For Quick Alerts
  ALLOW NOTIFICATIONS  
  For Daily Alerts

  ರವೀಂದ್ರ ಪರಮೇಶ್ವರಪ್ಪ ಚೊಚ್ಚಲ ಕನಸಿನ ಆಗಮನಕ್ಕೆ ಮುಹೂರ್ತ ಫಿಕ್ಸ್..!

  |

  ಕನ್ನಡ ಚಿತ್ರರಂಗದಲ್ಲಿ ಇದೀಗ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳ ಜೊತೆಗೆ ಹೊಸ ಪ್ರತಿಭೆಗಳ ಪರಿಚಯವೂ ಆಗುತ್ತಿದೆ. ಈ ಪೈಕಿ 'ಯೆಲ್ಲೋ ಗ್ಯಾಂಗ್ಸ್' ಚಿತ್ರ ಕೂಡ ಒಂದು. ಈ ಸಿನಿಮಾ ಮೂಲಕ ರವೀಂದ್ರ ಪರಮೇಶ್ವರಪ್ಪ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದು, ಚೊಚ್ಚಲ ಪ್ರಯತ್ನದಲ್ಲಿ ಎಲ್ಲರನ್ನು ಬೆರಗುಗೊಳಿಸುವ ಕಥಾನಕವನ್ನು ಸಿನಿಮಾ ಪ್ರೇಮಿಗಳಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಟೈಟಲ್ ಜೊತೆಗೆ ಒಂದಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಬೆರೆಸಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಪೋಸ್ಟರ್, ಟೀಸರ್ ಝಲಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ 'ಯೆಲ್ಲೋ ಗ್ಯಾಂಗ್ಸ್' ಆಗಮನಕ್ಕೆ ದಿನಾಂಕ ನಿಗದಿಯಾಗಿದ್ದು, ಇದೇ ನವೆಂಬರ್ 11ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ.

  'ಯೆಲ್ಲೋ ಗ್ಯಾಂಗ್', ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂದು ಹೊಸ ಬಗೆಯ ಚಿತ್ರ. ಇಂತಹ ಪ್ರಯೋಗಗಳು ನಮ್ಮ ನೆಲದಲ್ಲಿ ತೀರಾ ವಿರಳ. ಅಂತಹ ಪ್ರಯತ್ನವನ್ನು ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಮರ್ಷಿಯಲ್ ಚಿತ್ರಗಳಿಗಿಂತ ಭಿನ್ನವಾಗಿರುವ 'ಯೆಲ್ಲೋ ಗ್ಯಾಂಗ್ಸ್' ಸಿನಿಮಾದಲ್ಲಿ ಡ್ರಗ್ಸ್ ಡೀಲ್‌ನಿಂದ ಸಿಗುವ ಹಣ ಸಾಗಾಣಿಕೆ ಸುತ್ತ ಸಾಗುವ ಕಥಾನಕ ಹಲವು ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ ಅನ್ನೋದನ್ನು ಸ್ವತಃ ನಿರ್ದೇಶಕರೇ ಬಿಚ್ಚಿಟ್ಟಿದ್ದಾರೆ.

  "ತೇಜಸ್ಸು, ಪ್ರತಿಭೆಯ ಕಣಜ ಅಪ್ಪು": 'ಗಂಧದಗುಡಿ' ಟ್ರೈಲರ್ ನೋಡಿ ಪ್ರಧಾನಿ ಮೋದಿ ಮೆಚ್ಚುಗೆ

  ಬಲ ರಾಜ್ವಾಡಿ, ನಾಟ್ಯರಂಗ, ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಜಿ ಬಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ ಬಿ, ಪವನ್ ಕುಮಾರ್ ಚಿತ್ರದಲ್ಲಿದ್ದಾರೆ. ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳ ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಚಿತ್ರ ನಿರ್ಮಾಣ ಮಾಡಲಾಗಿದೆ. ಮನೋಜ್ ಪಿ, ಜಿ ಎಂ ಆರ್ ಕುಮಾರ್, ಪ್ರವೀಣ್ ಡಿ ಎಸ್, ಮತ್ತು ಜೆ ಎನ್ ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  Yellow Gangs Kannada Movie Releasing On November 11th

  ಯೋಗರಾಜ್ ಭಟ್ಟರ ಗರಡಿಯಲ್ಲಿ ಕೆಲ ವರ್ಷಗಳ ಕಾಲ ಪಳಗಿರುವ ರವೀಂದ್ರ ಪರಮೇಶ್ವರಪ್ಪ 'ಯೆಲ್ಲೋ ಗ್ಯಾಂಗ್' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದು, ಇವರಿಗೆ ಪ್ರವೀಣ್ ಕುಮಾರ್ ಜಿ ಸಾಥ್ ಕೊಟ್ಟಿದ್ದಾರೆ. ಸುಜ್ಞಾನ್ ಛಾಯಾಗ್ರಾಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ, ಲೋಕೇಶ್ ಹಿತ್ತಲಕೊಪ್ಪ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

  English summary
  Yellow Gangs Kannada Movie Releasing On November 11th, Know More.
  Sunday, October 9, 2022, 14:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X