For Quick Alerts
  ALLOW NOTIFICATIONS  
  For Daily Alerts

  "ನಾನೇ ಘೋಷಿಸುವವರೆಗೂ ಯಾವುದು ಸತ್ಯ ಅಲ್ಲ, KGF - 3 ಮಾಡ್ತೀನಿ": ಯಶ್

  |

  ಸ್ಟಾರ್‌ ನಟರು ಒಂದು ಸಿನಿಮಾ ಮುಗಿಯೋಕು ಮೊದಲೇ ಇನ್ನೊಂದು ಸಿನಿಮಾ ಘೋಷಿಸುತ್ತಾರೆ. KGF -2 ರಿಲೀಸ್ ಆಗಿ 6 ತಿಂಗಳು ಕಳೆದರೂ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರಾಕಿಂಗ್ ಸ್ಟಾರ್ ಆ ಸಿನಿಮಾದಲ್ಲಿ ನಟಿಸ್ತಾರಂತೆ, ಈ ನಿರ್ದೇಶಕರ ಜೊತೆ ಕೆಲಸ ಮಾಡುತ್ತಾರಂತೆ ಎನ್ನುವ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಸ್ವತಃ ಯಶ್ ಈ ಬಗ್ಗೆ ಮಾತನಾಡಿದ್ದಾರೆ. ಯಶ್19 ಹಾಗೂ KGF -3 ಸ್ಪಷ್ಟನೆ ಕೊಟ್ಟಿದ್ದಾರೆ.

  KGF ಸರಣಿ ಸಿನಿಮಾಗಳ ನಂತರ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಕನ್ನಡದ ನಟನ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. KGF -2 ಬರೋಬ್ಬರಿ 1250 ಕೋಟಿ ರೂ. ಕಲೆಕ್ಷನ್ ಮಾಡಿ ಹೊಸ ದಾಖಲೆ ಬರದಿತ್ತು. ಇನ್ನು ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಸೀಕ್ವೆಲ್‌ ಬಗ್ಗೆಯೂ ಸುಳಿವು ಕೊಟ್ಟಿದ್ದಾರೆ. ಯಶ್ ಮುಂದಿನ ಸಿನಿಮಾ ಅದೇನಾ? ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸಬೇಕಿದ್ದ ಸಿನಿಮಾ ಕಥೆ ಏನಾಯ್ತು? ಹೀಗೆ ಸಾಕಷ್ಟು ಚರ್ಚೆ ನಡೀತಾನೇ ಇದೆ. ಆದರೆ ಯಶ್ ಮಾತ್ರ ಯಾವುದರ ಬಗ್ಗೆಯೂ ಮಾತನಾಡುವ ಗೋಜಿಗೇ ಹೋಗಿರಲಿಲ್ಲ.

  ರಾಜಕಾರಣಿ ಮಗ ಅನ್ನೋದನ್ನು ಬಿಡು, ಮೊದಲು ಕನ್ನಡ ಕಲಿ ಇಲ್ಲಾಂದ್ರೆ ಬೆಳೆಯಲ್ಲ; ಝೈದ್ ಖಾನ್‌ಗೆ ಯಶ್ ಕ್ಲಾಸ್!ರಾಜಕಾರಣಿ ಮಗ ಅನ್ನೋದನ್ನು ಬಿಡು, ಮೊದಲು ಕನ್ನಡ ಕಲಿ ಇಲ್ಲಾಂದ್ರೆ ಬೆಳೆಯಲ್ಲ; ಝೈದ್ ಖಾನ್‌ಗೆ ಯಶ್ ಕ್ಲಾಸ್!

  ಯಶ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಇತ್ತೀಚಿಗೆ ದೊಡ್ಡದಾಗಿ ಸದ್ದು ಮಾಡಿತ್ತು. 2 ಸಿನಿಮಾಗಳಿಗಾಗಿ ರಾಕಿಂಗ್ ಸ್ಟಾರ್‌ನ ಸಂಪರ್ಕಿಸಲಾಗಿದೆ. ಯಾವುದಾದರೂ ಒಂದು ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎನ್ನಲಾಗಿತ್ತು. ಅದರೆ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಈ ಎಲ್ಲಾ ಗಾಸಿಪ್‌ಗಳಿಗೂ ಯಶ್ ಫುಲ್‌ಸ್ಟಾಪ್ ಇಟ್ಟಿದ್ದಾರೆ.

  ಯಶ್19 ಸಿನಿಮಾ ಯಾವಾಗ?

  ಯಶ್19 ಸಿನಿಮಾ ಯಾವಾಗ?

  ಬಾಲಿವುಡ್‌ನ 'ಬ್ರಹ್ಮಾಸ್ತ್ರ'- 2 ಅಥವಾ ಓಂ ಪ್ರಕಾಶ್ ಮೆಹ್ರಾ ನಿರ್ದೇಶನದ 'ಕರ್ಣ' ಸಿನಿಮಾಗಳಲ್ಲಿ ಯಶ್ ನಟಿಸಬಹುದು. ಈ ಬಗ್ಗೆ ಚರ್ಚೆ ನಡೀತಿದೆ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್ "ನನ್ನ ಮುಂದಿನ ಸಿನಿಮಾ ಆದಷ್ಟು ಬೇಗ ಘೋಷಣೆ ಆಗುತ್ತದೆ. ನನಗೆ ಗೊತ್ತು ನನ್ನ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿ ಕೇಳಿಬರುತ್ತಿದೆ. ನಾನು ಹೇಳಿದಾಗಷ್ಟೆ ಮುಂದಿನ ಸಿನಿಮಾ ಘೋಷಣೆ ಆಗುತ್ತದೆ. ಇನ್ನು ಉಳಿದಿದ್ದು ಯಾವುದು ನಿಜ ಅಲ್ಲ. ಮುಂದಿನ ಸಿನಿಮಾ ಬಗ್ಗೆ ನಾನೇ ಹೇಳುತ್ತೇನೆ" ಎಂದಿದ್ದಾರೆ.

  KGF -3 ಬಗ್ಗೆ ಯಶ್ ಮಾತು

  KGF -3 ಬಗ್ಗೆ ಯಶ್ ಮಾತು

  ಯಶ್ KGF ಸರಣಿ ಚಿತ್ರಕ್ಕಾಗಿ ಆರೇಳು ವರ್ಷ ಮುಡಿಪಿಟ್ಟಿದ್ದರು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿದೆ. KGF - 2 ಕ್ಲೈಮ್ಯಾಕ್ಸ್‌ನಲ್ಲಿ ಕಥೆ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದಾರೆ. KGF -3 ಯಾವಾಗ ಎನ್ನುವ ಪ್ರಶ್ನೆಗೆ "ಸದ್ಯಕ್ಕಿಲ್ಲ. ನಮಗೆ ಆ ಆಲೋಚನೆ ಇದೆ. ಪ್ಲ್ಯಾನ್‌ ಕೂಡ ಇದೆ. ಸದ್ಯಕ್ಕೆ ಬೇರೆ ಏನಾದರೂ ಮಾಡಬೇಕು. ಇದಕ್ಕಾಗಿ ಆರೇಳು ವರ್ಷ ವ್ಯಯಿಸಿದ್ದೇನೆ. ಸದ್ಯ ಬ್ರೇಕ್ ಬೇಕು. ನೋಡೋಣ ಸಮಯ ಕೂಡಿ ಬಂದಾಗ ಮಾಡುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.

  ನರ್ತನ್ - ಯಶ್ ಸಿನಿಮಾ ಕಥೆ ಏನಾಯ್ತು?

  ನರ್ತನ್ - ಯಶ್ ಸಿನಿಮಾ ಕಥೆ ಏನಾಯ್ತು?

  KGF - 2 ರಿಲೀಸ್‌ಗೂ ಮೊದಲೇ ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸೋ ಬಗ್ಗೆ ಗುಸುಗುಸು ಕೇಳಿಬಂದಿತ್ತು. 'ಮಫ್ತಿ' ನಂತರ ನರ್ತನ್ ಯಾವುದೇ ಚಿತ್ರವನ್ನು ನಿರ್ದೇಶಿಸಿಲ್ಲ. ಯಶ್‌ಗಾಗಿ ಕಥೆ ಬರೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಇತ್ತೀಚೆಗೆ ಕಥೆ ಕೇಳಿದ ಯಶ್ ಮತ್ತಷ್ಟು ಬದಲಾವಣೆ ಮಾಡುವಂತೆ ಹೇಳಿದ್ದಾರಂತೆ. ಹಾಗಾಗಿ ಕಥೆಯನ್ನು ತಿದ್ದಿ ತೀಡುವ ಕೆಲಸದಲ್ಲಿ ನರ್ತನ್ ಬ್ಯುಸಿಯಾಗಿದ್ದಾರೆ.

  ಜನವರಿ 8ಕ್ಕೆ ಯಶ್‌19?

  ಜನವರಿ 8ಕ್ಕೆ ಯಶ್‌19?

  ಸದ್ಯ ಯಶ್ ಮಾತು ಕೇಳಿತ್ತಿದ್ದರೆ ಯಾವುದೇ ಕಥೆ ಫೈನಲ್ ಆಗಿಲ್ಲ ಎನ್ನುವುದು ಗೊತ್ತಾಗುತ್ತಿದೆ. ನಾನೇ ನನ್ನ ಮುಂದಿನ ಸಿನಿಮಾ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ಯಶ್‌ ತಮ್ಮ 19ನೇ ಸಿನಿಮಾ ಘೋಷಿಸುವ ಸಾಧ್ಯತೆಯಿದೆ. ಅಭಿಮಾನಿಗಳು ಕೂಡ ಇದೇ ನಿರೀಕ್ಷೆಯಲ್ಲಿದ್ದಾರೆ.

  English summary
  Yash clears the rumors of As 19. and also Said that KGF 3 Is not anytime soon.
  Sunday, November 6, 2022, 11:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X