»   » ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ ಹ್ಯಾಂಡ್ಸಮ್ ನಟರು

ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ ಹ್ಯಾಂಡ್ಸಮ್ ನಟರು

Posted By:
Subscribe to Filmibeat Kannada
ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ ಕಿಚ್ಚ ಹಾಗು ಜಗ್ಗೇಶ್ | Filmibeat Kannada

ಹೆಣ್ಣು ಸಂಸಾರದ ಕಣ್ಣು.....ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ....ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ರ್ತೀ ಇರ್ತಾಳೆ....ಹೀಗೆ ಮಹಿಳೆಯರಿಗೆ ಕೊಡುವ ಗೌರವವೇ ಬೇರೆ. ಇಂದು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಯರಿಗೆ ವಿಶೇಷವಾದ ದಿನ.

ಎಲ್ಲ ರಂಗದಲ್ಲೂ ಇದ್ದಂತೆ ಸಿನಿಮಾರಂಗದಲ್ಲೂ ಮಹಾನ್ ಸಾಧಕಿಯರಿದ್ದಾರೆ. ನಟನೆಯಿಂದ ಹಿಡಿದು, ನಿರ್ದೇಶಕಿ, ನಿರ್ಮಾಪಕಿ, ತಂತ್ರಜ್ಞರಾಗಿ ಕೂಡ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ದಿಟ್ಟ ಮಹಿಳೆಯರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಈ ವಿಶೇಷವಾದ ದಿನದಲ್ಲಿ ಸಿನಿಮಾ ನಟರು ಮಹಿಳಾ ದಿನದ ಶುಭಕೋರಿದ್ದಾರೆ.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಕನ್ನಡದ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್ ಮತ್ತು ತಮಿಳು ನಟ ಧನುಶ್ ಟ್ವೀಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

''ಎಲ್ಲ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು. ಇದು ನಿಜಕ್ಕೂ ನಿಮಗೆ ವಿಶೇಷವಾದ ದಿನ. ತುಂಬ ವಿಶೇಷವಾಗಿ ವಿಶೇಷವೆಂದು ಹೇಳಬಹುದು. ನಿಮ್ಮೆಲರಿಗೂ ಈ ದಿನ ಸಂತೋಷದಿಂದ ಇರಲಿ'' - ಸುದೀಪ್, ನಟ

ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‌ನಲ್ಲಿ ಮಹಿಳೆಯರಿಗೆ ಉಚಿತ ಊಟ

ಮಹಿಳೆಯರ ದಿನದ ವಿಶೇಷವಾಗಿ ನವರಸ ನಾಯಕ ಜಗ್ಗೇಶ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ''ಅಮ್ಮ ಅಕ್ಕ ತಂಗಿ ಮಡದಿಯ ಜೊತೆ ಶ್ರೇಷ್ಟ ಬಾಳ್ವೆ ಬಾಳಿದವ ಲೋಕದ ಹೆಣ್ಣನ್ನು ಪೂಜಿಸಿ ಗೌರವಿಸುತ್ತಾನೆ. ಹಾಗೆ ಹೆಣ್ಣು ತನ್ನ ನಡಾವಳಿ, ಪೂಜನೀಯವಾಗಿ ಉಳಿಸಿ, ಗಳಿಸಿ ಬಾಳಿದರೆ ಲೋಕ, ಅವಳಿಗೆ ಶರಣು ಶರಣಾರ್ತಿ. ಸ್ತ್ರಜನ್ಮ ಶ್ರೇಷ್ಟ ತಾಯಿಮಡಿಲು.'' - ಜಗ್ಗೇಶ್, ನಟ

ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

ಇನ್ನು ತಮಿಳು ನಟ ಧನುಶ್ ಕೂಡ ಮಹಿಳೆ ದಿನದ ವಿಶೇಷವಾಗಿ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ''ನಮ್ಮ ಜೀವನದ ಪ್ರತಿದಿನವನ್ನ ಉತ್ತಮಗೊಳಿಸಿದ್ದಕ್ಕೆ ಧನ್ಯವಾದಗಳು ಮತ್ತು ಮಹಿಳಾ ದಿನ ಶುಭಾಶಯಗಳು'' ಎಂದು ಧನುಶ್ ಟ್ವೀಟ್ ಮಾಡಿದ್ದಾರೆ.

English summary
Kannada actor sudeep, kannada actor jaggesh and tamil actor dhanush and others are wish to world women's day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada