»   » 2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?

2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?

Posted By:
Subscribe to Filmibeat Kannada

2016 ಸ್ಯಾಂಡಲ್ ವುಡ್ ಪಾಲಿಗೆ ವಿಶೇಷ ಅಂತಾನೆ ಹೇಳಬಹುದು. ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಪ್ರತಿವರ್ಷದಂತೆ ಅಬ್ಬರಿಸಿವೆ. ಹೊಸಬರ ಸಿನಿಮಾಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ.

ಬಾಲಿವುಡ್, ಕಾಲಿವುಡ್, ಟಾಲಿವುಡ್...ಯಾವ ಚಿತ್ರರಂಗಕ್ಕಿಂತಲೂ ನಮ್ ಸ್ಯಾಂಡಲ್ ವುಡ್ ಕಮ್ಮಿಯಿಲ್ಲ ಎಂಬುದನ್ನ 2016 ಸಾಬೀತು ಮಾಡಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಸ್ವಮೇಕ್ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಸ್ಟಾರ್ ಗಳ ಅಬ್ಬರದಲ್ಲಿ ಹೊಸಬರ ಪ್ರಯೋಗ ವರ್ಕೌಟ್ ಆಗಿದೆ. ಹಾಗಾದ್ರೆ, 2016ರಲ್ಲಿ ಮಿಂಚಿದ ಸ್ಟಾರ್ ನಟರುಗಳ ಪೈಕಿ ಯಾರಿಗೆ ನೀವು ನಂಬರ್.1 ಸ್ಥಾನ ಕೊಡ್ತೀರಾ?[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

2016 ರಲ್ಲಿ ಉತ್ತಮ ಅಭಿನಯ ನೀಡಿದ ನಟರ ಪಟ್ಟಿ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಅವುಗಳಲ್ಲಿ ನಿಮ್ಮ ಪ್ರಕಾರ ಈ ವರ್ಷದ ಅತ್ತ್ಯುತ್ತಮ ನಟ ಯಾರು ಅಂತ ನಮಗೆ ತಿಳಿಸಿ.....

ಶಿವರಾಜ್ ಕುಮಾರ್

'ಕಿಲ್ಲಿಂಗ್ ವೀರಪ್ಪನ್', 'ಶಿವಲಿಂಗ' ಚಿತ್ರದ ಮೂಲಕ ವರ್ಷಾರಂಭ ಮಾಡಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಈ ವರ್ಷ 'ಸಂತೆಯಲ್ಲಿ ನಿಂತ ಕಬೀರ' ಎಂಬ ಪ್ರಯೋಗಾತ್ಮಕ ಚಿತ್ರದಲ್ಲೂ ತಮ್ಮ ಖದರ್ ತೋರಿಸಿದ್ರು. ಥ್ರಿಲ್ಲಿಂಗ್ ಸಬ್ಜೆಕ್ಟ್ ಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ ಶಿವಣ್ಣ ಈ ವರ್ಷದ ಸ್ಟಾರ್ ನಟ ಎನ್ನಬಹುದಾ?['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']

ಚಾಲೆಂಜಿಂಗ್ ಸ್ಟಾರ್ ದರ್ಶನ್

'ವಿರಾಟ್' ಚಿತ್ರದಲ್ಲಿ ಬಿಸ್ ನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ದರ್ಶನ್, 'ಜಗ್ಗುದಾದ' ಚಿತ್ರದಲ್ಲಿ ಡಾನ್ ಆಗಿ ಬಣ್ಣ ಹಚ್ಚಿದ್ದರು. ಇವೆರೆಡು ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸಿದ್ದರು. ಹೀಗಾಗಿ ದರ್ಶನ್ 2016ರ ಬೆಸ್ಟ್ ಆಕ್ಟರ್ ಎನಿಸಿಕೊಳ್ತಾರ?['ಜಗ್ಗು'ವಿನ 'ದಾದಾ'ಗಿರಿಗೆ ವಿಮರ್ಶಕರು ಮನಸೋತ್ರಾ? ]

ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಚಕ್ರವ್ಯೂಹ' ಚಿತ್ರದಲ್ಲಿ ಪಬ್ಲಿಕ್ ಹೀರೋ ಆಗಿ ಮಿಂಚಿದ್ದರು. ವರ್ಷದ ಕೊನೆಯಲ್ಲಿ ತೆರೆಕಂಡ 'ದೊಡ್ಮನೆ ಹುಡುಗ' ಸೌಂಡ್ ಮಾಡಿತ್ತು. ಈ ಎರಡೂ ಚಿತ್ರಗಳಲ್ಲಿ ಸಹಜ ಅಭಿನಯ ನೀಡಿದ ಅಪ್ಪು ಈ ವರ್ಷದ ಅತ್ತ್ಯುತ್ತಮ ನಟ ಅನ್ನಬಹುದಾ?[ಪುನೀತ್ 'ಚಕ್ರವ್ಯೂಹ'ದ ಒಳ ನುಗ್ಗಿದ ವಿಮರ್ಶಕರು ಏನಂತಾರೆ?]

ಸುದೀಪ್

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಇನ್ನೂ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿದ್ದ 'ಮುಕುಂದ ಮುರಾರಿ' ಚಿತ್ರಕ್ಕೂ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಸೋ ಸುದೀಪ್ ಬಗ್ಗೆ ನೀವ್ ಏನ್ ಹೇಳ್ತೀರಾ?[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ 'ಕಲ್ಪನಾ-2 'ಚಿತ್ರದಲ್ಲಿ ಭಯ ಪಡಿಸಿದ್ದರು. ಇನ್ನೂ ಸುದೀಪ್ ಹಾಗೂ ಉಪೇಂದ್ರ ಒಟ್ಟಾಗಿ ಅಭಿನಯಿಸಿದ್ದ 'ಮುಕುಂದ ಮುರಾರಿ' ಚಿತ್ರದಲ್ಲಿ ಉಪ್ಪಿ ತಮ್ಮದೇ ಸ್ಟೈಲ್ ನಲ್ಲಿ ಖದರ್ ತೋರಿಸಿದ್ದರು. ಹೀಗಾಗಿ ಇವೆರೆಡು ಸಿನಿಮಾಗಳಲ್ಲಿ ಕಿಕ್ ಕೊಟ್ಟ ಉಪ್ಪಿಗೆ ಎಷ್ಟು ಮಾರ್ಕ್ಸ್ ಕೊಡ್ತೀರಾ?[ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....]

ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್, 'ಸ್ಟೈಲ್ ಕಿಂಗ್' ಚಿತ್ರದಿಂದ ತಮ್ಮ ಅಭಿಮಾನಿಗಳಿಗೆ ಹೊಸ ರೀತಿಯ ಮನರಂಜನೆ ನೀಡಿದ್ದರು. ಹಾಗೆ 'ಜೂಮ್' ಚಿತ್ರದಲ್ಲಿ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಾಡಿಸಿದ್ದರು. ಇನ್ನೂ ಮುಂಗಾರುಮಳೆ-2 ಚಿತ್ರದ ಮೂಲಕ ಮತ್ತೊಂದು ಪ್ರೇಮಕಹಾನಿಯನ್ನ ಹೇಳಿದ್ದರು. ಹಾಗಾದ್ರೆ, ಗಣೇಶ್ ಅಭಿನಯಕ್ಕೆ ಏನ್ ಅಂತೀರಾ?

ಶರಣ್

'ಜೈಮಾರುತಿ 800' ಹಾಗೂ 'ನಟರಾಜ ಸರ್ವೀಸ್' ಚಿತ್ರಗಳಲ್ಲಿ ಕಾಮಿಡಿ ದರ್ಬಾರ್ ಮಾಡಿದ ಶರಣ್ ಬಗ್ಗೆ ನಿಮ್ಮ ಅಭಿಪ್ರಾಯವೇನು?[ವಿಮರ್ಶೆ: ನಟರಾಜ 'ಸೂಪರ್', ಸರ್ವೀಸ್ 'ಸುಮಾರು]

ಯಶ್

ರಾಕಿಂಗ್ ಸ್ಟಾರ್ ಯಶ್, ಈ ವರ್ಷ ಮಾಡಿದ್ದು ಒಂದೆ ಚಿತ್ರ 'ಸಂತು ಸ್ಟ್ರೈಟ್ ಫಾರ್ವಾರ್ಡ್'. ಲವರ್ ಬಾಯ್ ಇಮೇಜ್ ಜೊತೆ ಮಾಸ್ ಎಂಟರ್ ಟೈನ್ ಮೆಂಟ್ ನೀಡಿದ್ದ ಯಶ್, ಈ ವರ್ಷ ನಿಮ್ಗೆ ಇಷ್ಟವಾದ್ರಾ?[ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!]

ಧನಂಜಯ್

'ಜೆಸ್ಸಿ' ಹಾಗೂ 'ಬದ್ಮಾಶ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಧನಂಜಯ್ ಅವರ ಫರ್ಫಾಮೆನ್ಸ್ ಈ ವರ್ಷ ಹೇಗಿತ್ತು?[ಬದ್ಮಾಶ್ ವಿಮರ್ಶೆ: ಫೈಟ್ಸ್, ಡೈಲಾಗ್ ಗಳ ಅಬ್ಬರದಲ್ಲಿ ಧನಂ'ಜಯ]

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಈ ವರ್ಷ 'ರಿಕ್ಕಿ', ಹಾಗೂ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಅಭಿನಯಿಸಿದ್ದರು. ಎರಡು ವಿಭಿನ್ನ ಸಿನಿಮಾಗಳನ್ನ ನೀಡಿದ ರಕ್ಷಿತ್ ಶೆಟ್ಟಿ, ಈ ವರ್ಷ ಅತ್ಯುತ್ತಮ ನಟ ಆಗಬಹುದಾ?

ದುನಿಯಾ ವಿಜಯ್

ದುನಿಯಾ ವಿಜಯ್ ಅಭಿನಯದ 'ದನಕಾಯೋನು' ಸಿನಿಮಾ ಈ ವರ್ಷ ಬಿಡುಗಡೆಯಾಗಿತ್ತು. ವಿಜಿಯ ನೈಜ ಅಭಿನಯಕ್ಕೆ ನಿಮ್ಮ ಕಾಮೆಂಟ್ ಏನು?[ವಿಮರ್ಶೆ: ಪ್ರಾಣಿ ಪ್ರಿಯರು ಧಾರಾಳವಾಗಿ 'ದನ ಕಾಯ್ಬೋದು'.!]

ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಈ ವರ್ಷ ಕನ್ನಡ ಪ್ರೇಕ್ಷಕರಿಗೆ 'ನೀರ್ ದೋಸೆ' ತಿನ್ನಿಸಿದ್ದರು. ಸಿಕ್ಕಾಪಟ್ಟೆ ರುಚಿಯಾಗಿದ್ದ 'ನೀರ್ ದೋಸೆ'ಯನ್ನ ಸವಿದ ಅಭಿಮಾನಿಗಳು ಏನ್ ಹೇಳ್ತೀರಾ?[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.! ]

ಅಜಯ್ ರಾವ್

'ಕೃಷ್ಣ-ರುಕ್ಕು' ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಡುಯೆಟ್ ಹಾಡಿದ್ದ ಅಜಯ್ ರಾವ್ ಈ ವರ್ಷ ನಿಮ್ಗೆ ಇಷ್ಟವಾದ್ರಾ?['ಕೃಷ್ಣ ರುಕ್ಕು' ಪ್ರೀತಿಗೆ ವಿಮರ್ಶಕರು ಏನಂದ್ರು]

ಜುಗಾರಿ ಅವಿನಾಶ್

'ಲಾಸ್ಟ್ ಬಸ್' ಚಿತ್ರದ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಮನರಂಜನೆ ನೀಡಿದ್ದ ಜುಗಾರಿ ಅವಿನಾಶ್ ಅಭಿನಯಕ್ಕೆ ನಿಮ್ಮ ಅಭಿಪ್ರಾಯವೇನು?

ವಿಜಯರಾಘವೇಂದ್ರ

'ಶಿವಯೋಗಿ ಪುಟ್ಟಯ್ಯಜ್ಜ' ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದ ವಿಜಯ ರಾಘವೇಂದ್ರ, ನಿಮ್ಮ ಪ್ರಕಾರ ಬೆಸ್ಟ್ ಆಕ್ಟರ್ ಆಗಬಹುದಾ?

ಅರ್ಜುನ್ ಸರ್ಜಾ

'ಗೇಮ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಅರ್ಜುನ್ ಸರ್ಜಾಗೆ ಎಷ್ಟು ಅಂಕ ಕೊಡ್ತೀರಾ?

ನಿಮ್ಮ ಪ್ರಕಾರ ಬೆಸ್ಟ್ ಹೀರೋ ಯಾರು?

ಈ ಎಲ್ಲಾ ನಟರ ಪೈಕಿ 'ಬೆಸ್ಟ್ ಹೀರೋ-2016' ಪಟ್ಟ ಯಾರಿಗೆ ನೀಡಬಹುದು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Who is the Best Actor of Sandalwood in 2016. Tell us your choice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada