For Quick Alerts
  ALLOW NOTIFICATIONS  
  For Daily Alerts

  'ಲೂಸಿಯಾ 2' ಸಿನಿಮಾ ಬರುತ್ತಾ, ಏನಾಂತಾರೆ ಪವನ್ ಕುಮಾರ್?

  |

  ಸೂಪರ್ ಹಿಟ್ ಸಿನಿಮಾಗಳ ಎರಡನೇ ಭಾಗ ಬರುವುದು ಕನ್ನಡದಲ್ಲಿ ಜಾಸ್ತಿಯಾಗಿದೆ. ಇದೀಗ 'ಲೂಸಿಯಾ 2' ಸಿನಿಮಾ ಪಾರ್ಟ್ 2 ಬರುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣವಾಗಿರುವುದು ನಿರ್ದೇಶಕ ಪವನ್ ಕುಮಾರ್ ಪೋಸ್ಟ್.

  ನಿನ್ನೆ (ಫೆಬ್ರವರಿ 16) ನಿರ್ದೇಶಕ ಪವನ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾತ್ರೆಗಳ ಫೋಟೋ ಹಾಕಿಕೊಂಡಿದ್ದರು. ಅದಕ್ಕೆ ''ಮತ್ತೆ ಕನಸು ಕಾಣಬಹುದು'' ಎಂದು ಬರೆದುಕೊಂಡಿದ್ದರು. 'ಲೂಸಿಯಾ' ಸಿನಿಮಾ ಕನಸಿನ ಮೇಲೆ ಇದ್ದು, ಪವನ್ ಪೋಸ್ಟ್ 'ಲೂಸಿಯಾ 2' ಬಗ್ಗೆ ಹೇಳಿದ ಹಾಗಿತ್ತು.

  ಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳುಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳು

  ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಪವನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ''ಸಿನಿಮಾ ಬರುತ್ತದೆಯೋ ಇಲ್ಲವೋ ಸದ್ಯಕ್ಕೆ ತಿಳಿದಿಲ್ಲ. ನಾನು ಈ ಫೋಟೋವನ್ನು ಸುಮ್ಮನೆ ಹಾಕಿದೆ.'' ಎಂದಿದ್ದಾರೆ.

  ಪವನ್ ಮಾತುಗಳನ್ನು ಗಮನಿಸಿದರೆ, ಸದ್ಯಕ್ಕೆ 'ಲೂಸಿಯಾ ಪಾರ್ಟ್ 2' ಶುರು ಆಗುವುದಿಲ್ಲ. ಆದರೆ, ಮುಂದೆ ಆ ಹೆಸರಿನಲ್ಲಿ ಪವನ್ ಸಿನಿಮಾ ಮಾಡಿದರೂ ಮಾಡಬಹುದು. ಪವನ್ ಪೋಸ್ಟ್ ನಲ್ಲಿ ಸಾಕಷ್ಟು ಜನರು 'ಲೂಸಿಯಾ 2' ನೋಡಬೇಕು ಎಂದು ಕಾಮೆಂಟ್ ಮಾಡಿದ್ದು, ಅವರಿಗೆಲ್ಲ ಕೊಂಚ ನಿರಾಸೆ ಆಗಿದೆ.

  ಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣ

  ಅಂದಹಾಗೆ, 'ಲೂಸಿಯಾ' ಸಿನಿಮಾ 2013 ರಲ್ಲಿ ಬಿಡುಗಡೆ ಆಗಿತ್ತು. ಕನ್ನಡ ಚಿತ್ರರಂಗಕ್ಕೆ ಸಿನಿಮಾ ಹೊಸದೊಂದು ದಿಕ್ಕು ತೋರಿಸಿತ್ತು. ಸತೀಶ್ ನೀನಾಸಂ, ಶ್ರುತಿ ಹರಿಹರನ್ ಸಿನಿಮಾದಲ್ಲಿ ನಟಿಸಿದ್ದರು. ವಿಭಿನ್ನವಾಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು.

  English summary
  Will director Pavan Kumar do 'Lusia 2 movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X