For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ನಿರೂಪಣೆ, ಟಾಕ್ ಶೋ ಬಳಿಕ ಹೊಸ ಸಾಹಸದತ್ತ ಸಮಂತಾ

  |

  ಕೊರೊನಾ ಸಮಯದಲ್ಲೂ ನಟಿ ಸಮಂತಾ ಸುಮ್ಮನೆ ಮನೆಯಲ್ಲಿ ಕುಳಿತಿರಲಿಲ್ಲ. ಸಾಕಷ್ಟು ವಿವಿಧ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ಹೊಸ ಪ್ರಯತ್ನಗಳಿಗೆ ಸಹ ಈ ವರ್ಷ ಕೈಹಾಕಿ ಯಶಸ್ಸನ್ನೂ ಗಳಿಸಿದರು.

  ಯೂಟ್ಯೂಬ್‌ನಲ್ಲಿ ಫಿಟ್‌ನೆಸ್ ತರಬೇತಿ ನೀಡಿದರು. ಗೆಳತಿ, ಚಿರಂಜೀವಿ ಸೊಸೆ ಉಪಾಸನಾ ಜೊತೆ ಸೇರಿ ಅಡುಗೆ ಮಾಡಿದ್ದು ಸಹ ಸುದ್ದಿಯಾಯಿತು. ಮಾವ ನಾಗಾರ್ಜುನ್ ಅಣತಿಯಂತೆ ಮೊದಲ ಬಾರಿಗೆ ಬಿಗ್‌ಬಾಸ್ ಶೋ ನಿರೂಪಣೆ ಮಾಡಿ ಜನ ಮೆಚ್ಚುಗೆ ಪಡೆದರು.

  ಆಹಾ ಒಟಿಟಿಗಾಗಿ 'ಸ್ಯಾಮ್-ಜ್ಯಾಮ್' ಟಾಕ್ ಶೋ ನಡೆಸಿ, ತೆಲುಗಿನ ಟಾಪ್ ನಾಯಕ ನಟ-ನಟಿಯರನ್ನು ಸಂದರ್ಶನ ಮಾಡಿದರು. ಅದೇ ಶೋ ಮೂಲಕ ಕೆಲವರಿಗೆ ಸಹಾಯವನ್ನೂ ಮಾಡಿದರು. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ನಟಿ ಸಮಂತಾ.

  ಸಮಂತಾ ಒಟಿಟಿಯತ್ತ ಮುಖ ಮಾಡಿದ್ದಾರೆ. ಹೌದು, ಮೊದಲ ಬಾರಿಗೆ ನಟಿ ಸಮಂತಾ ಒಟಿಟಿಯ ವೆಬ್ ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ.

  'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯ ಎರಡನೇ ಸೀಸನ್‌ನಲ್ಲಿ ನಟಿ ಸಮಂತಾ ನಟಿಸುತ್ತಿದ್ದಾರೆ. ಇದೇ ಸರಣಿಯ ಮೊದಲ ಸೀಸನ್‌ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಎರಡನೇ ಸೀಸನ್‌ ಫೆಬ್ರವರಿಯಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

  ವೆಬ್ ಸರಣಿಯಲ್ಲಿ ಸಖತ್ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಸಮಂತಾ. ಖಡಕ್ ತನಿಖಾಧಿಕಾರಿ ಪಾತ್ರವನ್ನು ಸಮಂತಾ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಸಹ ವೆಬ್ ಸರಣಿಯ ಪಾತ್ರವನ್ನು ಸಖತ್ ಎಂಜಾಯ್ ಮಾಡುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದರು.

  ದಿ ಫ್ಯಾಮಿಲಿ ಮ್ಯಾನ್ ಮೊದಲ ಸೀಸನ್‌ನಲ್ಲಿ ಮನೋಜ್ ಭಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅವರೊಟ್ಟಿಗೆ ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದರು. ಎರಡನೇ ಸೀಸನ್‌ನಲ್ಲಿ ಈ ಇಬ್ಬರೂ ಅದೇ ಪಾತ್ರಗಳಲ್ಲಿ ಮುಂದುವರೆಯಲಿದ್ದಾರೆ.

  English summary
  Actress Samantha Akkineni acting in web series 'The Family Man'. This is her first ever web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X