»   » 2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?

2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?

Posted By:
Subscribe to Filmibeat Kannada

2016, ಬರೀ ಸ್ಟಾರ್ ನಟರಿಗೆ ಮಾತ್ರ ಅಲ್ಲ. ಹೊಸಬರಿಗೂ ಅದೃಷ್ಟ ತಂದುಕೊಟ್ಟಿದೆ. ಅದರಲ್ಲೂ ರಾಜಕೀಯ ವ್ಯಕ್ತಿಗಳ ಮಕ್ಕಳಿಗೆ ಈ ವರ್ಷ ಲಕ್ಕಿಯಾಗಿತ್ತು ಎನ್ನುವುದು ವಿಶೇಷ.

ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್, ಹೆಚ್.ಎಂ.ರೇವಣ್ಣನವರ ಪುತ್ರ ಅನೂಪ್ ರೇವಣ್ಣ, ಚೆಲುವರಾಯ ಸ್ವಾಮಿ ಅವರ ಮಗ ಸಚಿನ್ ಸೇರಿದಂತೆ ಅನೇಕ ಯುವ ನಟರು 2016 ರಲ್ಲಿ ಸ್ಯಾಂಡಲ್ ವುಡ್ ಬೆಳ್ಳಿ ಪರದೆ ಮೇಲೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿದರು.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

ಮೊದಲ ಚಿತ್ರದಲ್ಲೇ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ನವ ನಾಯಕರ ಪಟ್ಟಿ ಇಲ್ಲಿದೆ. ಇವರಲ್ಲಿ ಯಾರು ಅತ್ಯುತ್ತಮ ಯುವ ನಟ ಎಂದು ತಿಳಿಸಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ನಿಖಿಲ್ ಕುಮಾರ್

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಈ ವರ್ಷ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. 'ಜಾಗ್ವಾರ್' ಚಿತ್ರದ ಮೂಲಕ ಜಬರ್ ದಸ್ತ್ ಒಪನಿಂಗ್ ಮಾಡಿದ ನಿಖಿಲ್, ಚೊಚ್ಚಲ ಚಿತ್ರದಲ್ಲೇ ಡ್ಯಾನ್ಸ್, ಫೈಟ್, ಆಕ್ಟಿಂಗ್ ಮೂಲಕ ಭರವಸೆ ಮೂಡಿಸಿದರು.[ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

ಪ್ರವೀಣ್

ಸಿಂಪಲ್ ಸುನಿ ನಿರ್ದೇಶನದ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ನಟ ಪ್ರವೀಣ್. ಮೊದಲ ಚಿತ್ರದಲ್ಲಿಯೇ ತಮ್ಮ ಬೋಲ್ಡ್ ಅಭಿನಯದ ಮೂಲಕ ಕನ್ನಡ ಚಿತ್ರಪ್ರೇಮಿಗಳ ಗಮನ ಸೆಳೆದರು ಅಂದ್ರೆ ತಪ್ಪಾಗಲಾರದು.

ಸೂರಜ್ ಗೌಡ

ಹ್ಯಾಂಡ್ ಸಮ್ ಹೀರೋ ಲುಕ್ ನಲ್ಲಿ ಡೆಬ್ಯೂ ಮಾಡಿದ ಸೂರಜ್ ಗೌಡ, ತಮ್ಮ ಆಕರ್ಷಕ ಅಭಿನಯದಿಂದ ಮೋಡಿ ಮಾಡಿದರು. ಕವಿರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ನಾಯಕನಾಗಿ ಸೂರಜ್, ವಿಮರ್ಶಕರನ್ನ ಮೆಚ್ಚಿಸಿದರು.

ಅನೂಪ್ ರೇವಣ್ಣ

ರಾಜಕಾರಣಿ ಹೆಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ 'ಲಕ್ಷ್ಮಣ' ಚಿತ್ರದ ಮೂಲಕ ಆಕ್ಷನ್ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡಿದರು. ತಮ್ಮ ಮೊದಲ ಸಿನಿಮಾದಲ್ಲೇ ಮಾಸ್ ನಾಯಕನಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಅನೂಪ್ ಮೇಲೆ ಭರವಸೆ ಹುಟ್ಟಿಕೊಂಡಿದೆ.['ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ']

ದಿಲೀಪ್ ಪ್ರಕಾಶ್

'ಕ್ರೇಜಿಬಾಯ್' ಚಿತ್ರದಲ್ಲಿ ಲವರ್ ಬಾಯ್ ಇಮೇಜ್ ನಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ದಿಲೀಪ್ ಪ್ರಕಾಶ್. ಡ್ಯಾನ್ಸ್, ಫೈಟ್ ಎಲ್ಲದಕ್ಕೂ ಸೈ ಎಂದಿದ್ದ ದಿಲೀಪ್ ಚೊಚ್ಚಲ ಸಿನಿಮಾದಲ್ಲಿ ಕಮಾಲ್ ಮಾಡಿದ್ದು ಮಾತ್ರ ಸುಳ್ಳಲ್ಲ.['ಕ್ರೇಜಿ' ಹುಡುಗನ ಲವ್ ಕಹಾನಿಗೆ ವಿಮರ್ಶಕರ ಪ್ರತಿಕ್ರಿಯೆ ಏನು.?]

ಸಚಿನ್

ರಾಜಕಾರಣಿ ಚೆಲುವರಾಯ ಸ್ವಾಮಿ ಅವರ ಪುತ್ರ ಸಚಿನ್, 'ಹ್ಯಾಪಿ ಬರ್ತ್ ಡೇ' ಚಿತ್ರದ ಮೂಲಕ ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.['ಹ್ಯಾಪಿ ಬರ್ತ್ ಡೇ' ಚಿತ್ರ ನೋಡಿದ ವಿಮರ್ಶಕರು ಕೊಟ್ಟ ಕಾಮೆಂಟ್ಸ್ ಇವು]

ಗಡ್ಡಪ್ಪ

2016 ರಲ್ಲಿ ಸೆನ್ಸೇಷ್ನಲ್ ಕ್ರಿಯೆಟ್ ಮಾಡಿದ್ದು 'ತಿಥಿ' ಖ್ಯಾತಿಯ ಗಡ್ಡಪ್ಪ. ಈ ವರ್ಷದಲ್ಲಿ ಅತ್ಯುತ್ತಮ ಡೆಬ್ಯೂ ಮಾಡಿದ ನಟರ ಸಾಲಿನಲ್ಲಿ ಗಡ್ಡಪ್ಪನೂ ಸ್ಥಾನ ಪಡೆದುಕೊಂಡಿದ್ದಾರೆ.['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

ಇವರಲ್ಲಿ ಯಾರು ಅತ್ಯುತ್ತಮ ಯುವ ನಟ?

ಈ ಎಲ್ಲ ನಾಯಕರು ಈ ವರ್ಷ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ತಮ್ಮದೇ ಆದ ಪ್ರತಿಭೆ ಮೂಲಕ ಕನ್ನಡ ಕಲಾರಸಿಕರ ಮನಗೆದ್ದರವರು. ಇವರಲ್ಲಿ ಯಾರು ಈ ವರ್ಷದ ಅತ್ಯುತ್ತಮ ಯುವ ನಟ ಎನಿಸಿಕೊಳ್ತಾರೆ ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

English summary
2016 witnessed many newcomers entering Sandalwood. Among-st those here is the list of Talented New Actor who made promising entry into Sandalwood in 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada