For Quick Alerts
  ALLOW NOTIFICATIONS  
  For Daily Alerts

  ವಿಜಯ್‌ ನಮ್ಮ ಹಳ್ಳಿ ಹುಡ್ಗ, ಸರ್ಕಾರಿ ಗೌರವ ಸಿಗಬೇಕು: ವೈಎಸ್‌ವಿ ದತ್ತಾ

  |

  ಸಂಚಾರಿ ವಿಜಯ್ ನಮ್ಮ ಕ್ಷೇತ್ರದ ಹಳ್ಳಿ ಹುಡುಗ. ರಾಷ್ಟ್ರ ಪ್ರಶಸ್ತಿ ಬಂದಾಗ ದೊಡ್ಡದಾಗಿ ಸಂಭ್ರಮಿಸಿದ್ರಿ. ನಾನೇ ಖುದ್ದು ಸನ್ಮಾನ ಮಾಡಿದ್ದೆ. ಆದರೆ ಈ ದಿನ ನನಗೆ ತುಂಬಾ ನೋವು ಉಂಟಾಗಿದೆ ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

  ರಾಷ್ಟ್ರಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಗೆ ಸರ್ಕಾರಿ ಗೌರವ ಸಿಗಬೇಕು ಎಂದ ವೈಎಸ್ ವಿ ದತ್ತಾ | Filmibeat Kannada

  ಅಪಘಾತದಲ್ಲಿ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿರುವ ಪರಿಣಾಮ ನಟ ಸಂಚಾರಿ ವಿಜಯ್ ಕೋಮಾ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದು, ಬದುಕಿ ಬರುವ ಸಾಧ್ಯತೆ ಬಹುತೇಕ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

  ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣ

  ಈ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭೇಟಿ ನೀಡಿ ವಿಜಯ್ ಪರಿಸ್ಥಿತಿ ವಿಚಾರಿಸುತ್ತಿದ್ದಾರೆ.

  ಕಡೂರು ಕ್ಷೇತ್ರ ಮಾಜಿ ಶಾಸಕರು ವೈಎಸ್‌ವಿ ದತ್ತಾ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಒನ್‌ಇಂಡಿಯಾ ಕನ್ನಡದ ಜೊತೆ ಮಾತನಾಡಿದ ದತ್ತಾ 'ಸಂಚಾರಿ ವಿಜಯ್ ಬೆಳಗ್ಗೆ ನಮ್ಮ ಜೊತೆ ಇರ್ತಾರೆ ಎನ್ನುವುದು ಅನುಮಾನ. ತೀರಾ ನೋವಿನ ಸಂಗತಿ. ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡ್ತೇನೆ, ವಿಜಯ್‌ಗೆ ಸರ್ಕಾರಿ ಗೌರವ ಕೊಡಬೇಕು. ರಾಷ್ಟ್ರ ಪ್ರಶಸ್ತಿ ಪಡೆದಿರುವ ಹಳ್ಳಿ ಪ್ರತಿಭೆ'' ಎಂದು ತಿಳಿಸಿದರು.

  ವೆಂಟಿಲೇಟರ್‌ನಲ್ಲಿ ಉಸಿರಾಟ ನಡೆಸುತ್ತಿರುವ ಸಂಚಾರಿ ವಿಜಯ್ ಇನ್ನಿಲ್ಲ ಎಂದು ವೈದ್ಯರು ಖಚಿತಪಡಿಸಿಲ್ಲ. ಆದರೆ, ಕುಟುಂಬ ಮತ್ತು ಸ್ನೇಹಿತರು ವಿಜಯ್ ಮತ್ತೆ ಬರಲ್ಲ ಎಂದು ನಿರ್ಧರಿಸಿ ಮುಂದಿನ ಕಾರ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

  ಕಾರು ಮಾರಿ ಜನರಿಗೆ ಸೇವೆ ಮಾಡೋಣ ಎಂದಿದ್ದ ಸಂಚಾರಿ ವಿಜಯ್: ಜಗ್ಗೇಶ್ಕಾರು ಮಾರಿ ಜನರಿಗೆ ಸೇವೆ ಮಾಡೋಣ ಎಂದಿದ್ದ ಸಂಚಾರಿ ವಿಜಯ್: ಜಗ್ಗೇಶ್

  ಈ ಬಗ್ಗೆ ಮಾತನಾಡಿದ ವೈಎಸ್‌ವಿ ದತ್ತಾ 'ಅನಾಹುತ ಅಗೋಗಿದೆ, ಕುಟುಂಬದವರು ದೇಹದ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ನಟ. ಈ ಪ್ರಕ್ರಿಯೆ ರಾತ್ರಿವರೆಗೂ ನಡೆಯುತ್ತದೆ. ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನಂತರ ಕಡೂರು ಕ್ಷೇತ್ರದ ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತಿಮ ಕಾರ್ಯ ನೆರವೇರಸಲಾಗುತ್ತದೆ'' ಎಂದು ತಿಳಿಸಿದರು.

  English summary
  Kadur Ex MLA YSV Datta urges Govt to to provide Full State Honors to Sanchari Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X