»   » 'ವಾಸ್ತು ಪ್ರಕಾರ' ಸ್ವಿಟ್ಜರ್ಲೆಂಡ್ ಗೆ ಹಾರಿದ ಭಟ್ರ ಟೀಂ

'ವಾಸ್ತು ಪ್ರಕಾರ' ಸ್ವಿಟ್ಜರ್ಲೆಂಡ್ ಗೆ ಹಾರಿದ ಭಟ್ರ ಟೀಂ

By: ಜೀವನರಸಿಕ
Subscribe to Filmibeat Kannada

ಯೋಗರಾಜ ಭಟ್ರ 'ವಾಸ್ತುಪ್ರಕಾರ' ಚಿತ್ರತಂಡ ಇವತ್ತು (ಜೂ.5) ಸ್ವಿಟ್ಜರ್ಲೆಂಡ್ ಗೆ ಪ್ರಯಾಣ ಬೆಳೆಸ್ತಿದೆ. ಭಟ್ರು ಫಾರೀನ್ ನಲ್ಲಿ ಶೂಟಿಂಗ್ ಮಾಡ್ತಿದ್ದಾರೆ ಅಂತ ಗಾಂಧಿನಗರ ಅಚ್ಚರಿಯಿಂದ ನೋಡ್ತಿದೆ. ಭಟ್ರ ವಾಸ್ತುಪ್ರಕಾರ ಟೀಂನಲ್ಲಿ ಇತ್ತೀಚೆಗ್ಯಾಕೋ ಸಿಕ್ಕಾಪಟ್ಟೆ ಬದಲಾವಣೆಗಳಾಗ್ತಿವೆ. ಈಗ ಮತ್ತೊಬ್ಬ ಹೀರೋಯಿನ್ ಚೇಂಜ್ ಆಗಿದ್ದಾರೆ.

ಇವತ್ತು ರಕ್ಷಿತ್ ಶೆಟ್ಟಿ, ಐಶಾನಿ ಶೆಟ್ಟಿ ಟೀಂ ಜೊತೆ ಯೋಗರಾಜ್ ಭಟ್ರು ವಿಮಾನ ಏರಲಿದ್ದಾರೆ. ಭಟ್ರು ಹಿಂದಿನ ತಮ್ಮ ಸಿನಿಮಾಗಳಿಗೆ ಫಾರಿನ್ ನಲ್ಲಿ ಶೂಟಿಂಗ್ ಮಾಡೋ ಮನಸ್ಸು ಮಾಡಿರಲಿಲ್ಲ. ಇನ್ನು ರಕ್ಷಿತ್ ಶೆಟ್ಟಿ ಕೂಡ ಶೂಟಿಂಗಾಗಿ ಮೊದಲ ಬಾರಿ ಫಾರಿನ್ ಗೆ ಹಾರ್ತಿದ್ದಾರೆ. ಚಿತ್ರದ ಮೂವತ್ತು ಪರ್ಸೆಂಟ್ ಚಿತ್ರೀಕರಣ ಸ್ವಿಟ್ಜರ್ಲೆಂಡ್ ನಲ್ಲೇ ಇರಲಿದೆಯಂತೆ. [ವಾಸ್ತು ಪ್ರಕಾರ ಬಣ್ಣ ಹಚ್ಚಿದ 'ಬ್ರಹ್ಮಾಂಡ' ಬಾಬು]

Yograj Bhat

ಇನ್ನು ಭಟ್ರು ಮತ್ತೊಮ್ಮೆ 'ವಾಸ್ತು ಪ್ರಕಾರ' ಹೀರೋಯಿನ್ ಬದಲಾವಣೆ ಮಾಡಿದ್ದಾರೆ. ಇಲ್ಲಿಯವರೆಗೂ ಜಗ್ಗೇಶ್ ಗೆ ಜೋಡಿ ನಿಖಿತಾ ತುಕ್ರಲ್ ಅನ್ನೋ ವಿಷಯ ಫಿಕ್ಸ್ ಆಗಿತ್ತು. ಈಗ ನಿಖಿತಾ ಸ್ಥಾನಕ್ಕೆ ಪಾರುಲ್ ಬಂದಿದ್ದಾರೆ. ಜಗ್ಗೇಶ್ ಗೆ ಮೊದಲಬಾರಿಗೆ ಜೋಡಿಯಾಗ್ತಿದ್ದಾರೆ ಪಾರುಲ್.

ಭಟ್ರ ಟೀಂನಲ್ಲಿ ಕೊನೇ ಕ್ಷಣದವರೆಗೂ ಬದಲಾವಣೆಗಳಾಗ್ತಿವೆ. ಕೇಳಿದ್ರೆ... ವಾಸ್ತುಪ್ರಕಾರ ಎಲ್ಲವೂ ಆಗ್ಬೇಕಲ್ವಾ ಅನ್ನೋ ಉತ್ತರವನ್ನ ಭಟ್ರು ಕೊಡಬಹುದು ಏನಂತೀರಾ?

English summary
Yograj Bhat's latest Kannada film Vaastu Prakara will be shot in Switzerland. This is Bhat's first film to be shot abroad. The film was earlier planned to be shot in Malaysia. Along with Yograj Bhat technicians, actors will be flying to Switzerland from Bangalore. Bon Voyage to you all. 
Please Wait while comments are loading...