For Quick Alerts
  ALLOW NOTIFICATIONS  
  For Daily Alerts

  ಅಪ್ಪನಂತೆ ಮಗಳು: ಇಲ್ಲಿದೆ ಯೋಗರಾಜ ಭಟ್ಟರ ಮಗಳು ಬರೆದಿರುವ ಕವಿತೆ

  |

  'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬುದು ಹಳೆಯ ಗಾದೆ. ಇದನ್ನೇ ತುಸು ಬದಲಾಯಿಸಿ ಅಪ್ಪನಂತೆ ಮಗಳು ಎಂದು ಮಾಡಿದರೆ ಯೋಗರಾಜ ಭಟ್ಟರು ಹಾಗೂ ಅವರ ಮಗಳಿಗೆ ಚೆನ್ನಾಗಿ ಹೊಂದಿಕೆ ಆಗುತ್ತದೆ.

  ಯೋಗರಾಜ ಭಟ್ಟರು ತಮ್ಮ ಸುಂದರ ಸಿನಿಮಾಗಳ ಜೊತೆಗೆ ತಮ್ಮ ಲೇಖನಿಯಿಂದಲೂ ಖ್ಯಾತರು, ಪದಗಳು ಕಾರಂಜಿಯಂತೆ ಚಿಮ್ಮುತ್ತವೆ ಅವರ ಪೆನ್ನಿನಿಂದ. 'ಸೌಂದರ್ಯ ಸಮರ' ಬರೆದ ಭಟ್ಟರೇ 'ಕೈ ಕಚ್ಚ ಅಸಡ ಬಸಡ' ಸಹ ಬರೆದಿದ್ದಾರೆ. ಸ್ವತಃ ಕಾವ್ಯ ಪ್ರೇಮಿ ಭಟ್ಟರ ಪೆನ್ನಿಂದ ಪದಗಳ ಮುತ್ತು ಉದುರಿಸುತ್ತಾರೆ.

  'ನನ್ನ ಹುಟ್ದಬ್ಬ, ಎಷ್ಟು ಕತ್ತೆ ವಯಸ್ಸಾಯ್ತೋ ಗೊತ್ತಿಲ್ಲ....', ಎಲ್ರಿಗೂ ಧನ್ಯವಾದ

  ಯೋಗರಾಜ ಭಟ್ಟರ ಮಗಳೂ ಸಹ ಅಪ್ಪನ ಹಾದಿಯನ್ನೇ ಹಿಡಿದಿದ್ದಾಳೆ. ಇನ್ನೂ ಶಾಲೆ ಕಲಿಯುತ್ತಿರುವ ಪುಟಾಣಿ ಪುನರ್ವಸು ಅಪ್ಪನಿಂದ ಸ್ಪೂರ್ಥಿ ಪಡೆದು ಅಮ್ಮನ ಬಗ್ಗೆ ಮುದ್ದಾದ ಕವಿತೆ ಬರೆದಿದ್ದಾರೆ. ಅದನ್ನು ಭಟ್ಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಐದನೇ ತರಗತಿ ಓದುತ್ತಿರುವ ಪುನರ್ವಸು

  ಐದನೇ ತರಗತಿ ಓದುತ್ತಿರುವ ಪುನರ್ವಸು

  ಐದನೇ ತರಗತಿ ಓದುತ್ತಿರುವ ಯೋಗರಾಜ ಭಟ್ಟರ ಮಗಳು ಪುನರ್ವಸು ವೈ ಭಟ್ 'ಅಮ್ಮ' ಮತ್ತು 'ಮಾತು' ಎಂಬ ಎರಡು ಕವನ ಬರೆದಿದ್ದು, 'ಜ್ಞಾನಮಂಥನ 2019-2020' ದಲ್ಲಿ ಎರಡೂ ಕವನಗಳು ಅಚ್ಚಾಗಿವೆ.

  ಅಮ್ಮನ ಬಗ್ಗೆ ಪುನರ್ವಸು ಬರೆದಿರುವ ಕವನ

  ಅಮ್ಮನ ಬಗ್ಗೆ ಪುನರ್ವಸು ಬರೆದಿರುವ ಕವನ

  'ಗುರು ನೀನು, ಮಾತೃ ನೀನು,

  ಹಾಲಿನಲ್ಲಿ ಸಕ್ಕರೆ ನೀನು

  ಗೆಜ್ಜೆಯಲ್ಲಿ ನಾದ ನೀನು

  ಮಾತಿನಲ್ಲಿ ಅಕ್ಕರೆ ನೀನು

  ನನ್ನೊಳಗಿನ ಶಕ್ತಿಯಾಗಿ ಸರ್ವಕಾಲಕ್ಕೂ

  ನನ್ನೊಂದಿಗೆ ಇರು, ಅಮ್ಮ ನನ್ನ ಅಮ್ಮ' ಇದು ಪುನರ್ವಸು ಬರೆದಿರುವ 'ಅಮ್ಮ' ಕವಿತೆ.

  'ಪರಮಾತ್ಮ'ನನ್ನು ಸ್ಮರಿಸಿದ ಯೋಗರಾಜ್ ಭಟ್-ಜಯಣ್ಣ ಫಿಲಂಸ್

  ಪುನರ್ವಸು ಬರೆದಿರುವ ಮಾತು ಕವನ

  ಪುನರ್ವಸು ಬರೆದಿರುವ ಮಾತು ಕವನ

  'ಬಾಯಿ ಬಿಟ್ಟರೆ ಮಾತು

  ಇಲ್ಲದಿದ್ದರೆ ಮನಸ್ಸಿನ ಮಾತು

  ಇಲ್ಲದಿದ್ದರೆ ಹೃದಯದ ಮಾತು

  ಇಲ್ಲದಿದ್ದರೆ ಮೃಗಗಳ ಮಾತು

  ಮಾತಿನೊಳಗೊಂದು ಕವನ

  ಆ ಕವನವೇ ಮೌನ' ಇದು ಪುನರ್ವಸು ಬರೆದಿರುವ 'ಮಾತು' ಕವನ.

  ಸಾಯೋಕೆ 2 ದಿನ ಮುಂಚೆ ನನಗೆ ಚಿರು ಸಿಕ್ಕಿದ್ದ | Chiranjeevi Sarja | Filmibeat Kannada
  ಚಿತ್ರ ಹಂಚಿಕೊಂಡಿರುವ ಯೋಗರಾಜ್ ಭಟ್

  ಚಿತ್ರ ಹಂಚಿಕೊಂಡಿರುವ ಯೋಗರಾಜ್ ಭಟ್

  ಮಗಳ ಕವನಗಳ ಚಿತ್ರ ಹಂಚಿಕೊಂಡಿರುವ ಯೋಗರಾಜ್ ಭಟ್, 'ಮಕ್ಳು ಮಾಡ್ಬೇಡಿ , ದೊಡ್ಡೋರ್ ಆಗ್ತರೆ, ದೊಡ್ಡೋರ್ ಆಗ್ಬೇಡಿ , ಮಕ್ಳು ಬೈತರೆ' ಎಂದು ತಮ್ಮದೇ ಹಾಡಿನ ಸಾಲನ್ನು ಬರೆದುಕೊಂಡಿದ್ದಾರೆ.

  ರಾಕ್ಲೈನ್ ಸುಧಾಕರ್ ಜೀವನ ಬದಲಿಸಿದ್ದು ರಾಕ್ಲೈನ್ ವೆಂಕಟೇಶ್ ಮತ್ತು ಯೋಗರಾಜ್ ಭಟ್

  English summary
  Director Yogaraj Bhat's daughter Punarvasu wrote two poems. She is studying fifth standard now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X