For Quick Alerts
  ALLOW NOTIFICATIONS  
  For Daily Alerts

  ಹಾಫ್ ಸೆಂಚುರಿ ಬಾರಿಸಿದ ಯಜಮಾನ: ನಿರ್ಮಾಪಕಿ ಫುಲ್ ಖುಷ್

  |
  ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ಫುಲ್ ಖುಷ್: Yajamana Movie | FILMIBEAT KANNADA

  ಮಂಡ್ಯ ಚುನಾವಣೆ ಅಬ್ಬರದ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ 50 ದಿನ ಪೂರೈಸಿದ್ದನ್ನ ಮರೆತು ಹೋಗಿದ್ದಾರೆ ಅನ್ಸುತ್ತೆ. ಎಲೆಕ್ಷನ್ ಗೂ ಮುಂಚೆ ತೆರೆಕಂಡಿದ್ದ ಯಜಮಾನ ಯಶಸ್ವಿಯಾಗಿ ಅರ್ಧಶತಕ ಬಾರಿಸಿದೆ.

  ಮಾರ್ಚ್ 1 ರಂದು ತೆರೆಕಂಡಿದ್ದ ಯಜಮಾನ ಸಿನಿಮಾ ಏಪ್ರಿಲ್ 19ಕ್ಕೆ ಸರಿಯಾಗಿ 50 ದಿನ ಪೂರೈಸಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕಿ, ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ.

  ಹೈ ಕ್ವಾಲಿಟಿಯಲ್ಲಿ 'ಬಸಣ್ಣಿ' ವಿಡಿಯೋ ಹಾಡು ನೋಡಿ

  ಮೆಜಿಸ್ಟಿಕ್ ನ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವು ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ನಡುವೆ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಯಜಮಾನ ಸಿನಿಮಾ ಟೆಲಿಕಾಸ್ಟ್ ಆಗಿದೆ.

  ಬಹಳ ದಿನದ ನಂತರ ದರ್ಶನ್ ಸಿನಿಮಾ ಅವರ ಸಿನಿಮಾ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು, ನಿಜಕ್ಕೂ ಡಿ ಬಾಸ್ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಇನ್ನು ಕಲೆಕ್ಷನ್ ವಿಚಾರದಲ್ಲೂ ಯಜಮಾನ ಅಬ್ಬರಿಸಿದ್ದು, ಬಾಕ್ಸ್ ಅಫೀಸ್ ನಲ್ಲಿ ದಾಖಲೆ ಬರೆದಿದೆ.

  'ಯಜಮಾನ'ನ ಬಸಣ್ಣಿ ಹಾಡಿಗೆ ಭಾವ ತುಂಬಿದ್ದು ಈ ಹುಡುಗಿಯೇ!

  ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿರುವ ಯಜಮಾನ ಚಿತ್ರವನ್ನ ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದಾರೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ರವಿಶಂಕರ್, ದೇವರಾಜ್, ಠಾಕೂರ್ ಅನೂಪ್ ಸಿಂಗ್, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Challenging star darshan Yajamana movie completes 50 days. the movie has released on march 1st. dircted by harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X