»   » ಮಾಸ್ ಕಿಂಗ್ ಶಿವಣ್ಣನಿಗೆ ಯೋಗರಾಜ್ ಭಟ್ ಹೊಸ ಸಿನಿಮಾ.!

ಮಾಸ್ ಕಿಂಗ್ ಶಿವಣ್ಣನಿಗೆ ಯೋಗರಾಜ್ ಭಟ್ ಹೊಸ ಸಿನಿಮಾ.!

Posted By:
Subscribe to Filmibeat Kannada

'ಮುಗುಳುನಗೆ' ಸಿನಿಮಾದ ನಂತರ ಯೋಗರಾಜ್ ಭಟ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಈಗ ಇದೇ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಭಟ್ಟರು ನಟ ಶಿವರಾಜ್ ಕುಮಾರ್ ಜೊತೆ ಸೇರಿ ಒಂದು ಸಿನಿಮಾ ಮಾಡಲಿದ್ದಾರಂತೆ.

ಹುಷಾರು... ಈ 'ಟಗರು' ಮೈ ತುಂಬ ಸಿಕ್ಕಾಪಟ್ಟೆ ಪೋಗರು

ಗಣೇಶ್, ದಿಗಂತ್, ಪುನೀತ್, ಸುದೀಪ್ ಜೊತೆ ಸಿನಿಮಾ ಮಾಡಿರುವ ಯೋಗರಾಜ್ ಭಟ್, ಇದುವರೆಗೆ ಶಿವಣ್ಣನಿಗೆ ಒಂದು ಸಿನಿಮಾ ಮಾಡಿಲ್ಲ. ಆದರೆ ಇದೀಗ ಶಿವಣ್ಣನಿಗಾಗಿ ಭಟ್ಟರು ಒಂದು ಕಥೆ ಮಾಡಿಕೊಳ್ಳುತ್ತಿದ್ದಾರಂತೆ. ಆಕ್ಷನ್ ಥ್ರಿಲ್ಲರ್ ರೀತಿಯ ಸಿನಿಮಾ ಇದಾಗಿದ್ದು, ಮುಂದಿನ ವರ್ಷ ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

Yogaraj Bhat planning to do a movie with Shiva Rajkumar.

ಅಂದಹಾಗೆ, ಸದ್ಯ ಶಿವರಾಜ್ ಕುಮಾರ್ ಅವರ 'ಟಗರು' ಟೀಸರ್ ಅಬ್ಬರಿಸುತ್ತಿದೆ. 'ಮಫ್ತಿ' ಸಿನಿಮಾ ರಿಲೀಸ್ ಹಂತದಲ್ಲಿದೆ. ಇವುಗಳನ್ನು ಹೊರತು ಪಡಿಸಿ ಎಂದಿನಂತೆ ಶಿವಣ್ಣ ಖಾತೆಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಈಗ ಯೋಗರಾಜ್ ಭಟ್ ಚಿತ್ರ ಕೂಡ ಸೇರಿಕೊಂಡಿದೆ.

English summary
Director Yogaraj Bhat planning to do a movie with Shiva Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada