For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್‌ ತಿಂಗಳು ಒಟಿಟಿಯಲ್ಲಿ ನೋಡಬಹುದಾದ 8 ಚಿತ್ರಗಳು

  |

  ಕೋವಿಡ್ ಎರಡನೇ ಅಲೆಯ ಭೀತಿ ಕಡಿಮೆಯಾಗುತ್ತಿದ್ದಂತೆ ದೇಶದಾದ್ಯಂತ ಚಿತ್ರಮಂದಿರಗಳು ತೆರೆದಿದೆ. ಥಿಯೇಟರ್ ತೆರೆಯಲಿ ಎಂದು ಕಾದಿದ್ದ ನಿರೀಕ್ಷೆಯ ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿ ಚಿತ್ರಮಂದಿರ ಕಾಯ್ದಿರಿಸಿವೆ. ಥಿಯೇಟರ್ ತೆರೆದರೂ ಒಟಿಟಿ ವೇದಿಕೆಗಳು ಕೆಲವು ನಿರೀಕ್ಷೆಯ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.

  ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಜೀ5, ಡಿಸ್ನಿ ಹಾಟ್‌ಸ್ಟಾರ್ ಅಂತಹ ಜನಪ್ರಿಯ ಒಟಿಟಿ ಚಾನಲ್‌ಗಳು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳನ್ನು ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಮಾಡುತ್ತಿವೆ. ಬಾಲಿವುಡ್‌ನ ನಿರೀಕ್ಷಿತ ಚಿತ್ರಗಳೊಂದಿಗೆ ಕೆಲವು ಅಂತಾರಾಷ್ಟ್ರೀಯ ವೆಬ್‌ಸಿರೀಸ್‌ಗಳು ಸಾಲಿನಲ್ಲಿವೆ. ಅಕ್ಟೋಬರ್‌ನಲ್ಲಿ ಪ್ರೀಮಿಯರ್ ಕಾಣಲಿರುವ ಪ್ರಮುಖ ಚಿತ್ರಗಳು ಯಾವುದು? ಯಾವ ಚಾನಲ್‌ನಲ್ಲಿ ಯಾವ ಸಿನಿಮಾ ನೋಡಬಹುದು ಎಂಬ ವಿವರ ಇಲ್ಲಿದೆ. ಮುಂದೆ ಓದಿ...

  ಜೀ5ನಲ್ಲಿ ರಶ್ಮಿ ರಾಕೆಟ್

  ಜೀ5ನಲ್ಲಿ ರಶ್ಮಿ ರಾಕೆಟ್

  ಬಾಲಿವುಡ್ ನಟಿ ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಶ್ಮಿ ರಾಕೆಟ್ ಸಿನಿಮಾ ಅಕ್ಟೋಬರ್ 15 ರಂದು ಜೀ5 ಒಟಿಟಿಯಲ್ಲಿ ಪ್ರೀಮಿಯರ್ ಕಾಣುತ್ತಿದೆ. ಇದೊಂದು ಕ್ರೀಡಾಪಟು ಆಧರಿತ ಚಿತ್ರವಾಗಿದ್ದು, ಆಕರ್ಶ್ ಖುರಾನಾ ನಿರ್ದೇಶನ ಮಾಡಿದ್ದಾರೆ. ತಾಪ್ಸಿ ಜೊತೆ ಪ್ರಿಯಾಂಶು ಪೈನ್ಯುಲಿ, ಅಭಿಷೇಕ್ ಬ್ಯಾನರ್ಜಿ, ಶ್ವೇತಾ ತ್ರಿಪಾಠಿ ಮತ್ತು ಸುಪ್ರಿಯಾ ಪಾಠಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  'ಬಾಹುಬಲಿ' ವೆಬ್ ಸರಣಿ ಎಲ್ಲಿವರೆಗೂ ಬಂದಿದೆ? ನಿರ್ದೇಶಕ ಸ್ಪಷ್ಟನೆ'ಬಾಹುಬಲಿ' ವೆಬ್ ಸರಣಿ ಎಲ್ಲಿವರೆಗೂ ಬಂದಿದೆ? ನಿರ್ದೇಶಕ ಸ್ಪಷ್ಟನೆ

  ಹಾಟ್‌ಸ್ಟಾರ್‌ನಲ್ಲಿ Shiddat

  ಹಾಟ್‌ಸ್ಟಾರ್‌ನಲ್ಲಿ Shiddat

  ಸನ್ನಿ ಕೌಶಲ್, ಮೋಹಿತ್ ರೈನಾ, ರಾಧಿಕಾ ಮದನ್ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'Shiddat' ಸಿನಿಮಾ ಅಕ್ಟೋಬರ್ 1 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡಿದೆ. ಕುನಾಲ್ ದೇಶಮುಖ್ ಈ ಚಿತ್ರ ನಿರ್ದೇಶಿಸಿದ್ದು ಮ್ಯಾಡಾಕ್ ಫಿಲಂಸ್ ಸಂಸ್ಥೆ ನಿರ್ಮಿಸಿವೆ. ಇದು ರೋಮ್ಯಾಂಟಿಕ್ ಕಥಾಹಂದರ ಹೊಂದಿದ್ದು, ಎಮೋಷನಲ್ ಪ್ರೇಮಕಥೆಯಾಗಿದೆ.

  ಬ್ರೇಕ್ ಪಾಯಿಂಟ್

  ಬ್ರೇಕ್ ಪಾಯಿಂಟ್

  ಖ್ಯಾತ ಭಾರತದ ಟೆನ್ನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರ ಬಾಲ್ಯ ಹಾಗೂ ವೃತ್ತಿ ಜೀವನ ಆಧರಿಸಿ ತಯಾರಾಗಿರುವ 'ಬ್ರೇಕ್ ಪಾಯಿಂಟ್' ವೆಬ್ ಸರಣಿ ಅಕ್ಟೋಬರ್ 1 ರಿಂದ ಜೀ 5ನಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಏಳು ಭಾಗಗಳ ಸಾಕ್ಷ್ಯಚಿತ್ರವಾಗಿದ್ದು, ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ನಡುವಿನ ಸ್ನೇಹ, ಬಾಲ್ಯ ಹಾಗೂ ವೃತ್ತಿಜೀವನದ ರೋಚಕ ಕಥೆ ಹೇಳಲಾಗಿದೆ.

  ಗೇಮಿಂಗ್‌ನತ್ತ ಹೊರಟ ನೆಟ್‌ಫ್ಲಿಕ್ಸ್‌: ದೊಡ್ಡ ಒಪ್ಪಂದಕ್ಕೆ ಸಹಿಗೇಮಿಂಗ್‌ನತ್ತ ಹೊರಟ ನೆಟ್‌ಫ್ಲಿಕ್ಸ್‌: ದೊಡ್ಡ ಒಪ್ಪಂದಕ್ಕೆ ಸಹಿ

  ಸರ್ದಾರ್ ಉದ್ಧಮ್

  ಸರ್ದಾರ್ ಉದ್ಧಮ್

  ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉದ್ಧಮ್ ಚಿತ್ರವೂ ಈ ವರ್ಷದ ಭಾರಿ ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ತನ್ನ ದೇಶವಾಸಿಗಳ ಸಾವಿಗೆ ಬ್ರಿಟಿಷ್ ವಿರುದ್ಧ ಸೇಡು ತೀರಿಸಿಕೊಳ್ಳುವ ವ್ಯಕ್ತಿಯ ಬಗ್ಗೆ ಈ ಚಿತ್ರ ತಯಾರಾಗಿದ್ದು, ವಿಕ್ಕಿ ಕೌಶಲ್ ವೀರನಾಗಿ ಮಿಂಚಿದ್ದಾರೆ. ಅಕ್ಟೋಬರ್ 16ಕ್ಕೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ.

  ಅಕ್ಟೋಬರ್ 14ಕ್ಕೆ ಜ್ಯೋತಿಕಾ ಸಿನಿಮಾ

  ಅಕ್ಟೋಬರ್ 14ಕ್ಕೆ ಜ್ಯೋತಿಕಾ ಸಿನಿಮಾ

  ಜ್ಯೋತಿಕಾ ಮತ್ತು ನಟ ಶಶಿಕುಮಾರ್ ನಟನೆಯ ಉದನ್‌ಪಿರಪ್ಪೆ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಾಣುತ್ತಿದೆ. ಅಕ್ಟೋಬರ್ 14 ರಂದು ಈ ಸಿನಿಮಾ ಎಕ್ಸ್‌ಕ್ಲೂಸಿವ್ ಆಗಿ ಪ್ರೀಮಿಯರ್ ಕಾಣಲಿದೆ.

  ಲಿಟಲ್ ಥಿಂಗ್ 4 & ಯೂ ಸೀಸನ್ 3

  ಲಿಟಲ್ ಥಿಂಗ್ 4 & ಯೂ ಸೀಸನ್ 3

  ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ಯಶಸ್ವಿ ವೆಬ್‌ ಸರಣಿಗಳು ಈ ತಿಂಗಳು ಪ್ರದರ್ಶನ ಕಾಣಲಿದೆ. 'ಯೂ ಸೀಸನ್' ಮೂರನೇ ಭಾಗ ಅಕ್ಟೋಬರ್ 15 ರಂದು ಪ್ರೀಮಿಯರ್ ಆಗಲಿದೆ. 'ಲಾಕ್ ಅಂಡ್ ಕೀ ಸೀಸನ್ 2' ಅಕ್ಟೋಬರ್ 22ಕ್ಕೆ ಪ್ರದರ್ಶನವಾಗಲಿದೆ. 'ದಿ ಗಿಲ್ಟ್' ಅಕ್ಟೋಬರ್ 1ಕ್ಕೆ ಪ್ರೀಮಿಯರ್ ಆಗಿದೆ. ಲಿಟಲ್ ಥಿಂಗ್ ಸೀಸನ್ 4 ಅಕ್ಟೋಬರ್ 15 ರಂದು ಪ್ರೀಮಿಯರ್ ಆಗಲಿದೆ. ಈ ಎಲ್ಲಾ ವೆಬ್ ಸರಣಿಗಳು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

  English summary
  Sardar Udham, Rashmi Rocket, You Season 3 & More new movies to watch in ott in october month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X